ಭಾನುವಾರ, ಫೆಬ್ರವರಿ 28, 2021
23 °C

ಮೋದಿ–ಟ್ರಂಪ್‌ ಮುಖಾಮುಖಿ

ಪಿಟಿಐ Updated:

ಅಕ್ಷರ ಗಾತ್ರ : | |

ಮೋದಿ–ಟ್ರಂಪ್‌ ಮುಖಾಮುಖಿ

ಮನಿಲಾ: ಆಸಿಯಾನ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಚೀನಾ ಪ್ರಧಾನಿ ಲಿ ಕೆಕಿಯಾಂಗ್‌ ಭಾನುವಾರ ಮುಖಾಮುಖಿಯಾದರು.

ಮೂರು ದಿನಗಳ ಫಿಲಿಪ್ಪೀನ್ಸ್‌ ಪ್ರವಾಸಕ್ಕಾಗಿ ದೆಹಲಿಯಿಂದ ಇಲ್ಲಿಗೆ ಬಂದಿಳಿದ ಮೋದಿ ಅವರು ಪಾಸಯ್‌ ನಗರದಲ್ಲಿ ಏರ್ಪಡಿಸಿದ್ದ  ಔತಣಕೂಟದಲ್ಲಿ ಭಾಗವಹಿಸಿದರು.

ಆಸಿಯಾನ್‌ ಶೃಂಗಸಭೆಯ ಆತಿಥ್ಯ ವಹಿಸಿಕೊಂಡ ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೊ ಡುಟರ್ಟೆ ಅವರು ಜಾಗತಿಕ ನಾಯಕರಿಗಾಗಿ ಈ ಔತಣಕೂಟ ಏರ್ಪಡಿಸಿದ್ದರು.

ಟ್ರಂಪ್‌, ಕೆಕಿಯಾಂಗ್‌ ಅವರಲ್ಲದೆ, ಜಪಾನ್ ಪ್ರಧಾನಿ ಶಿಂಜೋ ಅಬೆ, ರಷ್ಯಾ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್‌, ಮಲೇಷ್ಯಾ ಪ್ರಧಾನಿ ನಜೀಬ್‌ ರಜಾಕ್‌ ಜತೆ ಮೋದಿ ಅವರು ಅನೌಪಚಾರಿಕ ಮಾತುಕತೆ ನಡೆಸಿದರು.

ಸೋಮವಾರ ಡೊನಾಲ್ಡ್‌ ಟ್ರಂಪ್‌ ಮತ್ತು ನರೇಂದ್ರ ಮೋದಿ ಅವರ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿದ್ದು, ಭಾರಿ ಮಹತ್ವ ಪಡೆದುಕೊಂಡಿದೆ.

ದಕ್ಷಿಣ ಚೀನಾ ಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಸೇನಾ ಚಟುವಟಿಕೆ, ಇಂಡೋ–ಫೆಸಿಪಿಕ್‌ ಭಾಗದಲ್ಲಿ ಪ್ರಾದೇಶಿಕ ಸ್ಥಿರತೆ, ಶಾಂತಿ ಮತ್ತು ರಕ್ಷಣಾ ಪರಿಸ್ಥಿತಿ ಸೇರಿದಂತೆ ಅನೇಕ ಪ್ರಮುಖ ವಿಷಯಗಳು ಮಾತುಕತೆಯ ವೇಳೆ ಪ್ರಸ್ತಾಪವಾಗುವ ನಿರೀಕ್ಷೆ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಮಂಗಳವಾರ ನಡೆಯಲಿರುವ 31ನೇ ಆಸಿಯಾನ್‌– ಇಂಡಿಯಾ ಮತ್ತು 15ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ.

ಹೆಚ್ಚುತ್ತಿರುವ ಭಯೋತ್ಪಾದನೆ ಸವಾಲುಗಳ ಸಮರ್ಪಕ ನಿರ್ವಹಣೆ ಮತ್ತು ಪ್ರಾದೇಶಿಕ ವಾಣಿಜ್ಯ ವಹಿವಾಟು ಉತ್ತೇಜನ ಕ್ರಮಗಳ ಕುರಿತು ಅವರು ಮಾತನಾಡಲಿದ್ದಾರೆ.

ಟ್ರಂಪ್‌ ಮತ್ತು ಚೀನಾ ಪ್ರಧಾನಿ ಲಿ ಕೆಕಿಯಾಂಗ್‌ ಜತೆಗಿನ ಅನೌಪಚಾರಿಕ ಮಾತುಕತೆ ಚಿತ್ರಗಳನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.