ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲೀಗ ‘ನಮಸ್ತೆ ನಿರ್ಮಲಾ’

Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಭಾರತ ಚೀನಾ ಗಡಿಯ ಸಿಕ್ಕಿಂನ ನಾಥು ಲಾ ಪ್ರದೇಶಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದರು. ಭಾರತದ ಯೋಧರ ಯೋಗಕ್ಷೇಮ ವಿಚಾರಿಸಿ ಸುಮ್ಮನಾಗದೆ ಚೀನಿ ಯೋಧರ ಕಡೆಗೂ ಕೈಬೀಸಿ ಮಾತನಾಡಿಸಿ ನಮಸ್ಕಾರ ಹೇಳಿ ಬಂದರು. ಈ ವಿದ್ಯಮಾನವನ್ನು ಎರಡೂ ದೇಶದ ಸಾಮಾನ್ಯ ಜನತೆ ದೊಡ್ಡಮಟ್ಟದಲ್ಲಿ ಶ್ಲಾಘಿಸಿದರು.

ಗಡಿಯಲ್ಲಿ ಮುಖಬಿಗಿದುಕೊಂಡು ಎದುರುಬದುರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ನಿಂತ ಯೋಧರ ಮಧ್ಯೆ ಹೂನಗು ಹರಿಸಿ ವಾತಾವರಣವನ್ನು ತಿಳಿಗೊಳಿಸಿ ಬಂದಿದ್ದರು ನಿರ್ಮಲಾ. ಇದು ಎರಡೂ ದೇಶಗಳಲ್ಲಿ ದೊಡ್ಡ ಸುದ್ದಿಯಾತು.

ಚೀನಾದ ಯೋಧರೂ ‘ನಮಸ್ತೆ’ಗೆ ಪ್ರತಿಯಾಗಿ ತಮ್ಮ ಭಾಷೆಯಲ್ಲಿ ‘ನೀ ಹೊ’ ಎಂದರು. ಚೀನಿ ಯೋಧರೊಂದಿಗೆ ಸಂವಹನ ಮಾಡಿದ ರೀತಿ, ಚೀನಿ ಯೋಧರಿಗೆ ‘ನಮಸ್ತೆ’ ಎಂಬ ಪದವನ್ನು ಕಲಿಸಿದ ರೀತಿ ಹೆಚ್ಚು ಚರ್ಚೆ ಆಯ್ತು. ನಿರ್ಮಲಾ ಅವರು ಚೀನಿ ಯೋಧರೊಂದಿಗೆ ಸಂವಹನ ನಡೆಸಿದ ವಿಡಿಯೊವನ್ನು @DefenceMinIndia ಟ್ವಿಟರ್ ಖಾತೆಯಲ್ಲಿ ಹಾಕಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಪ್ರತಿಕ್ರಿಯೆಗಳು ಬಂದವು.

ಈ ವಿಡಿಯೊ ಭಾರತದಲ್ಲಿ ಅಷ್ಟೇ ಅಲ್ಲ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಯ್ತು. ಚೀನಾ ಮಹಿಳೆಯರು ನಿರ್ಮಲಾ ಸೀತಾರಾಮನ್ ಅವರ ನಡೆ ಬಗ್ಗೆ ಖುಷಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT