ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯರ್‌ಲೆಸ್‍‍ ಹೆಡ್‌ಫೋನ್‌ನಲ್ಲಿ ಹೊಸತೇನು?!

Last Updated 31 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಜಾಗತಿಕ ಮಾರುಕಟ್ಟೆಯಲ್ಲಿ ಹೊಸದಾಗಿ ಬರುತ್ತಿರುವ ಬಹುತೇಕ ಸ್ಮಾರ್ಟ್ ಫೋನ್‍‍ ಗಳಲ್ಲಿ ಈಗ ಹೆಡ್‍‍ ಫೋನ್ ಜಾಕ್‍‍ ಇರುವುದಿಲ್ಲ. ಬಹುತೇಕ ಸ್ಮಾರ್ಟ್‍‍ ಫೋನ್‍‍ ತಯಾರಕರು ಸ್ಮಾರ್ಟ್ ಫೋನ್‍‍ ಅನ್ನು ಆದಷ್ಟೂ ತೆಳುವಾಗಿಸುವ ಕಾರಣದಿಂದ ಹೆಡ್‍‍ ಫೋನ್‍‍ ಜಾಕ್‍‍ ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಈಗೇನಿದ್ದರೂ ವಯರ್ ಲೆಸ್‍‍ ಹೆಡ್ ಫೋನ್ ಗಳ ಜಮಾನ.

ನೀವು ಓಡುತ್ತಿರುವಾಗ, ಜಿಮ್‍ ನಲ್ಲಿ ಕಸರತ್ತು ಮಾಡುತ್ತಿರುವಾಗ, ಸುಮ್ಮನೆ ನಡೆದು ಹೋಗುತ್ತಿರುವಾಗ ಸಂಗೀತ ಆಲಿಸಲು ವಯರ್ ಇರುವ ಹೆಡ್‍‍ ಫೋನ್ ಗಳಿಗಿಂತ ವಯರ್ ಲೆಸ್‍‍ ಹೆಡ್‍‍ ಫೋನ್‍ ಗಳೇ ಹೆಚ್ಚು ಅನುಕೂಲಕರ. ವಯರ್ ಲೆಸ್‍‍ ಹೆಡ್ ಫೋನ್‍‍ ಗಳಿಂದ ವಯರ್ ನ ಕಿರಿಕಿರಿ ಇಲ್ಲದೆ ಸಂಗೀತ ಆಲಿಸಬಹುದು.

ಕೆಲ ವರ್ಷಗಳ ಹಿಂದೆ ಬರುತ್ತಿದ್ದ ವಯರ್ ಲೆಸ್‍‍ ಹೆಡ್‍‍ ಫೋನ್‍‍ಗಳಲ್ಲಿ ಧ್ವನಿ ಸರಿಯಾಗಿ ಕೇಳಿಸುವುದಿಲ್ಲ ಎಂಬ ದೂರಿತ್ತು. ಇದಕ್ಕೆ ಕಾರಣವೂ ಇತ್ತು. ಹಿಂದೆ ಬ್ಲೂಟೂತ್ ನ ಸಹಾಯದಿಂದ ಕೆಲಸ ಮಾಡುತ್ತಿದ್ದ ಈ ವಯರ್ ಲೆಸ್ ಹೆಡ್ ಫೋನ್ ಗಳಲ್ಲಿ 'ಶಾರ್ಟ್ ರೇಂಜ್‍‍' ತಂತ್ರಜ್ಞಾನ ಬಳಕೆಯಾಗುತ್ತಿತ್ತು. ಡಿವೈಸ್ ಗೂ ಹೆಡ್‍‍ ಫೋನ್‍‍ ಗೂ ಇರುವ ಅಂತರ ಹೆಚ್ಚಾದರೆ ಹೆಡ್‍‍ ಫೋನ್‍ ನಲ್ಲಿ ಧ್ವನಿ ಸರಿಯಾಗಿ ಕೇಳಿಸುತ್ತಿರಲಿಲ್ಲ. ಆದರೆ, ಈಗ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ.

'ಈಗ ಮಾರುಕಟ್ಟೆಗೆ ಅತ್ಯುತ್ತಮ ಹೆಡ್‍‍ ಫೋನ್‍‍ ಗಳು ಬಂದಿವೆ. ಆದರೆ, ಇದಕ್ಕಾಗಿ ನೀವು ಸ್ವಲ್ಪ ಹೆಚ್ಚೇ ಹಣ ತೆರಬೇಕಾಗುತ್ತದೆ. ಉತ್ತಮ ಹೆಡ್ ಫೋನ್ ಗಳ ಬೆಲೆಯೂ ಹೆಚ್ಚಾಗಿಯೇ ಇರುತ್ತದೆ. ಹೊಸ ತಂತ್ರಜ್ಞಾನದಿಂದ ತಯಾರಾಗಿರುವ ಹೆಡ್‍‍ ಫೋನ್‍‍ ಗಳು ಉತ್ತಮ ಧ್ವನಿ ವಾಹಕಗಳಾಗಿವೆ' ಎನ್ನುತ್ತಾರೆ 'ದಿ ವಯರ್ ಕಟ್ಟರ್‍‍'ನ ತಾಂತ್ರಿಕ ವಿಶ್ಲೇಷಕ ಲಾರೆನ್‍‍ ಡ್ರಾಗನ್.

'ಹೊಸ ಬ್ಲ್ಯೂಟೂತ್ 5.0 ವರ್ಷನ್‍ ಹೆಚ್ಚು ವೇಗವಾಗಿ ಮತ್ತು ಸ್ಪಷ್ಟವಾಗಿ ಧ್ವನಿ ಸಂಕೇತಗಳನ್ನು ಡಿವೈಸ್ ನಿಂದ ಹೆಡ್‍‍ ಫೋನ್‍‍ ಗೆ ರವಾನಿಸುತ್ತದೆ. ಹೊಸ ಆ್ಯಪಲ್‍ ಐಫೋನ್‍‍ ಹಾಗೂ ಆಂಡ್ರಾಯ್ಡ್ ಫೋನ್‍‍ ಗಳಿಗೆ ಹೊಂದಿಕೆಯಾಗುವ ಹೆಡ್ ಫೋನ್ ಗಳಲ್ಲಿ ಈ ತಂತ್ರಜ್ಞಾನ ಈಗ ಬಳಕೆಯಾಗುತ್ತಿದೆ. ಉತ್ತಮ ಗುಣಮಟ್ಟದ ಧ್ವನಿ ಕೇಳಲು ಈ ಹೊಸ ವರ್ಷನ್‍‍ ನ ಹೆಡ್ ಫೋನ್ ಗಳು ಉತ್ತಮ' ಎನ್ನುತ್ತಾರೆ ಅವರು.

'ಹೊಸ ವಯರ್ ಲೆಸ್ ಹೆಡ್ ಫೋನ್‍‍ ಗಳು ವ್ಯಾಯಾಮ ಮಾಡುತ್ತಾ, ಓಡುತ್ತಾ, ಸೈಕಲ್ ಓಡಿಸುತ್ತಾ ಸಂಗೀತ ಕೇಳುವವರಿಗೆ ಹೆಚ್ಚು ಆಪ್ತವಾಗುತ್ತವೆ. ಹೆಚ್ಚು ಹಣ ಕೊಟ್ಟು ಖರೀದಿ ಮಾಡಿದ್ದಕ್ಕೂ ಸಾರ್ಥಕ ಎಂಬಂತಿದೆ ಈ ಹೆಡ್‍‍ ಫೋನ್‍‍ ಗಳ ಧ್ವನಿ ಗುಣಮಟ್ಟ' ಎಂಬುದು ಅವರ ಮಾತು.

ಓಡುತ್ತಾ ಹೆಡ್ ಫೋನ್‍‍ ಮೂಲಕ ಸಂಗೀತ ಕೇಳುತ್ತಿರುವಾಗ ಹೊರಗಿನ ಗದ್ದಲ ಕೇಳದಂತೆ 'ನಾಯ್ಸ್ ರೆಡ್ಯೂಸ್' ಮಾಡುವ ತಂತ್ರಜ್ಞಾನ ಹೊಸ ಹೆಡ್ ಫೋನ್ ಗಳಲ್ಲಿದೆ. ಅಲ್ಲದೆ ಹೊಸ ತಂತ್ರಜ್ಞಾನದ ಈ ಹೆಡ್ ಫೋನ್ ಗಳಲ್ಲಿ ಬ್ಯಾಟರಿ ಬಾಳಿಕೆಯ ಗುಣಮಟ್ಟವೂ ಉತ್ತಮವಾಗಿದೆ. ಬ್ಯಾಟರಿಯ ಚಾರ್ಜ್‌ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕಡಿಮೆ ಚಾರ್ಜ್‍‍ ಬಳಸಿಕೊಂಡು ಕಾರ್ಯನಿರ್ವಹಿಸುವ ವ್ಯವಸ್ಥೆ ಹೊಸ ಹೆಡ್ ಫೋನ್ ಗಳಲ್ಲಿದೆ ಎನ್ನುತ್ತಾರೆ ಡ್ರಾಗನ್.

ನೀವೂ ಹೆಡ್‍‍ ಫೋನ್‍‍ ಜಾಕ್ ಇಲ್ಲದ ಸ್ಮಾರ್ಟ್‌ ಫೋನ್ ಖರೀದಿಸಿದ್ದಾರಾ? ಹಾಗಾದರೆ ಬ್ಲೂಟೂತ್ 5.0 ವರ್ಷನ್‍ ಇರುವ ಹೆಡ್‍‍ ಫೋನ್‍‍ ಖರೀದಿ ಮಾಡಿ ಮತ್ತು ಉತ್ತಮ ಗುಣಮಟ್ಟದ ಧ್ವನಿ ಆಲಿಸಿ.- ನ್ಯೂಯಾರ್ಕ್ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT