ಮೊಟ್ಟೆಯಾಕಾದ ನ್ಯಾಷನಲ್‌ ಥಿಯೇಟರ್‌...

7

ಮೊಟ್ಟೆಯಾಕಾದ ನ್ಯಾಷನಲ್‌ ಥಿಯೇಟರ್‌...

Published:
Updated:
ಮೊಟ್ಟೆಯಾಕಾದ ನ್ಯಾಷನಲ್‌ ಥಿಯೇಟರ್‌...

ದೂರದಲ್ಲಿ ನಿಂತು ನೋಡಿದರೆ ಅಲ್ಲಿ ನೀರು, ಆ ನೀರಿನ ಮೇಲೆ ದೊಡ್ಡ ಮೊಟ್ಟೆಯೊಂದು ತೇಲುತ್ತಿರುತ್ತದೆ. ಈ ಕೌತುಕವನ್ನು ನೋಡಲು ಹತ್ತಿರಕ್ಕೆ ಹೋದರೆ ಅದು ಮೊಟ್ಟೆಯಾಕಾರದಲ್ಲಿರುವ ಬೃಹತ್ ಕಟ್ಟಡ. ಈ ಅನುಭವ ಕಣ್ತುಂಬಿಕೊಳ್ಳಬೇಕು ಎಂದರೆ ಚೀನಾ ರಾಜಧಾನಿ ಬೀಜಿಂಗ್‌ಗೆ ಒಮ್ಮೆ ಭೇಟಿ ನೀಡಬೇಕು.

ಬೀಜಿಂಗ್‌ನ ಪಶ್ಚಿಮ ಚಾಂಗ್ ಪ್ರದೇಶದಲ್ಲಿರುವ ಮೊಟ್ಟೆಯಾಕಾರದ ಬೃಹತ್ ಕಟ್ಟಡವನ್ನು ಚೀನಾ ಸರ್ಕಾರ ಪ್ರದರ್ಶನ ಕಲೆಗಳಿಗಾಗಿಯೇ ನಿರ್ಮಾಣ ಮಾಡಿದೆ. ಈ ಕಟ್ಟಡಕ್ಕೆ ನ್ಯಾಷನಲ್‌ ಥಿಯೇಟರ್‌ ಎಂದ ಹೆಸರಿಡಲಾಗಿದೆ. ಈ ಕಟ್ಟಡವನ್ನು ಫ್ರೆಂಚ್‌ ವಾಸ್ತುಶಿಲ್ಪಿ ಪೌಲ್ ಆ್ಯಂಡ್ರ್ಯೂ ವಿನ್ಯಾಸ ಮಾಡಿದ್ದಾರೆ. ಈ ಕಟ್ಟಡ ₹ 3000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. 3000 ಕ್ಕೂ ಕಾರ್ಮಿಕರು 6 ವರ್ಷಗಳಲ್ಲಿ ಈ ನ್ಯಾಷನಲ್‌ ಥಿಯೇಟರ್‌ ಅನ್ನು ಕಟ್ಟಿದ್ದಾರೆ.

ಪ್ರದರ್ಶನ ಕಲೆಗಳಾದ ನಾಟಕ, ನೃತ್ಯ, ಸಂಗೀತ, ಸಿನಿಮಾ, ಜಾನಪದ ಕಲೆಗಳ ಪ್ರದರ್ಶನಕ್ಕಾಗಿ ಈ ನ್ಯಾಷನಲ್‌ ಥಿಯೇಟರ್‌ ಅನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಮೂರು ಪ್ರದರ್ಶನ ಮಂದಿರಗಳಿವೆ.  ಸಿನಿಮಾ ಮತ್ತು ನಾಟಕ ವೀಕ್ಷಣೆಗಾಗಿ ಸಿನಿಮಾ ಮಂದಿರವಿದೆ. ಜಾನಪದ, ನೃತ್ಯ ಕಲೆಗಳಿಗಾಗಿ ಒಪೇರಾ ಮಂದಿರ ಹಾಗೂ ಸಂಗೀತ ಕಛೇರಿಗಾಗಿ ಸಂಗೀತ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಈ ಥಿಯೇಟರ್‌ನಲ್ಲಿ ಏಕ ಕಾಲಕ್ಕೆ 5000 ಕ್ಕೂ ಹೆಚ್ಚು ಜನರು ಪ್ರದರ್ಶನ ಕಲೆಗಳನ್ನು ವೀಕ್ಷಣೆ ಮಾಡಬಹುದು.

ಅರ್ಧ ಮೊಟ್ಟೆಯಾಕರದಲ್ಲಿನ ಗೋಳವನ್ನು ಟೈಟಾನಿಯಂ ಮತ್ತು ಗಾಜು ಬಳಸಿ ರೂಪಿಸಲಾಗಿದೆ. ಉತ್ತರ ದಿಕ್ಕಿಗೆ ಮುಖ್ಯ ಪ್ರವೇಶ ದ್ವಾರವಿದೆ. ನ್ಯಾಷನಲ್‌ ಥಿಯೇಟರ್‌ ಗೋಳದ ಎತ್ತರ 46 ಮೀಟರ್‌ ಇದೆ. ಪೂರ್ವ ಮತ್ತು ಪಶ್ಚಿಮಕ್ಕೆ 122 ಮೀಟರ್‌ ಉದ್ದ,  ಉತ್ತರ ಮತ್ತು ದಕ್ಷಿಣಕ್ಕೆ 146 ಉದ್ದವನ್ನು ಹೊಂದಿದೆ. ಫ್ರೆಂಚ್‌ ವಾಸ್ತು ಶೈಲಿಯಲ್ಲಿರುವ ನ್ಯಾಷನಲ್‌ ಥಿಯೇಟರ್‌ ವಿಶ್ವದ ಆಕರ್ಷಕ ಕಟ್ಟಡಗಳಲ್ಲಿ ಒಂದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry