7

ಲೈಂಗಿಕ ಜೀವನದ ತೊಡಕಿಗೂ ಮೂತ್ರನಿಯಂತ್ರಣದ ಸಮಸ್ಯೆಗೂ ಉಂಟು ನಂಟು

Published:
Updated:
ಲೈಂಗಿಕ ಜೀವನದ ತೊಡಕಿಗೂ ಮೂತ್ರನಿಯಂತ್ರಣದ ಸಮಸ್ಯೆಗೂ ಉಂಟು ನಂಟು

ಮಹಿಳೆಯರಲ್ಲಿ ಮೂತ್ರದ ನಿಯಂತ್ರಣ ಸಾಧ್ಯವಾಗದೇ ಇರುವುದು, ಈಗೀಗ ಸಹಜ ಹಾಗೂ ಎಲ್ಲಾ ವಯೋಮಾನದ ಲಕ್ಷಾಂತರ ಮಹಿಳೆಯರನ್ನು ಕಾಡುತ್ತಿರುವ ಸಂಗತಿಯೂ ಆಗಿದೆ. ಪುರುಷರಿಗಿಂತ ಮಹಿಳೆಯರಲ್ಲಿ ಎರಡು ಪಟ್ಟು ಹೆಚ್ಚುತ್ತಿರುವುದು ಆತಂಕದ ಸಂಗತಿಯೂ ಹೌದು. ಪುರುಷರಲ್ಲೂ ಈ ಸಮಸ್ಯೆ ಇದ್ದಕ್ಕಿದ್ದಂತೆ ಅಥವಾ ಕೆಲವು ಶಸ್ತ್ರಚಿಕಿತ್ಸೆ ನಂತರ ಕಾಣಿಸಿಕೊಳ್ಳಬಹುದು.

ಮೂತ್ರನಾಳದ ಮೇಲಿನ ಹಿಡಿತ ತಪ್ಪುವುದು, ಮೂತ್ರವನ್ನು ನಿಯಂತ್ರಿಸುವ ಸಾಮರ್ಥ್ಯ ಕುಗ್ಗುವುದನ್ನೇ ಯೂರಿನರಿ ಇನ್‌ಕಂಟಿನೆನ್ಸ್ ಎನ್ನುತ್ತಾರೆ. ಇದರಿಂದ ಕೆಮ್ಮಿದಾಗ, ಸೀನಿದಾಗ, ಜೋರಾಗಿ ಮಾತನಾಡುವಾಗಲೂ ನಿಯಂತ್ರಣ ಮೀರಿ ಮೂತ್ರ ಸೋರುತ್ತದೆ.

ಇದಕ್ಕೆ ಕಾರಣ ಹಲವಿವೆ. ಆದರೆ ಯಾವುದೇ ವಯೋಮಾನದಲ್ಲೂ ಕಾಣಿಸಿಕೊಳ್ಳುವ ಎಲ್ಲಾ ರೀತಿಯ ಮೂತ್ರ ನಿರೋಧರಾಹಿತ್ಯವನ್ನು ಸರಿಪಡಿಸುವ ದಾರಿಗಳೂ ಇವೆ. ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ ಚಿಕಿತ್ಸೆ ಸದ್ಯಕ್ಕೆ ನೈಸರ್ಗಿಕ, ಸುರಕ್ಷಿತ ಪರಿಹಾರದ ಆಯ್ಕೆಯಾಗಿ ಕಾಣುತ್ತಿದೆ.

ಋತುಚಕ್ರ ನಿಂತ ನಂತರ ಸ್ನಾಯುಗಳು ಬಿಗಿ ಕಳೆದುಕೊಳ್ಳುವುದು ಇದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು. ಮಗು ಹುಟ್ಟಿದ ನಂತರ, ಋತುಬಂಧದಂಥ ಸಮಯಗಳಲ್ಲಿ ಮಹಿಳೆಯರ ಮೂತ್ರನಾಳದ ರಚನೆಯಲ್ಲಿ ಬದಲಾವಣೆಯಾಗುವುದು ಇದರ ಪ್ರಮುಖ ಕಾರಣ.

ನರ ಅಥವಾ ಸ್ಪೈನಲ್ ಕಾರ್ಡ್‌ಗೆ ತೊಂದರೆಯಾಗಿದ್ದರೆ, ಕೆಲವು ಜನ್ಮದೋಷಗಳಿಂದ, ಪಾರ್ಶ್ವವಾಯು, ವಯೋಸಂಬಂಧಿ ದೈಹಿಕ ಸಮಸ್ಯೆಗಳು ಮಹಿಳೆ ಹಾಗೂ ಪುರುಷರಿಬ್ಬರಲ್ಲೂ ಈ ಸಮಸ್ಯೆ ತರಬಹುದು.

ಆದರೆ ಇದು ದೈಹಿಕವಾಗಿ ಮಾತ್ರವಲ್ಲ, ಸಾಮಾಜಿಕ ಜೀವನದ ಒಳಗೂ ಹಸ್ತಕ್ಷೇಪ ಮಾಡುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಾಗ ಹೀಗೆ ಮೂತ್ರದ ನಿಯಂತ್ರಣ ಕಳೆದುಕೊಳ್ಳುವುದು ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೇ ಕಾಮಾಸಕ್ತಿಯು ಕುಂದಿ, ಅನಾರ್ಗಾಸ್ಮಿಯಾದಂಥ ಸಮಸ್ಯೆ ತಂದೊಡ್ಡುತ್ತದೆ. ಭಾವನಾತ್ಮಕವಾಗಿಯೂ ಇದು ಕುಗ್ಗಿಸುತ್ತದೆ.

ಮೂತ್ರನಿರೋಧರಾಹಿತ್ಯದ ಪ್ರಕಾರಗಳು: ಮೂತ್ರದ ಮೇಲೆ ನಿಂತ್ರಣ ಕಳೆದುಕೊಳ್ಳುವಲ್ಲಿ ಹಲವು ಪ್ರಕಾರಗಳಿವೆ. ಪ್ರತಿ ವಿಧಕ್ಕೂ ಚಿಕಿತ್ಸೆಯೂ ಲಭ್ಯವಿದೆ.

ಒತ್ತಡದ ಮೂತ್ರ: ಯಾವುದೇ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಸಣ್ಣ ಪ್ರಮಾಣದಲ್ಲಿ ಮೂತ್ರ ಸೋರಿಕೆಯಾಗುತ್ತದೆ. ಗರ್ಭಕೋಶದ ಮೇಲೆ ಒತ್ತಡ ಹೆಚ್ಚಾದಾಗ, ಕೆಮ್ಮಿದರೆ, ಸೀನಿದರೆ ಅಥವಾ ಜಿಗಿದರೆ ಹೀಗೆ ಆಗುತ್ತದೆ.

ಬಲವಂತದ ಮೂತ್ರ: ಯಾವ ಚಟುವಟಿಕೆಯಲ್ಲಿ ತೊಡಗಿಕೊಳ್ಳದೇ ಇದ್ದರೂ ಹೆಚ್ಚಿನ ಪ್ರಮಾಣದಲ್ಲಿ ಮೂತ್ರ ಸೋರಿಕೆಯಾಗುತ್ತದೆ. ವಿಶ್ರಾಂತಿ ತೆಗೆದುಕೊಳ್ಳುವಾಗ ಅಥವಾ ನಿದ್ದೆಯಲ್ಲಿದ್ದಾಗಲೂ ಈ ರೀತಿ ಆಗಬಹುದು.

ಮಿಶ್ರಿತ: ಇದು ಒತ್ತಡ ಹಾಗೂ ಬಲವಂತ ಎರಡೂ ಲಕ್ಷಣಗಳನ್ನು ಹೊಂದಿರುತ್ತದೆ.

ಅತಿಯಾದ ಮೂತ್ರಸೋರಿಕೆ: ಮೂತ್ರಕೋಶ ಭರ್ತಿಯಾಗಿ, ಮೂತ್ರವನ್ನು ತಡೆದಿಟ್ಟುಕೊಳ್ಳಲು ಸಾಧ್ಯವಾಗದೇ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಮೂತ್ರ ಸೋರಿಕೆಯಾಗುತ್ತದೆ.

ಅತಿಕ್ರಿಯಾಶೀಲ ಮೂತ್ರಕೋಶ: ಯಾವಾಗಲೂ ಹಾಗೂ ಅತಿಯಾದ ಅವಸರವಾಗಿ ಮೂತ್ರ ಸೋರಿಕೆ ಆಗುವುದನ್ನು ಈ ಸಾಲಿಗೆ ಸೇರಿಸಬಹುದು.

ಕ್ರಿಯಾತ್ಮಕ ಅಸಮರ್ಥತೆಯಿಂದ ಮೂತ್ರಸೋರಿಕೆ: ದೈಹಿಕ ಅಸಮರ್ಥತೆಯ ಕಾರಣದಿಂದ ಮೂತ್ರವನ್ನು ತಡೆಹಿಡಿಯಲು ಸಾಧ್ಯವಾಗದೇ ಇರುವುದನ್ನು ಈ ಸಾಲಿಗೆ ಸೇರಿಸಬಹುದು.

ಅಸ್ಥಿರ ಮೂತ್ರಸೋರಿಕೆ: ಸೋರಿಕೆಯು ತಾತ್ಕಾಲಿಕವಾಗಿದ್ದು, ಕೆಮ್ಮು, ಮೂತ್ರಕೋಶದ ಸೋಂಕು ಅಥವಾ ಔಷಧಗಳ ಅಡ್ಡ ಪರಿಣಾಮದಿಂದಾಗಿ ಮೂತ್ರ ಸೋರುವುದನ್ನು ಅಸ್ಥಿರ ಮೂತ್ರಸೋರಿಕೆ ಎಂದು ಪರಿಗಣಿಸಬಹುದು.

ಮೂತ್ರಸೋರಿಕೆಯ ಮೂಲ

ಈ ಸಮಸ್ಯೆಯು ಮೂತ್ರಕೋಶದ ಸ್ವಾಸ್ಥ್ಯ ಹಾಗೂ ಒಟ್ಟಾರೆ ಆರೋಗ್ಯ, ವೈದ್ಯಕೀಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಇದಕ್ಕೆ ಪೆಲ್ವಿಕ್ ಪರೀಕ್ಷೆ, ಬ್ಲಾಡರ್ ಸ್ಟ್ರೆಸ್ ಟೆಸ್ಟ್ (ಮೂತ್ರಕೋಶದ ಒತ್ತಡ ಪರೀಕ್ಷೆ) ಅಥವಾ ಯೂರೊಡೈನಮಿಕ್ (ಸಿಎಂಜಿ) ಅನ್ನು ಪ್ರಾಥಮಿಕ ಪರೀಕ್ಷೆಯಾಗಿ ಕೈಗೊಳ್ಳಲಾಗುತ್ತದೆ.

ಈ ಮೂತ್ರಕೋಶದ ಒತ್ತಡ ಪರೀಕ್ಷೆಯನ್ನು ಕೆಮ್ಮಿದಾಗ ಉಂಟಾಗುವ ಮೂತ್ರ ಸೋರಿಕೆಯ ಮೂಲಕ ಪರೀಕ್ಷಿಸಲಾಗುತ್ತದೆ. ವೈದ್ಯರ ಶಿಫಾರಸ್ಸಿನ ಮೇರೆಗೆ ಇನ್ನಿತರ ಹೆಚ್ಚುವರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆದರೆ ಎಲ್ಲರಿಗೂ ಈ ಹೆಚ್ಚುವರಿ ಪರೀಕ್ಷೆಯ ಅಗತ್ಯವಿರುವುದಿಲ್ಲ.

ಸಮಸ್ಯೆಗಿದೆ ಚಿಕಿತ್ಸೆ

ಈ ಸಮಸ್ಯೆಯನ್ನು ತಹಬದಿಗೆ ತರಲು ಹಲವು ವಿಧಾನಗಳನ್ನು ಬಳಸಲಾಗುತ್ತದೆ. ಹಾಗೆಯೇ ಇವುಗಳಲ್ಲಿ ಕೆಲವು ಚಿಕಿತ್ಸಾ ವಿಧಾನಗಳನ್ನು ಒಟ್ಟು ಮಾಡಿದಾಗ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಉತ್ತಮ ಫಲಿತಾಂಶ ಪಡೆದ ಉದಾಹರಣೆಗಳೂ ದೊರೆತಿವೆ. ಮಹಿಳೆಯರಲ್ಲಿನ ಈ ಸಮಸ್ಯೆಗೆ ಇರುವ ಕೆಲವು ಸಾಂಪ್ರದಾಯಿಕ ಚಿಕಿತ್ಸೆಗಳೆಂದರೆ,

* ಮೂತ್ರಕೋಶದ ಮರುಸ್ವಾಸ್ಥ್ಯ ಗಳಿಸಿಕೊಳ್ಳುವಿಕೆ.

(ಪೆಲ್ವಿಕ್ ಸ್ನಾಯುಗಳನ್ನು ಗಟ್ಟಿಗೊಳಿಸುವಿಕೆ: ಕೆಗಲ್ ವ್ಯಾಯಾಮ ಹಾಗೂ ಟೆನ್ಸ್ (Transcutaneous electrical nerve stimulation).

* ಅತಿಕ್ರಿಯಾಶೀಲ ಮೂತ್ರಕೋಶಕ್ಕೆ ಔಷಧಿಗಳು: ಅತಿಕ್ರಿಯಾಶೀಲ ಮೂತ್ರಕೋಶಕ್ಕೆ ಆಂಡಿಕೊಲಿನರ್ಜಿಕ್‌ನಂಥ ಕೆಲವು ಔಷಧಗಳನ್ನು ಆಗಾಗ್ಗೆ ಸೂಚಿಸಲಾಗುತ್ತದೆ. ಇದರಿಂದ ಕಾಣಿಸಿಕೊಳ್ಳುವ ಸಾಮಾನ್ಯ ಅಡ್ಡಪರಿಣಾಮಗಳೆಂದರೆ, ಬಾಯಿ ಒಣಗುವುದು, ಮಲಬದ್ಧತೆ, ಮಂಪರು. ಆದರೆ ಇದನ್ನು ಹೆಚ್ಚಿನ ಮಟ್ಟದಲ್ಲಿ ಸೇವಿಸಿದರೆ, ಮಸುಕು ದೃಷ್ಟಿ, ಹೃದಯಬಡಿತ ಹೆಚ್ಚಾಗುವಿಕೆ ಉಂಟಾಗುತ್ತದೆ. ಇದರ ದೀರ್ಘಕಾಲಿಕ ಸೇವನೆ, ಮರೆಗುಳಿತನದ ಸಮಸ್ಯೆಯನ್ನೂ ತಂದೊಡ್ಡುವ ಸಾಧ್ಯತೆಯಿದೆ.

* ಒತ್ತಡದ ಮೂತ್ರಸೋರಿಕೆಗೆ ಉಪಯೋಗಿಸುವ ಸಾಧನ: ಪೆಸ್ಸರಿಯಂಥ ಸಾಧನವನ್ನು ಈ ಸಮಸ್ಯೆಗೆ ಪರಿಹಾರವಾಗಿ ಉಪಯೋಗಿಸಿದರೂ ಇದು ಯೋನಿಯ ಸೋಂಕನ್ನು ಮರುಕಳಿಸುವಂತೆ ಮಾಡಬಹುದು.

* ಚುಚ್ಚುಮದ್ದು: ಕೊಲಜೆನ್ ಹಾಗೂ ಕಾರ್ಬನ್ ಸ್ಪಿಯರ್‌ಗಳನ್ನು ಯುರಿನರಿ ಸ್ಪಿಂಕ್ಟರ್‌ನ ಸಮೀಪ ಇಂಜೆಕ್ಷನ್‌ ಮೂಲಕ ನೀಡಲಾಗುತ್ತದೆ, ಇದು ಅಂಗಾಂಶದ ಪದರವನ್ನು ಗಟ್ಟಿಗೊಳಿಸಿ. ಮೂತ್ರಕೋಶದಲ್ಲಿ ಒತ್ತಡವನ್ನು ತಡೆಯಲು ಸಹಕರಿಸುತ್ತದೆ.

* ಶಸ್ತ್ರಚಿಕಿತ್ಸೆ: ಮೂತ್ರಕೋಶವನ್ನು ಮತ್ತೆ ಸಹಜಸ್ಥಿತಿಗೆ ತರಲು ಮೂರು ರೀತಿಯ ಶಸ್ತ್ರಚಿಕಿತ್ಸೆಗಳು ಇವೆ. ರೆಟ್ರೊ ಪ್ಯೂಬಿಕ್ ಸಸ್ಪೆನ್ಷನ್ ಮತ್ತು ಎರಡು ಸ್ಲಿಂಗ್ ಪ್ರೊಸೀಜರ್‌ಗಳು ಲಭ್ಯವಿವೆ.

ಪ್ಲೇಟ್‌ಲೆಟ್‌ ರಿಚ್ ಪ್ಲಾಸ್ಮಾ ಚಿಕಿತ್ಸೆ

ಇದು ಪುನರುತ್ಪಾದಕ ಚಿಕಿತ್ಸೆಯಾಗಿದ್ದು, ಇದನ್ನು ಕ್ಷೀಣಗೊಂಡ ಸಂಧಿವಾತದಂಥ ಸಮಸ್ಯೆಗೆ ವ್ಯಾಪಕವಾಗಿ ಬಳಸಲಾಗುತ್ತಿದೆ. ಮೂಳೆಗೆ ಸಂಬಂಧಿಸಿದಂತೆ ದಶಕದಿಂದ ಚಿಕಿತ್ಸೆಯ ರೂಪವಾಗಿ ಇದನ್ನು ಬಳಸಲಾಗಿದ್ದು, ನಿರೀಕ್ಷಿತ ಫಲಿತಾಂಶವೂ ದೊರೆತಿದೆ.

ಪಿಆರ್‌ಪಿ ಪದ್ಧತಿ ಮೂಲಕ ಪರಿಣಾಮಕಾರಿಯಾಗಿ ಮೂತ್ರನಿರೋಧ ಸಾಮರ್ಥ್ಯವನ್ನು ಪಡೆಯಬಹುದು. ಇದು ಆರೋಗ್ಯಕರ ಜೀವಕೋಶಗಳನ್ನು ಪುನರ್‌ ಉತ್ಪಾದನೆ ಮಾಡುವ ಮೂಲಕ ಕಾರ್ಯನಿರ್ವಹಿಸಬಲ್ಲದ್ದಾಗಿದ್ದು, ನೋವು ರಹಿತ ಚಿಕಿತ್ಸೆ ಆಗಿದೆ. ಮಣಿಪಾಲ್ ಫರ್ಟಿಲಿಟಿಯಲ್ಲಿ ಒಂದು ಗಂಟೆ ಅವಧಿಯಲ್ಲಿ ಈ ಚಿಕಿತ್ಸೆಯನ್ನು ನಡೆಸಲಾಗುತ್ತದೆ.

ಪಿಆರ್‌ಪಿ ಚಿಕಿತ್ಸೆ ಹಲವು ಬೆಳವಣಿಗೆಯ ಅಂಶಗಳನ್ನು ಹೊಂದಿದೆ. ಇವೆಲ್ಲವೂ ಪ್ಲೇಟ್‌ಲೆಟ್‌ಗಳನ್ನು ಚುರುಕುಗೊಳಿಸಿ, ಸ್ತ್ರೀ ಸಂತಾನೋತ್ಪತ್ತಿ ಕ್ರಿಯೆಗೆ ಅನುವಾಗಿರುವ ಕ್ಲಿಟೆರಾಲ್, ಮೂತ್ರನಾಳ–ಮೂತ್ರಕೋಶ–ಸ್ನಾಯುಗಳು, ನರಗಳು, ರಕ್ತನಾಳಗಳಿಗೆ ಚೈತನ್ಯ ತುಂಬುತ್ತದೆ.

ಪಿಆರ್‌ಪಿ ಹಾಗೂ ಸ್ನಾಯು ವ್ಯಾಯಾಮದ ಚಿಕಿತ್ಸೆ ಪಡೆದ ರೋಗಿಗಳಿಗೆ ಮೂತ್ರ ನಿಯಂತ್ರಣ ಅನುಭವಕ್ಕೆ ಬಂದಿದೆ. ಈ ಮೂಲಕ ಲೈಂಗಿಕ ಕ್ರಿಯೆಯಲ್ಲೂ ಚೈತನ್ಯ ಕಂಡುಬಂದಿದೆ. ಈ ಚಿಕಿತ್ಸೆಯು ಎಲ್ಲರಿಗೂ ಅಲ್ಲ. ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆಯ ಅವಶ್ಯಕತೆಯನ್ನು ಮನಗಾಣಬೇಕು. ಹೆಚ್ಚಿನ ಮಾಹಿತಿಗೆ: 9482798700

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry