ಭಾನುವಾರ, ಸೆಪ್ಟೆಂಬರ್ 22, 2019
23 °C

ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಕರುಣಾನಿಧಿ

Published:
Updated:
ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಕರುಣಾನಿಧಿ

ಚೆನ್ನೈ : ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಅವರು ಮೊಮ್ಮಗನ ವಿವಾಹ ಸಮಾರಂಭದಲ್ಲಿ ಸೋಮವಾರ ಭಾಗವಹಿಸುವ ಮೂಲಕ ಒಂದು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡರು.

93 ವರ್ಷದ ಕರುಣಾನಿಧಿ ಅವರು ಕಳೆದ ವರ್ಷ ಆಸ್ಪತ್ರೆಯಿಂದ ಮರಳಿದ ಬಳಿಕ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಅವರು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮೊಮ್ಮಗ ಮನುರಂಜಿತ್‌ ಹಾಗೂ ಖ್ಯಾತ ತಮಿಳು ನಟ ವಿಕ್ರಂ ಅವರ ಮಗಳು ಅಕ್ಷಿತಾ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ದಂಪತಿಗೆ ಶುಭಕೋರಿದರು.

2010ರಿಂದಲೂ ಗಾಲಿ ಕುರ್ಚಿ ಬಳಸುವ ಕರುಣಾನಿಧಿ ಅವರು ಅಕ್ಟೋಬರ್‌ 2016ರ ನಂತರ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ವೈದ್ಯರ ಸಲಹೆಯಂತೆ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

Post Comments (+)