ಶುಕ್ರವಾರ, ಫೆಬ್ರವರಿ 26, 2021
31 °C

ವಿಮಾನ ಅಪಹರಣ ಬೆದರಿಕೆ: ‍ಪ್ರಯಾಣಿಕನ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ವಿಮಾನ ಅಪಹರಣ ಬೆದರಿಕೆ: ‍ಪ್ರಯಾಣಿಕನ ಬಂಧನ

ಕೊಚ್ಚಿ: ಜೆಟ್‌ ಏರ್‌ವೇಸ್‌ ವಿಮಾನದ ಅಪಹರಣ ಮತ್ತು ಬಾಂಬ್‌ ಬೆದರಿಕೆ ಒಡ್ಡಿದ ಆರೋಪದ ಮೇಲೆ, ವಾಹಿನಿಯೊಂದರ ನಿರೂಪಕ

ಹಾಗೂ ಆತನ ಸ್ನೇಹಿತನನ್ನು ಸೋಮವಾರ ಇಲ್ಲಿ ಬಂಧಿಸಲಾಗಿದೆ. ಈ ವಿಮಾನದಲ್ಲಿ ಸಿಬ್ಬಂದಿ ಸೇರಿ 170 ಪ್ರಯಾಣಿಕರಿದ್ದರು.

ತ್ರಿಶೂರ್‌ ಜಿಲ್ಲೆಯ ಕ್ಲಿನ್ಸ್‌ ವರ್ಗೀಸ್‌ (26) ವಿಮಾನ ಏರುವ ಮುನ್ನ ಮೊಬೈಲ್‌ ಫೋನ್‌ ಬಳಸಿ, ಜೆಟ್‌ ಏರ್‌ವೇಸ್‌ ವಿಮಾನದ ವಿಡಿಯೊ ಮಾಡಿದ್ದ. ತನ್ನ ಬಳಿ ‘ಹ್ಯಾಪಿ ಬಾಂಬ್‌’  ಇರುವುದಾಗಿ ಆತ ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದ ನಿಲ್ದಾಣದ ಸಿಬ್ಬಂದಿಯೊಬ್ಬರು ಅದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಅಲ್ಲದೆ ವರ್ಗೀಸ್‌ ವಿಮಾನ ಏರುವ ಏಣಿಯ ಬಳಿ ಬರುತ್ತಿದ್ದಾಗ, ವಿಮಾನವನ್ನು ಅಪಹರಣ ಮಾಡುವುದಾಗಿ ಮೊಬೈಲ್‌ನಲ್ಲಿ ಸಂದೇಶ ಟೈಪಿಸುತ್ತಿದ್ದ. ಅನುಮಾನದ ಮೇರೆಗೆ ಆತನನ್ನು ಹಾಗೂ ಅದಾಗಲೇ ವಿಮಾನ ಏರಿದ್ದ ಆತನ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.