7

ತಾಕತ್ತಿದ್ದರೆ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಎಂದು ಕಣ್ಣೀರು ಹಾಕಿದ ಮಂಗಳೂರು ನಗರ ಪಾಲಿಕೆ ಮೇಯರ್

Published:
Updated:
ತಾಕತ್ತಿದ್ದರೆ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಎಂದು ಕಣ್ಣೀರು ಹಾಕಿದ ಮಂಗಳೂರು ನಗರ ಪಾಲಿಕೆ ಮೇಯರ್

ಮಂಗಳೂರು: ಮಂಗಳೂರು ನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಅವರು ತಮ್ಮ ಫ್ಲ್ಯಾಟ್ ನ ಸೆಕ್ಯುರಿಟಿ ಗಾರ್ಡ್ ಮಗುವಿನ  ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಿ ವಿರೋಧ ಪಕ್ಷದ ಬಿಜೆಪಿ ಸದಸ್ಯರು ಪಾಲಿಕೆ ಸಭೆ ನಡೆಯಲು ಅವಕಾಶ ನೀಡದೇ ಇದ್ದಾಗ, ಕಟೀಲು ದುರ್ಗಾ ಪರಮೇಶ್ವರಿ ಮೇಲೆ ಆಣೆ ಇಟ್ಟು ಕಣ್ಣೀರು ಹಾಕಿದ ಘಟನೆ ಮಂಗಳವಾರ ನಡೆಯಿತು.

ವಿರೋಧ ಪಕ್ಷದವರು ಧರಣಿ ಆರಂಭಿಸಿದ್ದರಿಂದ ೧೦.೩೦ಕ್ಕೆ ಆರಂಭವಾಗಬೇಕಿದ್ದ ಸಭೆ ಆರಂಭ ಆಗಲಿಲ್ಲ. ಮೇಯರ್ ಡೌನ್ ಡೌನ್ ಎಂದು ಕೂಗುತ್ತ ಮೇಯರ್ ಪೀಠದ ಎದುರು ಜಮಾಯಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ತಾಕತ್ತಿದ್ದರೆ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡುವಂತೆ ವಿರೋಧ ಪಕ್ಷಕ್ಕೆ ಸವಾಲು ಹಾಕಿದರು.

ತನ್ನನ್ನು ಮೇಯರ್ ಆಗಿ ನೋಡದೆ ಓರ್ವ ತಾಯಿಯಾಗಿ ನೋಡಬೇಕು ಎಂದು ಭಿನ್ನವಿಸಿಕೊಂಡರು. ಫ್ಲ್ಯಾಟ್ ನ ಸಿಸಿ ಟಿವಿ ಫೂಟೇಜ್ ಪರಿಶೀಲಿಸಬೇಕು. ಯಾರ ಮೇಲೂ ತಾನು ಹಲ್ಲೆ ಮಾಡಿಲ್ಲ ಎಂದು ನಿರಂತರವಾಗಿ ಸಮಜಾಯಿಷಿ ‌ನೀಡುತ್ತ ಕಣ್ಣೀರು ಹಾಕಿದರು.

ಕಾಂಗ್ರೆಸ್‌ ಸದಸ್ಯರು ಡೌನ್ ಡೌನ್ ಬಿಜೆಪಿ ಎಂದು ಪ್ರತಿ ಧರಣಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry