ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ

7

ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ

Published:
Updated:

ಭರಮಸಾಗರ : ಸ್ತ್ರೀ ಶಕ್ತಿ ಸಂಘದ ಸದಸ್ಯರು  ಸಂಘಟಿತರಾಗಿ ಸರ್ಕಾರದ ಯೊಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದರು.

ದೊಡ್ಡಪೇಟೆ ಶಿವಯೋಗಿ ಮಂದಿರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೋಗುಂಡೆ, ಸಮುದಾಯ ಆರೋಗ್ಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಆರೋಗ್ಯ ಜಾಗೃತಿ ಅರಿವು ಮೂಡಿಸು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ಬೀದಿಬದಿಯ ಕರಿದ ಪದಾರ್ಥಗಳನ್ನು ಸೇವಿಸಿದರೆ  ಪೌಷ್ಟಿಕತೆ ಸಿಗುವುದಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಮಾನಸಿಕ ಆರೋಗ್ಯ ಮೇಲ್ವಿಚಾರಕಿ ಸುನಿತಾ ಮಾತನಾಡಿ, ಮಹಿಳೆಯರು ಖಿನ್ನತೆಯಿಂದ ಹೊರಬರಬೇಕು. ಮಕ್ಕಳನ್ನು ಆದಷ್ಟು ಮೊಬೈಲ್‌ನಿಂದ ದೂರವಿರಿಸಬೇಕು ಎಂದರು. ಚಿಕಿತ್ಸೆ ಹಾಗೂ  ಮಾಹಿತಿಗೆ ಜಿಲ್ಲಾ ಮನೋವೈದ್ಯರಾದ ಡಾ. ಮಂಜುನಾಥ್  ಅವರನ್ನು  9632220153 ಅವರನ್ನು ಸಂಪರ್ಕಿಸಬಹುದು.

ಮೇಲ್ವಿಚಾರಕ ಖಾಸೀಂ ಸಾಹೇಬರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ವಿ.ಶರಣಪ್ಪ ವಹಿಸಿದ್ದರು. ತಾಲೂಕ್ ಪಂಚಾಯ್ತಿ ಸದಸ್ಯ ಕಲ್ಲೇಶ್ ಹಿರಿಯ ಹಾಗೂ ಕಿರಿಯ ಆರೋಗ್ಯ ಕಾರ್ಯಕರ್ತರು ಅಂಗನವಾಡಿ ಆಶಾ ಕಾರ್ಯಕರ್ತರು, ಮಹಿಳಾ ಸಂಘದ ಸದಸ್ಯರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry