ಸೋಮವಾರ, ಮಾರ್ಚ್ 1, 2021
30 °C

ಕನಕ ಭವನ ನಿರ್ಮಾಣಕ್ಕೆ ₹1 ಕೋಟಿ ಬಿಡುಗಡೆ: ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕ ಭವನ ನಿರ್ಮಾಣಕ್ಕೆ ₹1 ಕೋಟಿ ಬಿಡುಗಡೆ: ಶಾಸಕ

ಸಿರುಗುಪ್ಪ: ನಗರದಲ್ಲಿ ಕನಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 1 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ಶಾಸಕ ಬಿ.ಎಂ.ನಾಗರಾಜ ತಿಳಿಸಿದರು. ಇಲ್ಲಿಯ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ನಡೆದ ಶ್ರೀಕನಕದಾಸರ 530ನೇ ಜಯಂತ್ಯುತ್ಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಜನವರಿಯಲ್ಲಿ ತಾಲ್ಲೂಕಿಗೆ ಬಂದ ಮುಖ್ಯಮಂತ್ರಿ ಕನಕಭವನ ನಿರ್ಮಾಣಕ್ಕೆ ₹ 2 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಒಂದು ಕೋಟಿ ನೀಡಿದ್ದು ಇನ್ನುಳಿದ ಒಂದು ಕೋಟಿ ನೀಡುವ ಭರವಸೆ ನೀಡಿದ್ದಾರೆ. ಶಾಸಕರ ಅನುದಾನದಡಿ ಕನಕ ಗುರುಪೀಠದ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದರು.

ತಹಶೀಲ್ದಾರ್‌ ಎಂ.ಸುನಿತಾ, ಉಪನ್ಯಾಸಕ ಎಂ.ಪಂಪಾಪತಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಡಿ.ಸೋಮಪ್ಪ ಕನಕದಾಸರ ಕುರಿತು ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀ ನಾಗೇಶಪ್ಪ, ನಗರಸಭೆ ಅಧ್ಯಕ್ಷೆ ಬಿ.ಪಾರಿಜಾತಮ್ಮ ಮುತ್ತಾಲಯ್ಯಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಕರಿಬಸಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿ.ಎಚ್‌.ರಾಧಾ ಧರಪ್ಪ ನಾಯಕ್‌, ಕೋಟೇಶ್ವರರೆಡ್ಡಿ, ಇ.ಒ.ಹನುಮಂತ ರೆಡ್ಡಿ, ಪೌರಾಯುಕ್ತ ಮರಿಲಿಂಗಪ್ಪ, ಬಿ.ಸಿ.ಎಂ. ಇಲಾಖೆ ಅಧಿಕಾರಿ ಶ್ಯಾಮಪ್ಪ, ಮುಖಂಡರಾದ ನಾಗೇಶಪ್ಪ, ಕಂಬಾಳಿಮಲ್ಲಿಕಾರ್ಜುನ, ಜಿ.ಶ್ರೀನಿವಾಸ, ಎಸ್‌.ಬಸವರಾಜ್‌ ಇದ್ದರು.

ನಗರದ ಅಭಯಾಂಜನೇಯ ಸ್ವಾಮಿ ದೇಗುಲದ ಹತ್ತಿರ ನೂತನ ಕನಕದಾಸರ ವೃತ್ತದ ನಾಮಫಲಕವನ್ನು ಶಾಸಕರು ಅನಾವರಣಗೊಳಿಸಿದರು. ಬಿಜೆಪಿ ಕಚೇರಿಯಲ್ಲಿ

ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಕನಕದಾಸರ 530ನೇ ಜಯಂತಿ ಆಚರಿಸಲಾಯಿತು. ಬಿಜೆಪಿ ಮುಖಂಡ ಎಂ.ಎಸ್.ಸೋಮಲಿಂಗಪ್ಪ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಕನಕದಾಸರು ಜಾತಿಪದ್ದತಿ ವಿರುದ್ದ ತಮ್ಮ ದಾಸ ಸಾಹಿತ್ಯದಲ್ಲಿ ಟೀಕಿಸಿದ್ದು, ಎಲ್ಲಾರಲ್ಲಿಯು ಸಮಾನತೆ ಕಾಣುವ ತತ್ವಗಳನ್ನು ಭೋಧಿಸಿದರು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.