ಶುಕ್ರವಾರ, ಫೆಬ್ರವರಿ 26, 2021
22 °C

ಬ್ಯಾಂಕ್‌ ದರೋಡೆಗೆ 25 ಅಡಿ ಸುರಂಗ ಕೊರೆದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕ್‌ ದರೋಡೆಗೆ 25 ಅಡಿ ಸುರಂಗ ಕೊರೆದರು

ಮುಂಬೈ: ನವಿ ಮುಂಬೈ ಉಪನಗರದ ಜೂಯಿ ನಗರ ಎಂಬಲ್ಲಿನ ಬ್ಯಾಂಕ್‌ ಆಫ್ ಬರೋಡದ ಶಾಖೆಯಲ್ಲಿ ದರೋಡೆ ಮಾಡಲು ಕಳ್ಳರು 25 ಅಡಿ ಉದ್ದದ ಸುರಂಗ ಕೊರೆದಿದ್ದಾರೆ.

ಬ್ಯಾಂಕ್‌ನಲ್ಲಿದ್ದ 225 ಲಾಕರ್‌ಗಳಲ್ಲಿ 25 ಲಾಕರ್‌ಗಳಲ್ಲಿ ಕಳುವಾಗಿದ್ದು, ಅದರಲ್ಲಿದ್ದ ವಸ್ತುಗಳ ಮೌಲ್ಯ ಎಷ್ಟು ಎಂಬುದು ತಿಳಿದು ಬಂದಿಲ್ಲ. ಈ ವಿಷಯ, ಸಿಬ್ಬಂದಿ ಸೋಮವಾರ ಬ್ಯಾಂಕ್‌ಗೆ ಬಂದಾಗಷ್ಟೇ ತಿಳಿದುಬಂದಿದೆ.

‘ಬ್ಯಾಂಕ್‌ ಸಮೀಪದ ಕೋಣೆಯನ್ನು ಆರೋ‍ಪಿಗಳು ಮೇ ತಿಂಗಳಲ್ಲಿ ಬಾಡಿಗೆಗೆ ಪಡೆದಿದ್ದರು. ಅಲ್ಲಿಂದಲೇ ಲಾಕರ್‌ ಇದ್ದ ಸ್ಥಳದವರೆಗೆ ಸುರಂಗ ಕೊರೆದಿದ್ದಾರೆ’ ಎಂದು ನವಿ ಮುಂಬೈ ಪೊಲೀಸ್ ಆಯುಕ್ತ ಹೇಮಂತ್‌ ನಾಗರಾಳೆ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.