ಸೋಮವಾರ, ಮಾರ್ಚ್ 1, 2021
31 °C

ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ; ಫೆಬ್ರುವರಿ 6 ಕೊನೆಯ ದಿನಾಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ; ಫೆಬ್ರುವರಿ 6 ಕೊನೆಯ ದಿನಾಂಕ

ನವದೆಹಲಿ: 2018 ಫೆಬ್ರುವರಿ 6ನೇ ತಾರೀಖಿನೊಳಗೆ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ಎಲ್ಲಾ ಗ್ರಾಹಕರು ಇ-ಕೆವೈಸಿ ವೆರಿಫಿಕೇಶನ್ ಮತ್ತು ಪ್ರೊಡಕ್ಷನ್ ಅಡಿಯಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ಫೆಬ್ರುವರಿ 6ರೊಳಗೆ ಆಧಾರ್ ಜತೆ ಲಿಂಕ್ ಮಾಡಿಸಬೇಕು ಮತ್ತು ಹೊಸ ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ತಿಳಿಸಿದೆ.

ನ್ಯಾಯವಾದಿ ಝೋಹೆಬ್ ಹೊಸೈನ್ ಅವರ ಮೂಲಕ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ಗೆ 113 ಪುಟಗಳ ಅಫಿಡವಿಟ್‍ನ್ನು ಸಲ್ಲಿಸಿದೆ. 

ಇದೀಗ ಬ್ಯಾಂಕ್ ಖಾತೆಗಳನ್ನು ಆಧಾರ್ ಜತೆ ಲಿಂಕ್ ಮಾಡಲಿರುವ ಗಡುವನ್ನು ಮಾರ್ಚ್ 31ರವರೆಗೆ ನೀಡಲಾಗಿದೆ. ಹೀಗೆ ಆಧಾರ್ ಜತೆ ಲಿಂಕ್ ಮಾಡದೇ ಇರುವ ಖಾತೆಗಳು ನಿಷ್ಕ್ರಿಯವಾಗುತ್ತದೆ.

ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ 113 ಪುಟಗಳ ಹೊಸ ಅಫಿಡವಿಟ್ ಅನ್ನು ವಕೀಲ ಝೋಹೆಬ್ ಹೊಸೈನ್ ಅವರ ಮೂಲಕ ಸಲ್ಲಿಸಿದೆ. ಆಧಾರ್‍ಗೆ ಮೊಬೈಲ್ ನಂಬರ್ ಅನ್ನು ಲಿಂಗ್ ಮಾಡುವ ಗಡುವನ್ನು ಮತ್ತೆ ವಿಸ್ತರಿಸುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಆದರೆ ಬಾಕಿ ಉಳಿದಿರುವ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವ ಗಡುವನ್ನು ಮಾರ್ಚ್ 31ರವರೆಗೆ ವಿಸ್ತರಿಸಿರುವುದಾಗಿ ಹೇಳಿದೆ. ಆದಾಗ್ಯೂ, ಹೊಸ ಖಾತೆಗಳನ್ನು ತೆರೆಯಲು ಆಧಾರ್ ಕಡ್ಡಾಯ ಎಂದು ಅಫಿಡವಿಟ್‍ನಲ್ಲಿ ಹೇಳಿದೆ.

ಆಧಾರ್ ಮಾಹಿತಿಯನ್ನು ಸುರಕ್ಷಿತವಾಗಿಡಲಾಗಿದ್ದು, ಮಾಹಿತಿ ಸಂಗ್ರಹಿಸಿಟ್ಟಿರುವ UIDAI ಸರ್ವರ್‍‍‌ಗಳು ಹ್ಯಾಕಿಂಗ್- ಸೈಬರ್ ದಾಳಿಗೆ ಒಳಗಾಗಿಲ್ಲ ಎಂದು ಸರ್ಕಾರು ಸುಪ್ರೀಂಕೋರ್ಟ್‍ಗೆ ಮನವರಿಕೆ ಮಾಡಿದೆ.

ಮೊಬೈಲ್ ಸಂಖ್ಯೆಗಳನ್ನು ಆಧಾರ್ ಜತೆ ಯಾಕೆ ಬೆಸೆಯಬೇಕು ಎಂದು ಪ್ರಶ್ನಿಸಿ  ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ ದ್ವಿಸದಸ್ಯ ಪೀಠ, ನಾಲ್ಕು ವಾರಗಳ ಒಳಗೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.