ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆಯ ಆಮಿಷ: ಶೀಘ್ರವೇ ಆರ್‌ಬಿಐ ‌ತಿಳಿವಳಿಕೆ ಅಭಿಯಾನ

Last Updated 9 ನವೆಂಬರ್ 2017, 19:44 IST
ಅಕ್ಷರ ಗಾತ್ರ

ಮುಂಬೈ: ವಂಚನೆ ಉದ್ದೇಶದ ಎಸ್‌ಎಂಎಸ್‌, ಮೊಬೈಲ್‌ ಕರೆ ಮತ್ತು ಇ–ಮೇಲ್‌ಗಳ ಬಗ್ಗೆ ಬ್ಯಾಂಕ್‌ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶೀಘ್ರದಲ್ಲಿಯೇ ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ.

ವಂಚಕರ ಬಲೆಗೆ ಬೀಳದಂತೆ ಗ್ರಾಹಕರಿಗೆ ಎಸ್‌ಎಂಎಸ್‌ ಮತ್ತು ಇ–ಮೇಲ್‌ ಮೂಲಕ ಮಾಹಿತಿ ಒದಗಿಸುವ ಈ ಕಾರ್ಯಕ್ರಮಕ್ಕೆ ‘ಸುನೋ ಆರ್‌ಬಿಐ ಕ್ಯಾ ಕೆಹ್ತಾ ಹೈ’ ಎಂದು ಹೆಸರು ಇಡಲಾಗಿದೆ.

ಆಕರ್ಷಕ ಹಣಕಾಸಿನ ಪ್ರಯೋಜನ ಮತ್ತು ಲಾಟರಿ ಹಣದ ಆಮಿಷ ಒಡ್ಡಿ ಗ್ರಾಹಕರ ಬ್ಯಾಂಕ್‌, ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌, ಆಧಾರ್‌ ವಿವರಗಳನ್ನು ಪಡೆದು ವಂಚಿಸುವವರ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವುದು ಈ ಜಾಗೃತಿ ಅಭಿಯಾನದ ಉದ್ದೇಶವಾಗಿದೆ.

ಬ್ಯಾಂಕ್‌ಗಳ ಹಲವಾರು ನಿಯಂತ್ರಣ ಕ್ರಮಗಳು ಮತ್ತು ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಗುವುದು. ಗ್ರಾಹಕರಿಗೆ ಬರುವ ಎಸ್‌ಎಂಎಸ್‌ಗಳು ‘ಆರ್‌ಬಿಐಸೇ’ (RBISAY) ಹೆಸರಿನಲ್ಲಿ ಇರಲಿವೆ. ಗ್ರಾಹಕರಿಗೆ ಆಮಿಷ ಒಡ್ಡಲು ವಂಚಕರು ಬಳಸುವ ಎಸ್‌ಎಂಎಸ್‌ ವಿಧಾನವನ್ನೇ ಅನುಸರಿಸಲು ಆರ್‌ಬಿಐ ನಿರ್ಧರಿಸಿದೆ.

ಗ್ರಾಹಕರು 86919 60000 ಮೊಬೈಲ್‌ ಸಂಖ್ಯೆಗೆ ಮಿಸ್ಡ್‌ ಕಾಲ್‌ ಕೊಟ್ಟು ವಂಚಕರ ಎಸ್‌ಎಂಎಸ್‌, ಇ–ಮೇಲ್‌ ಮತ್ತು ಕರೆಗಳ ಬಗ್ಗೆ ಮಾಹಿತಿ ಪಡೆಯಬಹುದು. ಜನರು ಚಿಟ್‌ಫಂಡ್‌ಗಳಲ್ಲಿ ಹಣ ತೊಡಗಿಸುವ ಮುನ್ನ ಹೆಚ್ಚು ಜಾಗ್ರತೆ ವಹಿಸಬೇಕು ಎಂದೂ ಆರ್‌ಬಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT