7

ಮೇಲೆಳೆದುಕೊಂಡ ಸೋಲು

Published:
Updated:

ಶತಾಯ- ಗತಾಯ ಟಿಪ್ಪು ಜಯಂತಿಯನ್ನು ಆಚರಿಸಿಯೇ ತೀರುವ ಹುಚ್ಚಾಟದಲ್ಲಿ ಸರ್ಕಾರ ಗೆದ್ದಂತೆ ಭಾವಿಸಿರಬಹುದು. ಆದರೆ ಯಥಾರ್ಥವಾಗಿ ಇದೊಂದು ಸೋತ ಯುದ್ಧವೇ ಸರಿ! ಈ ಆಚರಣೆಯಿಂದ ಸಮಾಜದ ಯಾವುದೇ ವರ್ಗಕ್ಕೂ ಯಾವ ಐಹಿಕ ಪ್ರಯೋಜನವೂ ಆದಂತಿಲ್ಲ.

ಮೈಸೂರಿನ ಒಬ್ಬ ಹಳೆ ಸುಲ್ತಾನನ ಆಡಳಿತ ತಾರಕವಾಗಿತ್ತೋ, ಮಾರಕವಾಗಿತ್ತೋ ಎನ್ನುವ ಪ್ರಶ್ನೆ ಇಲ್ಲಿಲ್ಲ. ಹಟದ ಈ ಆಚರಣೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಯ ಕೊರತೆಯನ್ನಂತೂ ತೋರಿಸುವಂತಿದೆ. ಟಿಪ್ಪು ಜಯಂತಿಯಿಂದಾಗಿ ಪಕ್ಷಕ್ಕೆ ಒಂದಿಷ್ಟು ಮತಗಳು ಹೆಚ್ಚಾಗಿ ಬರಬಹುದು. ಆದರೆ ಅಷ್ಟೇ ಪ್ರಮಾಣದ ಮತಗಳನ್ನು ಕಳೆದುಕೊಳ್ಳುವ ಸಂಭವವೂ ಇಲ್ಲದಿಲ್ಲ!

ಈ ಮತಗಳೆಲ್ಲಾ ನೇರವಾಗಿ ಬಿಜೆಪಿಗೇ ಹೋಗುತ್ತವೆಂದಲ್ಲ; ಕೆಲವು ಜೆಡಿಎಸ್‍ಗೂ ಜಾರಬಹುದು. ಆದರೆ ಬಹುತೇಕ ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆಗೇ ಒದಗಿಬರಬಹುದು. ಯಾವುದೇ ಪಕ್ಷಕ್ಕೆ ಬಹುಮತವಿಲ್ಲದ ಸದನದಲ್ಲಿ ಇದು ಪ್ರಜಾಸತ್ತೆಗೆ ದುಪ್ಪಟ್ಟು ಹಾನಿಯನ್ನೇ ತಂದೀತು. ಜಯಂತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಟಸ್ಥವಾಗಿರುತ್ತಿದ್ದರೆ, ಯಥಾಸ್ಥಿಯನ್ನಾದರೂ ಉಳಿಸಿಕೊಳ್ಳುವ ಸಾಧ್ಯತೆ ಇರುತ್ತಿತ್ತು. ಮುಂದಿನ ವಿಧಾನಸಭೆ ಅತಂತ್ರವಾದರೆ, ಆ ದುರಿತಕ್ಕೆ ಈಗಿನ ಮುಖ್ಯಮಂತ್ರಿ ನೇರ ಹೊಣೆಗಾರರಾಗುತ್ತಾರೆ!

ಆರ್.ಕೆ. ದಿವಾಕರ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry