ಮಂಗಳವಾರ, ಮಾರ್ಚ್ 9, 2021
18 °C

ತಲೆಯನ್ನು 180 ಡಿಗ್ರಿಗೆ ತಿರುಗಿಸಿ ಅಚ್ಚರಿ ಮೂಡಿಸಿದ ಬಾಲಕ: ವಿಡಿಯೊ ನೋಡಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ತಲೆಯನ್ನು 180 ಡಿಗ್ರಿಗೆ ತಿರುಗಿಸಿ ಅಚ್ಚರಿ ಮೂಡಿಸಿದ ಬಾಲಕ: ವಿಡಿಯೊ ನೋಡಿ

ಕರಾಚಿ: ಇಲ್ಲಿನ 14 ವರ್ಷದ ಮೊಹಮ್ಮದ್ ಸಮೀರ್ ತಲೆಯನ್ನು 180 ಡಿಗ್ರಿಗೆ ತಿರುಗಿಸುವ ಮೂಲಕ ನೋಡುಗರಲ್ಲಿ ಅಚ್ಚರಿ ಮೂಡಿಸಿದ್ದಾನೆ.

ಸದ್ಯ ‘ಡೇಂಜರಸ್‌’ ಎಂಬ ನೃತ್ಯ ತಂಡದಲ್ಲಿ ಡ್ಯಾನ್ಸರ್‌ ಆಗಿ ಸಮೀರ್‌ ಕೆಲಸ ಮಾಡುತ್ತಿದ್ದು, ಇವರ ತಂಡ ಕರಾಚಿಯಲ್ಲಿ ವಿಶಿಷ್ಟ ಪ್ರದರ್ಶನ ನೀಡುವ ಮೂಲಕ ಜನರಿಂದ ಪ್ರಶಂಸೆ ಗಳಿಸಿದೆ.

ಸಮೀರ್‌ ತಂದೆ ಸಾಜಿದ್‌ ಖಾನ್‌(49) ಎರಡು ಬಾರಿ ಪಾಶ್ವವಾಯು ಕಾಯಿಲೆಗೆ ತುತ್ತಾಗಿ ಕೆಲಸ ಕಳೆದುಕೊಂಡಿದ್ದಾರೆ. ಇದೇ ವೇಳೆ ಸಮೀರ್‌ ಶಾಲೆ ಬಿಟ್ಟು ಹಣ ಸಂಪಾದಿಸಲು ನಿರ್ಧರಿಸಿ, ಡ್ಯಾನ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾನೆ. ಇದರಿಂದ ಬಂದ ಹಣದಿಂದ ಕುಟುಂಬ ನಿರ್ವಾಹಣೆ ಮಾಡುತ್ತಿದ್ದಾನೆ.

ನೃತ್ಯ ಪ್ರದರ್ಶನಗಳಲ್ಲಿ ಸಮೀರ್‌ ತನ್ನ ತಲೆಯನ್ನು 180 ಡಿಗ್ರಿಗೆ ತಿರುಗಿಸುವ ವಿಶಿಷ್ಟ ಕೌಶಲದಿಂದ ನೋಡುಗರನ್ನು ಹೆಚ್ಚು ಆಕರ್ಷಿಸುತ್ತಿದ್ದಾನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.