7

ಚೈಲ್ಡ್‌ ಲೈನ್‌: 1139 ಮಕ್ಕಳ ರಕ್ಷಣೆ

Published:
Updated:
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಬೆಂಗಳೂರು: ‘ಬೆಂಗಳೂರು ಚೈಲ್ಡ್‌ ಲೈನ್‌ 1098’ ಮೂಲಕ ಒಂದು ವರ್ಷದಲ್ಲಿ 1,139 ಮಕ್ಕಳ ರಕ್ಷಣೆ ಮಾಡಲಾಗಿದೆ ಎಂದು ಚೈಲ್ಡ್‌ ರೈಟ್‌ ಟ್ರಸ್ಟ್‌ನ ನಿರ್ದೇಶಕ ವಾಸುದೇವ ಶರ್ಮಾ ತಿಳಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮಗೆ ಒಟ್ಟು 12,333 ಕರೆಗಳು ಬಂದಿದ್ದವು. ಇದರಲ್ಲಿ 2,064 ಮಧ್ಯಪ್ರವೇಶಿಸಿದ ಕರೆಗಳಾಗಿವೆ. 1,139 ಮಕ್ಕಳನ್ನು ರಕ್ಷಿಸಿ ಕೌನ್ಸಿಲಿಂಗ್‌ ಮಾಡಿ ಆರೋಗ್ಯ ತಪಾಸಣೆ ಮಾಡಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದೇವೆ. ಬೆಂಗಳೂರು ರೈಲ್ವೆ ಚೈಲ್ಡ್‌ ಲೈನ್‌ ಮೂಲಕ ವರ್ಷದಲ್ಲಿ 2,249 ಮಕ್ಕಳ ರಕ್ಷಿಸಿದ್ದೇವೆ. ಇದರಲ್ಲಿ 2,051 ಬಾಲಕರು ಹಾಗೂ 198 ಬಾಲಕಿಯರು’ ಎಂದು ಮಾಹಿತಿ ನೀಡಿದರು.

‘ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ, ಎಲ್ಲ ಶಾಲಾ ಕಾಲೇಜುಗಳಲ್ಲಿ 1098 ಸಂಖ್ಯೆಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು’ ಎಂದು ಅವರು ತಿಳಿಸಿದರು.

’ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ಬೆಂಬಲದಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಂಸ್ಥೆ, ಇದೇ 14ರಿಂದ 21ರ ವರೆಗೆ ಚೈಲ್ಡ್‌ ಲೈನ್‌ ಸೆ ದೋಸ್ತಿ ವಾರ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ಮಕ್ಕಳ ರಕ್ಷಣೆ, ಲೈಂಗಿಕ ಕಿರುಕುಳ ಮತ್ತು ದೈಹಿಕ ಶಿಕ್ಷೆ ವಿರುದ್ಧ ಪ್ರಚಾರ, ಶಾಲಾ ಕಾಲೇಜುಗಳಲ್ಲಿ ಬೀದಿ ನಾಟಕ, ಭಿತ್ತಿಪತ್ರ ಪ್ರದರ್ಶನ, ತರಬೇತಿ, ರಸಪ್ರಶ್ನೆ, ಮಾದಕ ವಸ್ತು ಬಳಕೆ ವಿರುದ್ಧ ಅರಿವು ಕಾರ್ಯಕ್ರಮ, ಜಾಥಾ ನಡೆಸಲಾಗುತ್ತದೆ’ ಎಂದರು. ಈ ಸಂದರ್ಭದಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.

ಚೈಲ್ಡ್‌ಲೈನ್‌ಗೆ ಬಂದ ಕರೆಗಳು

2016ರ ಏಪ್ರಿಲ್‌ನಿಂದ 2017ರ ಮಾರ್ಚ್‌  ಬಾಸ್ಕೊ ಅಪ್ಸಾ ಒಟ್ಟು ಕರೆಗಳು

ಒಟ್ಟು ಕರೆಗಳು 7143 5190 12,333

ಮಧ್ಯಪ್ರವೇಶಿಸಿದ ಕರೆಗಳು 1033 1031 2064

ಮಕ್ಕಳ ರಕ್ಷಣೆ 508 631 1139

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry