ದೇಬಜಾನಿ ಘೋಷ್ ನಾಸ್ಕಾಂನ ಮೊದಲ ನಿಯೋಜಿತ ಅಧ್ಯಕ್ಷೆ

ನವದೆಹಲಿ: ಸಾಫ್ಟ್‌ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟದ (ನಾಸ್ಕಾಂ) ಅಧ್ಯಕ್ಷೆಯಾಗಿ ದೇಬಜಾನಿ ಘೋಷ್ ಅವರನ್ನು ನೇಮಿಸಲಾಗಿದೆ.
ಆರ್. ಚಂದ್ರಶೇಖರ್ ಅವರ ಅಧಿಕಾರಾವಧಿಯು ಮುಂದಿನ ವರ್ಷದ ಮಾರ್ಚ್‌ನಲ್ಲಿ ಕೊನೆಗೊಳ್ಳುತ್ತಿದ್ದಂತೆ ದೇಬಜಾನಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ಇಂಟೆಲ್‌ನ ದಕ್ಷಿಣ ಭಾರತದ ಮಾಜಿ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಘೋಷ್, ‘ನಾಸ್ಕಾಂ’ನ ಮೊದಲ ಅಧ್ಯಕ್ಷೆಯಾಗಲಿದ್ದಾರೆ. ಸದ್ಯಕ್ಕೆ ಇವರು ‘ನಾಸ್ಕಾಂ’ನ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯೆ ಮತ್ತು ‘ನಾಸ್ಕಾಂ ಫೌಂಡೇಷನ್’ ಟ್ರಸ್ಟಿಯಾಗಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.