ಮಂಗಳವಾರ, ಮಾರ್ಚ್ 2, 2021
31 °C

ದೀಪಿಕಾ-ರಣವೀರ್‌ ಮುನಿಸು ಮುಸುಮುಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೀಪಿಕಾ-ರಣವೀರ್‌ ಮುನಿಸು ಮುಸುಮುಸು

ದೀಪಿಕಾ ಪಡುಕೋಣೆ-ರಣವೀರ್ ಸಿಂಗ್‌ ಸಂಬಂಧದಲ್ಲಿ ಬಿರುಕು ಮೂಡಿದೆಯೇ?

ಹೀಗೊಂದು ಪ್ರಶ್ನೆ ಸಿನಿರಸಿಕರಲ್ಲಿ ಮೂಡಿದೆ. ಬಾಲಿವುಡ್‌ನ ‘ಬೆಸ್ಟ್‌ ಜೋಡಿ’ ಎಂದೇ ಹೆಸರಾಗಿದ್ದ ಇವರಿಬ್ಬರೂ ಮುನಿಸಿಕೊಂಡಿದ್ದೇ ಆಗಾಗ ಸುದ್ದಿಯಾಗುತ್ತಿತ್ತು. ಜೋಡಿ ಬೇರ್ಪಟ್ಟಿತ್ತು ಎಂದು ಸುದ್ದಿಯಾದ ಬೆನ್ನಿಗೇ ಡೇಟಿಂಗ್ ಫೋಟೊಗಳು ವೈರಲ್ ಆಗಿದ್ದವು. ಈಗ ಟ್ವಿಟರ್ ಅಂಗಳದಲ್ಲಿ ಇವರ ಜಗಳವನ್ನು ಅಭಿಮಾನಿಗಳು ಗಮನಿಸುತ್ತಿದ್ದಾರೆ.

‘ಪದ್ಮಾವತಿ’ ಸಿನಿಮಾದ 3ಡಿ ಟ್ರೇಲರ್‌ ಬಿಡುಗಡೆ ಇವರ ಹೊಸ ಜಗಳಕ್ಕೆ ಕಾರಣವಾಗಿದೆ. ರಣವೀರ್‌ ತಮ್ಮ ಕೋಪವನ್ನು ಟ್ವೀಟ್‌ಗಳ ಮೂಲಕ ಹೊರಹಾಕುತ್ತಿದ್ದಾರೆ.

‘ಕಾರ್ಯಕ್ರಮ ತುಂಬಾ ಅದ್ಭುತವಾಗಿತ್ತು. ನಾನು ಅಭಿನಯಿಸಿದ ಮೊದಲ 3ಡಿ ಸಿನಿಮಾ ಇದು. ಕಾರ್ಯಕ್ರಮದ ಫೋಟೊಗಳನ್ನೂ ಹಂಚಿಕೊಳ್ಳೋಣ ಎಂದುಕೊಂಡೆ. ಆದರೆ ದೀಪಿಕಾಗೆ ಮತ್ತಷ್ಟು ಪ್ರಚಾರ ಕೊಡಲು ನನಗೆ ಇಷ್ಟವಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ದೀಪಿಕಾ, ರಣವೀರ್ ಮತ್ತು ಶಾಹೀದ್ ಅವರನ್ನೂ ಆಯೋಜಕರು ಆಹ್ವಾನಿಸಿರಲಿಲ್ಲ. ಆದರೆ, ಚಿತ್ರದ ಮುಖ್ಯಪಾತ್ರಧಾರಿ ದೀಪಿಕಾ ಸ್ವಆಸಕ್ತಿಯಿಂದ ಕಾರ್ಯಕ್ರಮಕ್ಕೆ ಬಂದರು. ಇದೇ ಕಾರಣಕ್ಕೆ ಎಲ್ಲೆಡೆ ಸುದ್ದಿಯೂ ಆಗಿದ್ದರು. ಇದು ರಣವೀರ್ ಕಣ್ಣನ್ನು ಕೆಂಪಾಗಿಸಿದೆ.

‘ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರೆ ನಾನೂ ಹೋಗುತ್ತಿದ್ದೆ. ಆ ಹೊತ್ತಿನಲ್ಲಿ ನಾನು ಮನೆಯಲ್ಲೇ ಇದ್ದೆ’ ಎಂದು ಶಾಹೀದ್, ‘ನಾನು ಫುಟ್‌ಬಾಲ್ ಆಡುತ್ತಿದ್ದೆ. ನನಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಷ್ಟು ಸಮಯವಿತ್ತು’ ಎಂದು ರಣವೀರ್‌ ನಂತರ ಅಳಲುತೋಡಿಕೊಂಡರು.

ಆದರೆ ನಿರ್ದೇಶಕ ಬನ್ಸಾಲಿ ಈ ಕುರಿತು ಹೇಳುವುದೇ ಬೇರೆ. ‘ತ್ರಿಡಿ ಆಯಾಮದ ಸಾಧ್ಯತೆಗಳ ಬಗ್ಗೆ ತಂತ್ರಜ್ಞರ ಜೊತೆಗೆ ಚರ್ಚಿಸಲು ಆಯೋಜಿಸಿದ್ದ ಕಾರ್ಯಕ್ರಮ ಇದು’ ಎನ್ನುವುದು ಅವರು ನೀಡುವ ಸ್ಪಷ್ಟನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.