ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈ ಹೊತ್ತಿಗೆ’ ಕಥಾ ಸ್ಪರ್ಧೆ

Last Updated 2 ನವೆಂಬರ್ 2017, 13:18 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತ್ಯಾಸಕ್ತರ ವೇದಿಕೆ ‘ಈ ಹೊತ್ತಿಗೆ’ಯು ಸಾಹಿತ್ಯ ಪ್ರಿಯರಿಗಾಗಿ ಕನ್ನಡ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ.

ಎಲ್ಲಾ ವಯೋಮಾನದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಎಂದು ಎರಡು ವಿಭಾಗಗಳಾಗಿ ಸ್ಪರ್ಧೆ ನಡೆಸಲಾಗುತ್ತಿದೆ. ಎರಡೂ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ತೃತೀಯ ಬಹುಮಾನವಾಗಿ ಕ್ರಮವಾಗಿ ₹ 5 ಸಾವಿರ, ₹ 3 ಸಾವಿರ ಹಾಗೂ ₹ 2 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಸಾಹಿತ್ಯಾಸಕ್ತರ ವೇದಿಕೆ ತಿಳಿಸಿದೆ.

ಸ್ಪರ್ಧೆಯ ನಿಯಮಗಳು

* ಒಬ್ಬರಿಗೆ ಎರಡೂ ವಿಭಾಗದಲ್ಲಿ ಭಾಗವಹಿಸಲು ಅವಕಾಶವಿಲ್ಲ.

* ಸ್ಪರ್ಧಿಗಳು ಕಳುಹಿಸುವ ಕಥೆಗಳು ಸ್ವ–ರಚಿತ, ಸ್ವತಂತ್ರ ಹಾಗೂ ಅಪ್ರಕಟಿತವಾಗಿರಬೇಕು.

* 1600 ಪದಗಳನ್ನು ಮೀರಿರಬಾರದು.

* ಇ– ಮೇಲ್‌ ಮೂಲಕ ಕಥೆ ಕಳಿಸುವವರು ಯುನಿಕೋಡ್‌ / ನುಡಿ / ಬರಹ ತಂತ್ರಾಂಶದಲ್ಲಿ ಟೈಪ್‌ ಮಾಡಿ ಕಳುಹಿಸಬೇಕು.

* ಹಸ್ತಪ್ರತಿ ಮೂಲಕ ಕಳುಹಿಸುವವರು ಹಾಳೆಯ ಒಂದು ಮಗ್ಗುಲಿನಲ್ಲಿ ಮಾತ್ರ ಕಥೆ ಬರೆದು ಕಳುಹಿಸಬೇಕು.

* ಕಥೆಯ ಜತೆ ಕಥೆಗಾರರ ಹೆಸರಿರುವಂತಿಲ್ಲ. ಹೆಸರು, ವಿಳಾಸ ಹಾಗೂ ಮೊಬೈಲ್‌ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಕಥೆಯ ಜತೆ ಸೇರಿಸಿ ಕಳುಹಿಸಬೇಕು.

* ವಿದ್ಯಾರ್ಥಿ ವಿಭಾಗದಲ್ಲಿ ಕಥೆ ಬರೆಯುವವರು ಕಾಲೇಜಿನ ದೃಢೀಕರಣ ಪತ್ರದೊಡನೆ ಕಥೆ ಕಳುಹಿಸಬೇಕು.

* 2018ರ ಜನವರಿ ತಿಂಗಳ ಕೊನೆಯ ವಾರದಲ್ಲಿ ವಿಜೇತರ ಹೆಸರನ್ನು ಪ್ರಕಟಿಸಲಾಗುವುದು.

* ಕಥೆ ಕಳುಹಿಸಲು ಕೊನೆಯ ದಿನಾಂಕ ಡಿಸೆಂಬರ್‌ 15, 2017

* ‘ಈ ಹೊತ್ತಿಗೆ’ ತೀರ್ಮಾನವೇ ಅಂತಿಮ.

ಕಥೆ ಕಳುಹಿಸಬೇಕಾದ ವಿಳಾಸ

ಸಾಫ್ಟ್‌ ಕಾಪಿ ಕಳುಹಿಸುವವರಿಗೆ ಇ–ಮೇಲ್‌ ವಿಳಾಸ: ehottige.ks@gmail.com

ಹಸ್ತಪ್ರತಿ ಕಳುಹಿಸುವವರಿಗಾಗಿ: ಈ ಹೊತ್ತಿಗೆ, #64 ಮುಗುಳ್ನಗೆ, 3ನೇ ‘ಎ’ ಅಡ್ಡರಸ್ತೆ, ಪಿ.ಎನ್‌.ಬಿ ನಗರ, ದೊಡ್ಡ ಕಲ್ಲಸಂದ್ರ, ಕೋಣನಕುಂಟೆ, ಬೆಂಗಳೂರು–560062

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT