‘ಮಜಾ’ ಮುಗೀತು ‘ಕಾಮಿಡಿ‘ ಶುರುವಾಯ್ತು

7

‘ಮಜಾ’ ಮುಗೀತು ‘ಕಾಮಿಡಿ‘ ಶುರುವಾಯ್ತು

Published:
Updated:
‘ಮಜಾ’ ಮುಗೀತು ‘ಕಾಮಿಡಿ‘ ಶುರುವಾಯ್ತು

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಮಜಾ ಟಾಕೀಸ್‌’ ಮುಗಿದಾಗ ಆ ಕಾರ್ಯಕ್ರಮದ ಅಭಿಮಾನಿಗಳಿಗೆ ಬೇಸರವಾಗಿದ್ದು ಸಹಜ. ಆ ಬೇಸರವನ್ನು ನೀಗಿಸಲು ವಾಹಿನಿ ಈಗಾಗಲೇ ಸಿದ್ಧವಾಗಿದೆ. ಮಜಾ ಟಾಕೀಸ್‌ ಮುಗಿದಿರಬಹುದು.ಆದರೆ, ನಮ್ಮ ನೋಡುಗರಿಗೆ ನಿರಂತರವಾಗಿ ಹಾಸ್ಯದ ಮಜಾ ಕೊಡುತ್ತಲೇ ಇರುತ್ತೇವೆ ಎನ್ನುತ್ತಿದೆ ಕಲರ್ಸ್‌ ಕನ್ನಡ. ಇದೇ ಉದ್ದೇಶದಿಂದ ಅದು ನ. 4ರಿಂದ ಮತ್ತೊಂದು ವಾರಾಂತ್ಯದ ಹಾಸ್ಯ ಕಾರ್ಯಕ್ರಮ ಶುರು ಮಾಡಲಿದೆ.

‘ಇದು ಇಡೀ ಕುಟುಂಬದವರು ಕುಳಿತು ನೋಡಬಹುದಾದ ತಿಳಿಹಾಸ್ಯದ ಕಾರ್ಯಕ್ರಮ’ ಎಂದು ವಾಹಿನಿ ಹೇಳಿಕೊಂಡಿದೆ. ಅಂದಹಾಗೆ ಈ ಕಾರ್ಯಕ್ರಮದ ಹೆಸರು ‘ಕಾಮಿಡಿ ಟಾಕೀಸ್‌’. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8ಗಂಟೆಗೆ ಪ್ರಸಾರವಾಗಲಿದೆ.

‘ಕಾಮಿಡಿ ಟಾಕೀಸ್’ ಒಂದು ಹಾಸ್ಯ ಸ್ಫರ್ಧೆ. ಇದರಲ್ಲಿ ನಾಲ್ಕು ಜನರ ಒಟ್ಟು ಆರು ತಂಡಗಳಿವೆ. ಈ ತಂಡಗಳು ‘ಕಾಮಿಡಿ ಟಾಕೀಸ್‌’ನ ಮೆಗಾ ಬಹುಮಾನಕ್ಕಾಗಿ ಸ್ಪರ್ಧಿಸುತ್ತವೆ. ಈಗಾಗಲೇ, ‘ಮಜಾ ಟಾಕೀಸ್’ ಮೂಲಕ ಚಿರಪರಿಚಿತರಾಗಿರುವ ಸೃಜನ್ ಲೋಕೇಶ್ ಜೊತೆಗೆ ನಟಿ ರಚಿತಾ ರಾಮ್ ತೀರ್ಪುಗಾರರಾಗಿದ್ದಾರೆ.

ನಟರಾದ ಸಿದ್ಧಾರ್ಥ ಮತ್ತು ವಿಜಯ್ ಸೂರ್ಯ ಈ ಹಾಸ್ಯ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

‘ಹಾಸ್ಯ ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾದ ಅಂಶ. ದೈನಂದಿನ ಜಂಜಾಟಗಳನ್ನು ಮರೆತು ಒಂದಷ್ಟು ಹೊತ್ತು ಟಿವಿ ಮುಂದೆ ಕುಳಿತು ನಗುವುದಕ್ಕಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ.

ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ನೋಡುವ ಕಾರ್ಯಕ್ರಮಗಳನ್ನೇ ಕಲರ್ಸ್ ಕನ್ನಡ ನೀಡುತ್ತಾ ಬಂದಿದೆ. ‘ಕಾಮಿಡಿ ಟಾಕೀಸ್’ ಕೂಡ ಈ ಅಂಶವನ್ನು ಗಮನದಲ್ಲಿ ಇರಿಸಿಕೊಂಡಿರುತ್ತದೆ’ ಎನ್ನುತ್ತಾರೆ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry