ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ ಪ್ರಚಾರಕ್ಕೆ ಚಾಲನೆ

Last Updated 2 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನ. 24ರಿಂದ 26ರ ವರೆಗೆ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಿರುಸಿನ ಸಿದ್ಧತೆಗಳು ನಡೆಯುತ್ತಿದ್ದು, ಪ್ರಚಾರಕ್ಕೆ ಚಾಲನೆ ನೀಡಲಾಗಿದೆ.

ಸಮ್ಮೇಳನಕ್ಕೆ ₹ 10 ಕೋಟಿ ಅನುದಾನ ಕೋರಲಾಗಿದೆ. ಈಗಾಗಲೇ ₹ 6 ಕೋಟಿ ಬಿಡುಗಡೆಯಾಗಿದೆ. ಸಮ್ಮೇಳನದ ಯಶಸ್ಸಿಗೆ ಸಹಕರಿಸಲು 15 ಉಪಸಮಿತಿಗಳನ್ನು ರಚಿಸಲಾಗಿದೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಮುಖ್ಯವೇದಿಕೆ, ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇಗುಲ, ಪುರಭವನ, ಚಿಕ್ಕಗಡಿಯಾರ ಸೇರಿದಂತೆ ಆರು ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಗಣ್ಯರು ತಂಗಲು ಸಾವಿರ ಕೊಠಡಿ ಒದಗಿಸುವಂತೆ ಇನ್ಫೊಸಿಸ್‌ಗೆ ಸಂಘಟಕರು ಪತ್ರ ಬರೆದಿದ್ದಾರೆ.

ಸಮ್ಮೇಳನ ಸಿದ್ಧತೆ ಸಂಬಂಧ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ‍ಪ್ರಚಾರ ಪೋಸ್ಟರ್‌ ಬಿಡುಗಡೆ ಮಾಡಿದರು.

‘ಎರಡು ಬಸ್‌ಗಳಲ್ಲಿ ಮೈಸೂರು ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರಗಳಿಗೆ ತೆರಳಬೇಕು. ಬಟ್ಟೆಯ ಬ್ಯಾನರ್‌ಗಳು ಹಾಗೂ ಕನ್ನಡ ಬಾವುಟ ಕಟ್ಟಿ ಪ್ರಚಾರ ಕೈಗೊಳ್ಳಬೇಕು. ಕನ್ನಡಕ್ಕೆ ಸಂಬಂಧಿಸಿದ ಘೋಷ ವಾಕ್ಯಗಳನ್ನು ಬರೆಯಬೇಕು’ ಎಂದು ಸೂಚನೆ ನೀಡಿದರು.

ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮೈಸೂರು ನಗರಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ 8 ಕಿ.ಮೀ ವ್ಯಾಪ್ತಿಯಲ್ಲಿ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಒದಗಿಸಬೇಕು ಎಂದರು.

‘ಪ್ರಾಯೋಜಕರಿಂದಲೂ ಹಣ ಕ್ರೋಡೀಕರಿಸಬೇಕು. ಅಲ್ಲದೆ, ಹೋಟೆಲ್‌ಗಳು, ಹಾಲು ಒಕ್ಕೂಟ, ಅಡುಗೆ ಅನಿಲ ಏಜೆನ್ಸಿಗಳಿಂದ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಸೌಲಭ್ಯ ಪಡೆದುಕೊಳ್ಳಬೇಕು. ಕೊಠಡಿ ಹಾಗೂ ಊಟದ ವ್ಯವಸ್ಥೆ ಸರಿಯಾಗಿದ್ದರೆ ಸಮ್ಮೇಳನ ಬಹುತೇಕ ಯಶಸ್ಸು ಕಂಡಂತೆ‌’ ಎಂದು ಹೇಳಿದರು.

200 ಕೌಂಟರ್‌: ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಮೈದಾನದಲ್ಲಿ 30,000 ಸಾರ್ವಜನಿಕರಿಗೆ ಹಾಗೂ ವೇದಿಕೆ ಪಕ್ಕದಲ್ಲಿ ಗಣ್ಯರಿಗೆ ಭೋಜನ ವ್ಯವಸ್ಥೆ ಮಾಡಲಾಗುವುದು. 200 ಕೌಂಟರ್‌ ನಿರ್ಮಿಸಲಾಗುವುದು. ಖಾದ್ಯಗಳ ಪಟ್ಟಿ ಸಲ್ಲಿಸಲು ಆಹಾರ ಸಮಿತಿಗೆ ಸೂಚನೆ ನೀಡಲಾಗಿದೆ ಎಂದು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ ಮಾಹಿತಿ ನೀಡಿದರು.

ಮುಖ್ಯಾಂಶಗಳು

* ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಚಾರ

* ಕೊಠಡಿ ಒದಗಿಸುವಂತೆ ಇನ್ಫೊಸಿಸ್‌ಗೆ ಪತ್ರ

* ₹ 10 ಕೋಟಿ ಅನುದಾನ ಕೋರಿಕೆ, ₹ 6 ಕೋಟಿ ಬಿಡುಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT