ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಟಿಕೆಟ್‌: ತೃತೀಯ ಲಿಂಗ ನಮೂದು

Last Updated 30 ಅಕ್ಟೋಬರ್ 2017, 19:36 IST
ಅಕ್ಷರ ಗಾತ್ರ

ನವದೆಹಲಿ: ರೈಲ್ವೆ ಮಂಡಳಿಯು ಟಿಕೆಟ್ ಕಾಯ್ದಿರಿಸುವ ಅರ್ಜಿಯಲ್ಲಿ ಇನ್ನುಮುಂದೆ ಪುರುಷ('M'), ಮಹಿಳೆ ('F') ರೀತಿಯಲ್ಲಿಯೇ ತೃತೀಯಲಿಂಗಿ(M/F) ಬದಲು ಕೇವಲ 'T' ಎನ್ನುವ ಆಯ್ಕೆ ನಮೂದಿಸಲಿದೆ.

ಪ್ರಸ್ತುತ ಟಿಕೆಟ್ ಕಾಯ್ದಿರಿಸುವಿಕೆ/ರದ್ದತಿ ಅರ್ಜಿಗಳಲ್ಲಿ ‘ತೃತೀಯಲಿಂಗಿ (M/F)’ ಎನ್ನುವ ಆಯ್ಕೆ ಇದೆ. ಆದರೆ ಇದನ್ನು 'T' ಎಂದು ಬದಲಾಯಿಸಲು ರೈಲ್ವೆ ಮಂಡಳಿ ಎಲ್ಲಾ ವಲಯಗಳಿಗೆ ಪತ್ರ ರವಾನಿಸಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತೃತೀಯಲಿಂಗಿಗಳಿಗೆ ಸಂಬಂಧಪಟ್ಟಂತೆ ವಿವಿಧ ವಿಷಯಗಳನ್ನು ಪರಿಶೀಲಿಸುತ್ತಿದೆ. ತೃತೀಯಲಿಂಗಿಗಳು ಮಸೂದೆ, 2016 ಅನ್ನು ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆ ನಡೆಸುತ್ತಿದೆ.

ಈ ಕುರಿತು ಸಚಿವಾಲಯ ಅಂತಿಮ ನಿರ್ಣಯ ಕೈಗೊಳ್ಳುವವರೆಗೆ ತೃತೀಯಲಿಂಗಿಗಳು 'T' ಆಯ್ಕೆ ಬಳಸಲು ಸಾಧ್ಯವಾಗುವಂತೆ ನಿಯಮ ರೂಪಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT