ಮಂಗಳವಾರ, ಮಾರ್ಚ್ 9, 2021
23 °C

ಗಡಿ ಪ್ರದೇಶ: ಭಾಷಾ ಸಾಮರಸ್ಯ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಡಿ ಪ್ರದೇಶ: ಭಾಷಾ ಸಾಮರಸ್ಯ ಕೇಂದ್ರ

ನಂಗಲಿ: ‘ಭಾಷೆಗಳು ಬೇರೆ ಬೇರೆ ಬೇರೆಯಾದರೂ ಭಾವನೆಗಳು ಒಂದೇ. ಭಾಷಾ ಸಾಮರಸ್ಯ ಮತ್ತು ಸಮ್ಮಿಲನದ ಕೇಂದ್ರ ಈ ಗಡಿ ಪ್ರದೇಶ’ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಎನ್. ಚಂದ್ರು ಹೇಳಿದರು.

ಇಲ್ಲಿನ ಚಮಕಲಹಳ್ಳಿ ಬಳಿಯ ಘಟ್ಟುವಿನ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾಷಾ ಸಾಮರಸ್ಯದಿಂದ ಕನ್ನಡ ಭಾಷೆಗೆ ಕುತ್ತಿಲ್ಲ. ಇಲ್ಲಿರುವ ವಿದ್ಯಾರ್ಥಿಗಳಿಗೆ ತೆಲುಗು ಬರುತ್ತದೆ. ಆದರೆ ಕನ್ನಡ ಭಾಷೆಯ ಮೇಲಿನ ಪ್ರೀತಿಗೆ ಕೊರತೆ ಇಲ್ಲ’ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉತ್ತಮವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಟ್ಟ ವಿದ್ಯಾರ್ಥಿಗಳಿಗೆ ಶಿಕ್ಷಕರು ಬಹುಮಾನಗಳನ್ನು ನೀಡಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಎಸ್. ವರದಪ್ಪ, ಆನಂದ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಲಿಂಗಪ್ಪ, ಸುಬ್ರಹ್ಮಣ್ಯಂ, ರವಿಚಂದ್ರ, ಚಂದ್ರ ಶೇಖರ್, ಚಂದ್ರಪ್ಪ, ಅಂಬರೀಷ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.