ಶುಕ್ರವಾರ, ಮಾರ್ಚ್ 5, 2021
23 °C

500 ಜನರಿಗೆ ಕೃತಕ ಕಾಲುಗಳ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

500 ಜನರಿಗೆ ಕೃತಕ ಕಾಲುಗಳ ವಿತರಣೆ

ಬೆಂಗಳೂರು: ಬೆಂಗಳೂರು ರೌಂಡ್ ಟೇಬಲ್ 7, ಬೆಂಗಳೂರು ಲೇಡಿಸ್ ಸರ್ಕಲ್ 19 ಹಾಗೂ ರೌಂಡ್ ಟೇಬಲ್ ಇಂಡಿಯಾ ಫೌಂಡೇಷನ್‌ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ 37ನೇ ವಾರ್ಷಿಕ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚಿನ ಜನರಿಗೆ ಕೃತಕ ಕಾಲುಗಳನ್ನು ವಿತರಿಸಲಾಯಿತು.

‘ಕೃತಕ ಕಾಲು ಜೋಡಣೆಗೆ ನೆರವಾಗುವ ಉದ್ದೇಶದಿಂದ ಹೆಲ್ಪ್‌ ಸಮ್‌ಒನ್‌ ವಾಕ್‌ ಎಂಬ ಅಭಿಯಾನವನ್ನು ಆರಂಭಿಸಿದ್ದೆವು. ಈ ವರ್ಷ ₹5 ಲಕ್ಷ ದೇಣಿಗೆ ಸಂಗ್ರಹಿಸಿದ್ದೇವೆ. ಈ ಹಣದಲ್ಲಿ ಖರೀದಿಸಿದ ಕೃತಕ ಕಾಲುಗಳನ್ನು ಮಹಾವೀರ್‌ ಜೈನ್‌ ಆಸ್ಪತ್ರೆಗೆ ಹಸ್ತಾಂತರಿಸಿದ್ದೇವೆ’ ಎಂದು ರೌಂಡ್ ಟೇಬಲ್ 7ರ ಅಧ್ಯಕ್ಷ ನಿತಿನ್ ಬನ್ಸಾಲ್ ತಿಳಿಸಿದರು.

‘ಕಾಲು ಕಳೆದುಕೊಂಡಿರುವವರು ಕೃತಕ ಕಾಲುಗಳಿಂದಾಗಿ ಓಡಾಡಲು ಸಾಧ್ಯವಾಗಿದೆ. ಅವರ ಗೌರವಯುತ ಜೀವನಕ್ಕೆ ಇದು ಸಹಕಾರಿ’ ಎಂದು ಲೇಡಿಸ್ ಸರ್ಕಲ್ 19ರ ಅಧ್ಯಕ್ಷೆ ಜ್ಯೋತಿ ಬನ್ಸಾಲ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.