ಶನಿವಾರ, ಮಾರ್ಚ್ 6, 2021
24 °C

ನೋಟು ರದ್ದತಿಯಿಂದಾಗಿ ಉಳಿತಾಯದ ರೀತಿ ಬದಲಾಗಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೋಟು ರದ್ದತಿಯಿಂದಾಗಿ ಉಳಿತಾಯದ ರೀತಿ ಬದಲಾಗಿದೆ

ನವದೆಹಲಿ: ನೋಟು ರದ್ದು  ದೇಶದ ಜನರ ಹಣ ಉಳಿತಾಯ ರೀತಿಯಲ್ಲಿ ಬದಲಾವಣೆಯನ್ನು ತಂದಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.

2016 -17ರ ಅವಧಿಯಲ್ಲಿ ಉಳಿತಾಯ ಹೂಡಿಕೆ, ಶೇರ್, ಡಿಬೆಂಚರ್‍‍ಗಳು, ಇನ್ಶೂರೆನ್ಸ್ ಫಂಡ್, ಪಿಂಚಣಿ ಫಂಡ್ ಎಲ್ಲವೂ ಶೇ.48ರಷ್ಟು ಏರಿಕೆ ಕಂಡಿದೆ.

ಅದೇ ವೇಳೆ  ಜುಲೈ 2016- ಜುಲೈ 2017ರ ಅವಧಿಯಲ್ಲಿ ಮ್ಯೂಚ್ವಲ್ ಫಂಡ್‍ಗಳಲ್ಲಿ ಶೇ. 45ರಷ್ಟು ಏರಿಕೆಯಾಗಿದೆ ಎಂದು ವಿತ್ತ ಸಚಿವಾಲಯ ಸಂಸದೀಯ ಸಮಿತಿಗೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ. ಜುಲೈ 2017ರವರೆಗೆ ಮ್ಯೂಚ್ವಲ್ ಫಂಡ್‍ನಲ್ಲಿ ಶೇ. 45ರಷ್ಟು ಏರಿಕೆ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನೋಟು ರದ್ದತಿಯಿಂದಾಗಿ ಜನರ ಉಳಿತಾಯದ ರೀತಿ ಬದಲಾಗಿದೆ. ಜನರೀಗ ವ್ಯವಸ್ಥಿತ ರೀತಿಯಲ್ಲಿ ಉಳಿತಾಯ ಮಾಡುತ್ತಿದ್ದಾರೆ.

ಇಕ್ವಿಟಿ ಶೇರ್ ಮತ್ತು ಮ್ಯೂಚ್ವಲ್ ಫಂಡ್‍ಗಳು ಶೇ.5.29ರಿಂದ 2016ರಲ್ಲಿ ಶೇ. 11.04ಕ್ಕೆ ಏರಿಕೆಯಾಗಿದೆ. 2016-17ರ ಅಧಿಯ ನಿವ್ವಳ ಆದಾಯದ ಹಣಕಾಸು ಸಾಧನಗಳಲ್ಲಿ ಉಳಿತಾಯ (ಜಿಎನ್‌ಡಿಐ)ದಲ್ಲಿ ಹೂಡಿಕೆ, ಶೇರ್ ಮತ್ತು ಡಿಬೆಂಚರ್ಸ್, ಇನ್ಶೂರೆನ್ಸ್ ಫಂಡ್ ,ಪ್ರೊವಿಡೆಂಟ್ ಮತ್ತು ಪೆನ್ಶನ್ ಫಂಡ್‌ಗಳು ಶೇ 9ರಿಂದ ಶೇ. 13.3ರಷ್ಟು ಏರಿಕೆಯಾಗಿದೆ. ಅಂದರೆ ಒಟ್ಟು  ಶೇ.48ರಷ್ಟು ಏರಿಕೆಯಾಗಿದೆ ಎಂದು ವಿತ್ತ ಸಚಿವಾಲಯ ವರದಿಯಲ್ಲಿ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.