ಶನಿವಾರ, ಮಾರ್ಚ್ 6, 2021
18 °C

ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕ್ರಿಕೆಟ್ ಟೂರ್ನಿ: ಕೃಷ್ಣ ವಿ.ವಿ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕ್ರಿಕೆಟ್ ಟೂರ್ನಿ: ಕೃಷ್ಣ ವಿ.ವಿ ಜಯಭೇರಿ

ಬೆಂಗಳೂರು: ಕೆ.ಸುಷ್ಮಾ (11ಕ್ಕೆ4) ಹಾಗೂ ಡಿ. ಚಂದ್ರಿಕಾ (14ಕ್ಕೆ3) ಅವರ ಪರಿಣಾಮಕಾರಿ ದಾಳಿ ನೆರವಿನಿಂದ ಕೃಷ್ಣ ವಿಶ್ವವಿದ್ಯಾಲಯ ತಂಡ ಇಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಮಹಿಳೆಯರ ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಬೆಂಗಳೂರು ವಿಶ್ವವಿದ್ಯಾಲಯ ಎದುರಿನ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಜಯದಾಖಲಿಸಿದೆ.

ಸೆಂಟ್ರಲ್ ಕಾಲೇಜು ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ವಿ.ವಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 86 ರನ್ ಕಲೆಹಾಕಿತು. ಈ ತಂಡದ ಬ್ಯಾಟ್ಸ್‌ವುಮನ್‌ ಕೃತಿಕಾ (20) ಹಾಗೂ ಯಶಸ್ವಿನಿ (16) ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಕೃಷ್ಣ ತಂಡದ ಬೌಲರ್‌ ಸುಷ್ಮಾ ಹಾಗೂ ಚಂದ್ರಿಕಾ ಅವರ ಪರಿಣಾಮಕಾರಿ ದಾಳಿಗೆ ಬ್ಯಾಟ್ಸ್‌ವುಮನ್‌ಗಳು ಬೇಗನೆ ವಿಕೆಟ್ ಒಪ್ಪಿಸಿದರು.

ಸುಲಭ ಗುರಿಯನ್ನು ಬೆನ್ನಟ್ಟಿದ ಕೃಷ್ಣ ತಂಡ 18.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಭಾನುವಾರ ಶತಕದ ದಾಖಲೆ ಮಾಡಿದ್ದ ಬೆಂಗಳೂರು ವಿ.ವಿ ಆಟಗಾರ್ತಿ ಸಿಮ್ರನ್ 20ರನ್‌ಗಳಿಗೆ ಎರಡು ವಿಕೆಟ್ ಕಬಳಿಸಿದರು. ಕೃಷ್ಣ ತಂಡದ ಸ್ನೇಹಾ 37 ರನ್‌ಗಳಿಸಿ ನೆರವಾದರು.

ಬೆಂಗಳೂರು ವಿಶ್ವವಿದ್ಯಾಲಯ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 86 (ಕೃತಿಕಾ 20, ಯಶಸ್ವಿನಿ 16, ಕೆ.ಸುಷ್ಮಾ 11ಕ್ಕೆ4, ಡಿ.ಚಂದ್ರಿಕಾ 14ಕ್ಕೆ3). ಕೃಷ್ಣ ವಿಶ್ವವಿದ್ಯಾಲಯ: ಆಂದ್ರಪ್ರದೇಶ: 18.2 ಓವರ್‌ಗಳಲ್ಲಿ 6 ವಿಕೆಟ್‌ಗೆ 90 (ಜಿ.ಸ್ನೇಹಾ 37, ಸಿಮ್ರನ್‌ ಹೆನ್ರಿ 20ಕ್ಕೆ2). ಫಲಿತಾಂಶ: ಕೃಷ್ಣ ವಿಶ್ವವಿದ್ಯಾಲಯಕ್ಕೆ 4 ವಿಕೆಟ್‌ಗಳ ಜಯ.

ಕೇರಳ ವಿ.ವಿ, ಕೇರಳ: 20 ಓವರ್‌ಗಳಲ್ಲಿ 8ವಿಕೆಟ್ ನಷ್ಟಕ್ಕೆ 66 (ಆಶ್ವತಿ ಬಾಬ 27; ಗೋಮತಿ 16ಕ್ಕೆ4, ಎಸ್‌.ಅನುಷಾ 3ಕ್ಕೆ2); ಮದರಾಸ್ ವಿ.ವಿ, ಚೆನ್ನೈ: 16 ಓವರ್‌ಗಳಲ್ಲಿ 2ವಿಕೆಟ್‌ಗೆ 70 (ಎಲ್‌.ನೇತ್ರಾ 26, ಹೇಮಲತಾ 22, ಜಪ್ಸಾ 8ಕ್ಕೆ1, ಅನೀಶಾ 19ಕ್ಕೆ1). ಫಲಿತಾಂಶ: ಮದರಾಸ್ ವಿಶ್ವವಿದ್ಯಾಲಯಕ್ಕೆ 8 ವಿಕೆಟ್‌ಗಳ ಜಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.