7

ಪ್ರಜಾವಾಣಿ ಕ್ವಿಜ್‌

Published:
Updated:
ಪ್ರಜಾವಾಣಿ ಕ್ವಿಜ್‌

1) ದೇಶದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಹುಟ್ಟುಹಬ್ಬವನ್ನು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ?

a) ರಾಷ್ಟ್ರೀಯ ಏಕಾತ ದಿನ

b) ರಾಷ್ಟ್ರೀಯ ಸ್ವಾತಂತ್ರ್ಯ ದಿನ

c) ರಾಷ್ಟ್ರೀಯ ಗಣರಾಜ್ಯೋತ್ಸವ ದಿನ

d) ರಾಷ್ಟ್ರೀಯ ಮಾನವಹಕ್ಕು ದಿನ

2) ಸಂಗೀತ ವಿದ್ವಾನ್‌ ‘ಹೃದಯನಾಥ್‌ ಮಂಗೇಷ್ಕೇರ್’ ರಾಷ್ಟ್ರೀಯ ಪ್ರಶಸ್ತಿಯನ್ನು 2017ರಲ್ಲಿ ಯಾರಿಗೆ ನೀಡಲಾಗಿದೆ?

a) ಜಾವೇದ್ ಅಖ್ತರ್

b) ವಿರಾಟ್‌ ಕೊಹ್ಲಿ

c) ಲತಾ ಮಂಗೇಷ್ಕೇರ್

d) ಆನಂದ್ ಮಿಲಿಂದ್‌

3) 14ನೇ ಸಾರ್ಕ್‌ ಕಾನೂನು (SAARCLAW) ಸಮ್ಮೇಳನ ನಡೆದ ಸ್ಥಳ ಮತ್ತು ದೇಶವನ್ನು ಗುರುತಿಸಿ? 

a) ಕೊಲಂಬೊ–ಶ್ರೀಲಂಕಾ

b) ನೇಪಾಳ–ಕಠ್ಮಂಡ್

c) ನವದೆಹಲಿ–ಭಾರತ

d) ಇಸ್ಲಾಮಾಬಾದ್‌–ಪಾಕಿಸ್ತಾನ

4) 152 ಲಕ್ಷ ವರ್ಷದಷ್ಟು ಹಳೆಯದಾದ ‘ಇಚ್ಚಿಯೋಸಾರ್’ ಪಳೆಯುಳಿಕೆಯನ್ನು ಭಾರತೀಯ ಭೂಗರ್ಭಶಾಸ್ತ್ರಜ್ಞರು ಗುಜರಾತ್‌ನಲ್ಲಿ ಪತ್ತೆ ಮಾಡಿದ್ದಾರೆ. ಈ ‘ಇಚ್ಚಿಯೋಸಾರ್’ ಯಾವ ಜಲವಾಸಿಯನ್ನು ಹೋಲುತ್ತದೆ?

a) ಸಮುದ್ರ ಆಮೆ

b) ಮೊಸಳೆ

c) ಡಾಲ್ಫಿನ್

d) ನಕ್ಷತ್ರಮೀನು

5) 1857ರ ಸಿಪಾಯಿ ದಂಗೆಯನ್ನು ಮೊಟ್ಟಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಪರಿಗಣಿಸಲಾಗಿದೆ. ಆದರೆ ಇದಕ್ಕೂ ಮುನ್ನ ಬ್ರಿಟಿಷರ ವಿರುದ್ಧ ನಡೆದ ಬಂಡಾಯ ಯಾವುದು?

a) ಬೈಜಾಕಿ ಬಂಡಾಯ

b) ವಂಗ ಭಂಗ ಬಂಡಾಯ

c) ವಾಘ ಬಂಡಾಯ

d) ಪೈಕಾ ಬಂಡಾಯ

6) ಜಮ್ಮು ಮತ್ತು ಕಾಶ್ಮೀರದಲ್ಲಿನ ಶಾಂತಿಮಾತುಕತೆಗಾಗಿ ಸರ್ಕಾರದ ಪ್ರತಿನಿಧಿಯಾಗಿ ಕೇಂದ್ರ ಸರ್ಕಾರ ಯಾರನ್ನು ನೇಮಕ ಮಾಡಿದೆ?

a) ಶ್ರೀ ರವಿಶಂಕರ್ ಗುರೂಜಿ

b) ದಿನೇಶ್ವರ್ ಶರ್ಮಾ

c) ಫಾರೂಕ್ ಅಬ್ದುಲ್ಲ

d) ಲಾಲ್‌ ಕೃಷ್ಣ ಆಡ್ವಾಣಿ

7) ವಿಶ್ವಸಂಸ್ಥೆ ಸ್ಥಾಪನೆಯಾದ ದಿನವನ್ನು ಜಾಗತಿಕವಾಗಿ ‘ವಿಶ್ವಸಂಸ್ಥೆ ದಿನ’ ಎಂದು ಆಚರಣೆ ಮಾಡಲಾಗುತ್ತದೆ. ಆ ದಿನ ಯಾವುದು? 

a) 1945 ಅಕ್ಟೋಬರ್ 24

b) 1948 ಅಕ್ಟೋಬರ್ 26

c) 1949 ಅಕ್ಟೋಬರ್ 24

d) 1950 ಅಕ್ಟೋಬರ್ 14

8) 2017ರ ಅಕ್ಟೋಬರ್ 21ರಂದು ರಾಬರ್ಟ್ ಮುಗಾಬೆ ಅವರನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ)ಯ ರಾಯಭಾರಿ ಸ್ಥಾನದಿಂದ ವಜಾ ಮಾಡಲಾಯಿತು. ಪ್ರಸ್ತುತ ಅವರು ಯಾವ ದೇಶದ ಅಧ್ಯಕ್ಷರಾಗಿದ್ದಾರೆ?

a) ನೈಜೀರಿಯಾ

b) ಜಿಂಬಾಬ್ವೆ

c) ಸೋಮಾಲಿಯಾ

d) ದಕ್ಷಿಣ ಆಫ್ರಿಕಾ

9) ಇತ್ತೀಚೆಗೆ ಕೇಂದ್ರ ಸರ್ಕಾರ ಯಾವ ಹಿರಿಯ ಐಪಿಎಸ್‌ ಅಧಿಕಾರಿಗೆ ಸಿಬಿಐ (ಕೇಂದ್ರೀಯ ತನಿಖಾ ಸಂಸ್ಥೆ )ನ ವಿಶೇಷ ಹೆಚ್ಚುವರಿ ನಿರ್ದೇಶಕರನ್ನಾಗಿ ಬಡ್ತಿ ನೀಡಿದೆ?

a) ಸುದೀಪ್ ಲಖಾತಿಯಾ

b) ರಾಜೇಶ್ ರಂಜನ್

c) ಎ.ಪಿ. ಮಹೇಶ್ವರಿ

d) ರಾಕೇಶ್ ಅಸ್ಥಾನಾ

10) ವೈದ್ಯಕೀಯ ನಿಯತಕಾಲಿಕೆ ‘ಲ್ಯಾನ್ಸೆಟ್’  ಅಧ್ಯಯನದ ಪ್ರಕಾರ 2015ರಲ್ಲಿ ವಿಶ್ವದಲ್ಲೇ ಮಾಲಿನ್ಯ ಸಂಬಂಧಿ ಅತಿ ಹೆಚ್ಚು ಸಾವುಗಳು ಯಾವ ದೇಶದಲ್ಲಿ ಸಂಭವಿಸಿವೆ?  

a) ಅಮೆರಿಕ

b) ಜರ್ಮನಿ

c) ಭಾರತ 

d) ಚೀನಾ

ಉತ್ತರಗಳು: 1-a, 2-a, 3- a, 4-c, 5-d, 6-b, 7-a, 8-b, 9-d, 10-c.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry