ಶುಕ್ರವಾರ, ಮಾರ್ಚ್ 5, 2021
16 °C
ಬ್ಟಿಟನ್‌ ವಲಸೆ ಸಚಿವ ಬ್ರಾಂಡನ್‌ ಲೆವಿಸ್‌ ಚಾಲನೆ

ಬೆಂಗಳೂರಲ್ಲಿ ಬ್ರಿಟನ್‌ ವೀಸಾ ಕೇಂದ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಲ್ಲಿ ಬ್ರಿಟನ್‌ ವೀಸಾ ಕೇಂದ್ರ ಆರಂಭ

ಬೆಂಗಳೂರು: ಬ್ರಿಟನ್‌ ವೀಸಾ ಮತ್ತು ವಲಸೆ ಸಚಿವಾಲಯ ಯುಕೆ ವೀಸಾ ಅರ್ಜಿ ಸ್ವೀಕಾರ ಕೇಂದ್ರವನ್ನು (ಪ್ರೀಮಿಯಂ ಲಾಂಜ್‌) ನಗರದಲ್ಲಿ ಮಂಗಳವಾರ ಆರಂಭಿಸಿತು.

ಬ್ರಿಟಿಷ್‌ ಡೆಪ್ಯುಟಿ ಹೈಕಮಿಷನ್‌ ವಿಎಫ್‌ಎಸ್‌ ಗ್ಲೋಬಲ್‌ ಸರ್ವಿಸ್‌ ಸಹಯೋಗದಲ್ಲಿ ವೈಟ್‌ಫೀಲ್ಡ್‌ನ ನಲ್ಲೂರಹಳ್ಳಿಯ ಬ್ರಿಗೇಡ್‌ ಐಆರ್‌ವಿ ಕಟ್ಟಡದಲ್ಲಿ ತೆರೆದಿರುವ ವೀಸಾ ಅರ್ಜಿ ಸ್ವೀಕಾರ ಕೇಂದ್ರಕ್ಕೆ ಬ್ರಿಟನ್‌ ವಲಸೆ ಸಚಿವ ಬ್ರಾಂಡನ್‌ ಲೆವಿಸ್‌ ಚಾಲನೆ ನೀಡಿದರು.

ವಾರದಲ್ಲಿ ಐದು ದಿನ ವೀಸಾ ಕೇಂದ್ರದಿಂದ ಸೇವೆ

ಸರ್ಕಾರಿ ರಜೆಗಳನ್ನು ಹೊರತುಪಡಿಸಿ, ವಾರದಲ್ಲಿ ಐದು ದಿನ (ಸೋಮವಾರದಿಂದ ಶುಕ್ರವಾರದವರೆಗೆ) ವೀಸಾ ಅರ್ಜಿ ಕೇಂದ್ರ ತೆರೆದಿರುತ್ತದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಈ ಮೊದಲು ವೀಸಾ ಪಡೆಯಲು ಚೆನ್ನೈಗೆ ತೆರಳಬೇಕಿತ್ತು. ಸಂಪರ್ಕಕ್ಕೆ ವೆಬ್‌ಸೈಟ್‌: www.vfsglobal.co.in.uk/india

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.