ಪ್ರದರ್ಶನ ಕಲೆಗಳಾದ ನಾಟಕ, ನೃತ್ಯ, ಸಂಗೀತ, ಸಿನಿಮಾ, ಜಾನಪದ ಕಲೆಗಳ ಪ್ರದರ್ಶನಕ್ಕಾಗಿ ಈ ನ್ಯಾಷನಲ್ ಥಿಯೇಟರ್ ಅನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಮೂರು ಪ್ರದರ್ಶನ ಮಂದಿರಗಳಿವೆ. ಸಿನಿಮಾ ಮತ್ತು ನಾಟಕ ವೀಕ್ಷಣೆಗಾಗಿ ಸಿನಿಮಾ ಮಂದಿರವಿದೆ. ಜಾನಪದ, ನೃತ್ಯ ಕಲೆಗಳಿಗಾಗಿ ಒಪೇರಾ ಮಂದಿರ ಹಾಗೂ ಸಂಗೀತ ಕಛೇರಿಗಾಗಿ ಸಂಗೀತ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಈ ಥಿಯೇಟರ್ನಲ್ಲಿ ಏಕ ಕಾಲಕ್ಕೆ 5000 ಕ್ಕೂ ಹೆಚ್ಚು ಜನರು ಪ್ರದರ್ಶನ ಕಲೆಗಳನ್ನು ವೀಕ್ಷಣೆ ಮಾಡಬಹುದು.