ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಬಡ್ಡಿ ದರ ಕಡಿತ

Last Updated 1 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಬಡ್ಡಿ ದರಗಳನ್ನು ಶೇ 0.05ರಷ್ಟು ಕಡಿಮೆ ಮಾಡಿದೆ.

ಒಂದು ವರ್ಷದ ಬಡ್ಡಿ ದರ ಈಗ ಶೇ 8 ರಿಂದ ಶೇ 7.95ಕ್ಕೆ,  ಮೂರು ವರ್ಷಗಳ ದರವು ಶೇ 8.15 ರಿಂದ ಶೇ 8.10ಕ್ಕೆ ಇಳಿಯಲಿದೆ. ಬ್ಯಾಂಕ್‌ ಇದೇ ದರದಲ್ಲಿ ಒಂದು ತಿಂಗಳ, ಮೂರು ತಿಂಗಳ, 6 ತಿಂಗಳ ಮತ್ತು ಎರಡು ವರ್ಷಗಳ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. ಹೊಸ ದರಗಳು ನವೆಂಬರ್‌ 1ರಿಂದಲೇ ಜಾರಿಗೆ ಬಂದಿವೆ.

10 ತಿಂಗಳ ನಂತರ ಬ್ಯಾಂಕ್, ತನ್ನ ಬಡ್ಡಿ ದರ ಕಡಿತಗೊಳಿಸಿದೆ. ಎಸ್‌ಬಿಐನ ಈ ನಿರ್ಧಾರವು ಬ್ಯಾಂಕಿಂಗ್‌ ವಲಯದಲ್ಲಿ ಬಡ್ಡಿ ದರ ಕಡಿತಕ್ಕೆ ಹಾದಿ ಮಾಡಿಕೊಡುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT