ಗುರುವಾರ , ಮಾರ್ಚ್ 4, 2021
19 °C

ದಾವೂದ್ ಇಬ್ರಾಹಿಂ ಆಸ್ತಿ 11.58ಕೋಟಿಗೆ ಮಾರಾಟ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ದಾವೂದ್ ಇಬ್ರಾಹಿಂ ಆಸ್ತಿ 11.58ಕೋಟಿಗೆ ಮಾರಾಟ

ಮುಂಬೈ: ಭೂಗತ ಪಾತಕಿ ಹಾಗೂ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ದಾವೂದ್ ಇಬ್ರಾಹಿಂ ಆಸ್ತಿಯು ₹11.58ಕೋಟಿಗೆ ಮಾರಾಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹಣಕಾಸು ಸಚಿವಾಲಯವು ಕಳ್ಳಸಾಗಣಿಕೆ ಮತ್ತು ವಿದೇಶಿ ವಿನಿಮಯ ಮ್ಯಾನಿಪುಲೇಶನ್ ಕಾಯ್ದೆ ಅಡಿಯಲ್ಲಿ ಹರಾಜು ಪ್ರಕ್ರಿಯೆ ಕೈಗೊಂಡಿತ್ತು. 

ದಾವೂದ್‌ಗೆ ಸೇರಿದ ದೆಹಲಿಯ ರೋಣಕ್ ಅಫ್ರೋಜ್ ರೆಸ್ಟೋರೆಂಟ್, ಧಮರ್ವಾಲ ಕಟ್ಟಡ, ಶಬನಾಮ್ ಗೆಸ್ಟ್ ಹೌಸ್ ಈ ಮೂರು ಆಸ್ತಿಯನ್ನು ಹರಾಜಿಗೆ ಇರಿಸಿದೆ.

ಭೇಂದಿ ಬಜಾರ್‌ನಲ್ಲಿನ ಯಾಕೂಬ್ ರಸ್ತೆ ಬಳಿಯಿರುವ  ದಾವೂದ್‌ನ ಮೊದಲ ಮಡದಿಯ ಹೆಸರಿನಲ್ಲಿರುವ ಶಬನಾಮ್ ಗೆಸ್ಟ್ ಹೌಸ್ ₹3.52 ಕೋಟಿ, ಧಮರ್ವಾಲ ಕಟ್ಟಡ ₹3.53 ಕೋಟಿ, ರೋಣಕ್ ಅಫ್ರೋಜ್ ರೆಸ್ಟೋರೆಂಟ್‌ ₹4.53 ಕೋಟಿಗೆ ಮಾರಾಟವಾಗಿದೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.