ಶುಕ್ರವಾರ, ಮಾರ್ಚ್ 5, 2021
30 °C

ಟಾಸ್‌ ಗೆದ್ದ ನ್ಯೂಜಿಲೆಂಡ್‌ ಬೌಲಿಂಗ್‌ ಆಯ್ಕೆ: ಜಯದ ವಿಶ್ವಾಸದಲ್ಲಿ ವಿರಾಟ್‌ ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಸ್‌ ಗೆದ್ದ ನ್ಯೂಜಿಲೆಂಡ್‌ ಬೌಲಿಂಗ್‌ ಆಯ್ಕೆ: ಜಯದ ವಿಶ್ವಾಸದಲ್ಲಿ ವಿರಾಟ್‌ ಪಡೆ

ನವದೆಹಲಿ: ಇಲ್ಲಿನ ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ–ನ್ಯೂಜಿಲೆಂಡ್ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಕಿವೀಸ್‌ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ಭಾರತ 10 ಓವರ್‌ ಮುಕ್ತಾಯಕ್ಕೆ 80 ರನ್‌ ಕಲೆ ಹಾಕಿದೆ. ಆರಂಭಿಕರಾದ ರೋಹಿತ್‌ ಶರ್ಮಾ(25) ಹಾಗೂ ಶಿಖರ್‌ ಧವನ್‌(47) ಕ್ರೀಸ್‌ನಲ್ಲಿದ್ದಾರೆ. ಮೂರು ಪಂದ್ಯಗಳ ಸರಣಿ ಇದಾಗಿದ್ದು, ಟಿ–20 ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಕೇನ್‌ ವಿಲಿಯಮ್ಸನ್‌ ಬಳಗ ಆತಿಥೇಯ ವಿರಾಟ್‌ ಪಡೆಗೆ ಕಠಿಣ ಸವಾಲಾಗುವ ನಿರೀಕ್ಷೆ ಇದೆ.

ರಣಜಿ ಟ್ರೋಫಿಯಲ್ಲಿ ಆಡಿದ್ದ ಹೈದರಾಬಾದ್‌ನ ಯುವ ಬೌಲರ್‌ ಮಹಮ್ಮದ್ ಸಿರಾಜ್‌ಗೆ ಮೊದಲ ಬಾರಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಲಾಗಿದೆ. ಸಿರಾಜ್‌ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚುವ ವಿಶ್ವಾಸ ಹೊಂದಿದ್ದಾರೆ.

ವೇಗವಾಗಿ 9 ಸಾವಿರ ರನ್‌ ಸಿಡಿಸಿದ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ಶಕ್ತಿ. ಏಕದಿನ ಸರಣಿಯಲ್ಲಿ ಉತ್ತಮ ಇನಿಂಗ್ಸ್ ಕಟ್ಟಿದ್ದ ರೋಹಿತ್ ಶರ್ಮಾ ಚುಟುಕು ಮಾದರಿಯಲ್ಲೂ ಮಿಂಚುವ ಭರವಸೆ ಹೊಂದಿದ್ದಾರೆ. ಮಹೇಂದ್ರಸಿಂಗ್ ದೋನಿ ಹಾಗೂ ಧವನ್ ಕಿವೀಸ್ ಎದುರು ಉತ್ತಮವಾಗಿ ಆಡಿದ ದಾಖಲೆ ಹೊಂದಿದ್ದಾರೆ. ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಕೂಡ ಎದುರಾಳಿ ತಂಡಕ್ಕೆ ಸವಾಲಾಗಬಲ್ಲರು.

ಆಶಿಶ್ ನೆಹ್ರಾ ಮುಂದಾಳತ್ವದ ಬೌಲಿಂಗ್ ಪಡೆಯಲ್ಲಿ ಹೊಸ ಆಟಗಾರ ಸಿರಾಜ್‌ಗೆ ಆಡುವ ಬಳಗದಲ್ಲಿ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ. ಜಸ್‌ಪ್ರೀತ್ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್‌ ಅವರ ಮೇಲೆ ಕೊಹ್ಲಿ ಪಡೆ ಹೆಚ್ಚು ಭರವಸೆ ಇರಿಸಿದೆ. ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್‌ ಕೂಡ ಮಿಂಚಬಲ್ಲರು.

ಸವಾಲಿನ ಪಡೆ: ಕಿವೀಸ್ ಬಳಗ ಚುಟುಕು ಕ್ರಿಕೆಟ್‌ನಲ್ಲಿ ಭಾರತಕ್ಕೆ ಕಬ್ಬಿ ಣದ ಕಡಲೆ ಎನಿಸಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್‌, ಶ್ರೀಲಂಕಾ ತಂಡಗಳೊಂದಿಗೆ ಸರಣಿ ಗೆದ್ದಿರುವ ನ್ಯೂಜಿಲೆಂಡ್‌ ಈ ಮಾದರಿಯಲ್ಲಿ ವಿಶ್ವದ ಬಲಾಢ್ಯ ಶಕ್ತಿಯಾಗಿ ಬೆಳೆದಿದೆ. ಭಾರತ ತಂಡ ಕಿವೀಸ್ ಎದುರು ಆಡಿರುವ ಹಿಂದಿನ ಐದು ಪಂದ್ಯಗಳಲ್ಲಿ ಸೋತಿದೆ. ತವರಿನಲ್ಲಿ ಆಡಿದ ಎರಡು ಪಂದ್ಯಗಳಲ್ಲಿಯೂ ನಿರಾಸೆ ಕಾಡಿದೆ.

ಏಕದಿನ ಸರಣಿಯಲ್ಲಿ ಯಶಸ್ವಿ ಬ್ಯಾಟಿಂಗ್ ನಿರ್ವಹಿಸಿದ್ದ ಟಾಮ್ ಲಥಾಮ್‌ ಹಾಗೂ ನಾಯಕ ವಿಲಿ ಯಮ್ಸನ್‌ ಭಾರತದ ಜಯದ ಕನಸಿಗೆ ಪ್ರಮುಖ ಅಡ್ಡಿಯಾಗಬಲ್ಲರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.