ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾ ಪಕ್ಷಿ ಸಮೀಕ್ಷೆ ಜ.21ಕ್ಕೆ

Last Updated 4 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕಾರವಾರ: ಪರಿಸರ ಕಾರ್ಯಕ್ರಮದ ಅಡಿಯಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರವು ಜನವರಿ 21ರಂದು ‘ಕೈಗಾ ಪಕ್ಷಿ’ ಸಮೀಕ್ಷೆಯನ್ನು ಆಯೋಜಿಸಿದೆ. ಇದು ‘ಕೈಗಾ ಬರ್ಡ್ ಮ್ಯಾರಥಾನ್’ನ 8ನೇ ಆವೃತ್ತಿ.

‘ಕೈಗಾ ಅಣು ಸ್ಥಾವರದ ವಲಯ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿನ ಜೀವ ವೈವಿಧ್ಯತೆಯ ವೈಜ್ಞಾನಿಕ ಅಧ್ಯಯನ ಸಲುವಾಗಿ ಏಳು ವರ್ಷ
ಗಳಿಂದ ಪಕ್ಷಿ ಸಮೀಕ್ಷೆಯನ್ನು ಆಯೋಜಿಸಲಾಗುತ್ತಿದೆ’ ಎಂದು ಕೈಗಾ ಪರಿಸರ ಕಾರ್ಯಕ್ರಮದ ಸದಸ್ಯ ಜಿ.
ಮೋಹನದಾಸ್‌ ತಿಳಿಸಿದ್ದಾರೆ.

‘2011ರಲ್ಲಿ ಆರಂಭಗೊಂಡ ಸಮೀಕ್ಷೆಯಲ್ಲಿ ವಿವಿಧ ಜಾತಿಯ 142 ಪಕ್ಷಿಗಳು ಪತ್ತೆಯಾಗಿದ್ದವು. 7ನೇ ಆವೃತ್ತಿಯ ಸಮೀಕ್ಷೆಯಲ್ಲಿ ಅವುಗಳ ಸಂಖ್ಯೆ 276 ಆಯಿತು. ಯಶಸ್ಸು ಪಡೆದ ಈ ಸಮೀಕ್ಷೆಯಲ್ಲಿ ಪ್ರತಿ ವರ್ಷ ದಕ್ಷಿಣ ಭಾರತದ ನಾನಾ ಭಾಗಗಳಿಂದ ನೂರಕ್ಕೂ ಅಧಿಕ ಪಕ್ಷಿ ವೀಕ್ಷಕರು ಭಾಗವಹಿಸುತ್ತಿದ್ದಾರೆ’ ಎಂದರು.

ಆಸಕ್ತರುರು kaigabm@gmail.com ಗೆ ಇದೇ 20ರ ಒಳಗಾಗಿ ಇ–ಮೇಲ್ ಕಳುಹಿಸಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT