ಭಾನುವಾರ, ಮಾರ್ಚ್ 7, 2021
28 °C

ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸಿದ ಮಳೆ

ಮೈಸೂರು: ಜಿಲ್ಲೆಯಲ್ಲಿ ಸತತ ಮೂರು ವರ್ಷ ಬರಗಾಲದಿಂದ ಕುಸಿದಿದ್ದ ಅಂತರ್ಜಲ ಮಟ್ಟವು ಈ ವರ್ಷ ಬಿದ್ದ ಉತ್ತಮ ಮಳೆಯಿಂದಾಗಿ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು 2015ರ ಜನವರಿಯಲ್ಲಿ 35.48 ಅಡಿ, 2016ರಲ್ಲಿ 35.32 ಅಡಿ ಇತ್ತು. 2017ರ ಜನವರಿಯಲ್ಲಿ 47.23 ಅಡಿ ಇತ್ತು. ಆಗಸ್ಟ್‌ ನಂತರ ಸುರಿದ ಉತ್ತಮ ಮಳೆಯಿಂದಾಗಿ ನೀರಿನ ಮಟ್ಟದಲ್ಲಿ ಸಾಕಷ್ಟು ಏರಿಕೆಯಾಗಿದೆ. ಸರಾಸರಿ 16.30 ಅಡಿಯಷ್ಟು ಅಂತರ್ಜಲ ಮಟ್ಟ ಹೆಚ್ಚಿದೆ.

ಮೈಸೂರು ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗಿರುವ ಕಾರಣ, ಸೆಪ್ಟೆಂಬರ್‌ನಲ್ಲಿ 16.27 ಅಡಿಯಷ್ಟು ಏರಿಕೆಯಾಗಿದೆ. ಎಚ್‌.ಡಿ.ಕೋಟೆಯಲ್ಲಿ 1.41 ಅಡಿಯಷ್ಟು ಮಾತ್ರ ಹೆಚ್ಚಿದೆ. 2016 ಮತ್ತು 2017ನೇ ಸಾಲಿನ ಸೆಪ್ಟೆಂಬರ್‌ನ ತಾಲ್ಲೂಕುವಾರು ಸರಾಸರಿ ಅಂತರ್ಜಲ ಮಟ್ಟವನ್ನು ಹೋಲಿಸಿದಾಗ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ನೀರಿನ ಮಟ್ಟ ಏರಿದೆ. ಹುಣಸೂರು ತಾಲ್ಲೂಕಿನಲ್ಲಿ ಮಾತ್ರ ಸ್ಥಿರವಾಗಿದೆ.ಸೆಪ್ಟೆಂಬರ್‌ನಲ್ಲಿ ಮೈಸೂರು ತಾಲ್ಲೂಕಿನ ಜಯಪುರದ ಅಧ್ಯಯನ ಕೊಳವೆಬಾವಿಯಲ್ಲಿ ಗರಿಷ್ಠ 29.61 ಅಡಿ ಏರಿದೆ. ತಿ.ನರಸೀಪುರ ತಾಲ್ಲೂಕಿನ ತುರಗನೂರಿನ ಅಧ್ಯಯನ ಕೊಳವೆಬಾವಿಯಲ್ಲಿ 0.16 ಅಡಿ ಏರಿದ್ದರೆ, ನಂಜನಗೂಡು ತಾಲ್ಲೂಕಿನ ಕವಲಂದೆ ಅಧ್ಯಯನ ಕೊಳವೆಬಾವಿಯಲ್ಲಿ 1.77 ಅಡಿ ಇಳಿದಿದೆ. ಕೆ.ಆರ್‌.ನಗರ ತಾಲ್ಲೂಕಿನ ಬೊಮ್ಮೇನಹಳ್ಳಿ, ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರ ಮತ್ತು ಪಿರಿಯಾಪಟ್ಟಣ ತಾಲ್ಲೂಕಿನ ಕಣಕಾಲು ಅಧ್ಯಯನ ಕೊಳವೆಬಾವಿಯಲ್ಲಿ ನೀರು ನೆಲಮಟ್ಟದಲ್ಲಿದೆ.ಮಳೆಯೇ ಮುಖ್ಯ ಕಾರಣ: ‘ನೀರಿನ ಏರಿಕೆಗೆ ಮಳೆಯೇ ಮುಖ್ಯ ಕಾರಣ’ ಎಂದು ಜಿಲ್ಲಾ ಅಂರ್ತಜಲ ಕಚೇರಿ ಹಿರಿಯ ಭೂವಿಜ್ಞಾನಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮೂರು ವರ್ಷಗಳ ಸತತ ಬರಗಾಲದಿಂದ ಅಂತರ್ಜಲ ಮಟ್ಟ ಕುಸಿದಿತ್ತು. ಈ ವರ್ಷ ಮುಂಗಾರು ಉತ್ತಮಗೊಂಡ ಕಾರಣ, ಕೃಷಿ ಚಟುವಟಿಕೆಗಳಿಗೆ ರೈತರು ಕೊಳವೆಬಾವಿಗಳನ್ನು ಬಳಸಿಲ್ಲ. ಈ ಕಾರಣದಿಂದ ಅಂತರ್ಜಲ ಮಟ್ಟ ಏರಿದೆ. ಅಲ್ಲದೇ, ಕೆರೆಗಳು ತುಂಬಿರುವ ಕಾರಣ, ಅಂತರ್ಜಲ ಪುನಶ್ಚೇತನಗೊಂಡಿದೆ’ ಎಂದು ಮಾಹಿತಿ ನೀಡಿದರು. ಇದರಿಂದಾಗಿ ಜಿಲ್ಲೆಯ ಶೇ 94ರಷ್ಟು ಕೊಳವೆಬಾವಿಗಳಲ್ಲಿ ನೀರು ಏರಿದೆ, ಶೇ 2ರಷ್ಟು ಸ್ಥಿರತೆ ಕಂಡಿದೆ. ಶೇ 4ರಷ್ಟಲ್ಲಿ ಮಾತ್ರ ಇಳಕೆ ದಾಖಲಾಗಿದೆ ಎಂದರು.ತಾಲ್ಲೂಕುವಾರು ಅಂತರ್ಜಲ ಪ್ರಮಾಣ ಪಟ್ಟಿ (ಅಡಿಗಳಲ್ಲಿ)

ತಾಲ್ಲೂಕು         ಸೆ. 2016        ಅ.2017     2016ರಿಂದ 2017 ಸರಾಸರಿ ಏರಿಕೆ

ಎಚ್‌.ಡಿ.ಕೋಟೆ    60.41           63.63       1.41

ಹುಣಸೂರು        53.95           64.48       ಸ್ಥಿರ

ಕೆ.ಆರ್‌.ನಗರ      29.94           42.24       4

ಮೈಸೂರು         40.54           36.53       16.27

ನಂಜನಗೂಡು      39.68           40.83       2.2

ಪಿರಿಯಾಪಟ್ಟಣ      40.24           32.93      15.77

ತಿ.ನರಸೀಪುರ       28.73          28.63      4.13

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.