ಶುಕ್ರವಾರ, ಮಾರ್ಚ್ 5, 2021
17 °C

ದಕ್ಷಿಣ ಕೊರಿಯಾದತ್ತ ಗುಂಡು ಹಾರಿಸಿದ ಯೋಧ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ದಕ್ಷಿಣ ಕೊರಿಯಾದತ್ತ ಗುಂಡು ಹಾರಿಸಿದ ಯೋಧ

ಸೋಲ್‌: ಬಿಗಿ ಭದ್ರತೆ ನಡುವೆಯೂ ಉತ್ತರ ಕೊರಿಯಾದ ಯೋಧರೊಬ್ಬರು ಸೋಮವಾರ ದಕ್ಷಿಣ ಕೊರಿಯಾದ ಸೈನಿಕರತ್ತ ಆರಕ್ಕೂ ಹೆಚ್ಚು ಸಲ ಗುಂಡು ಹಾರಿಸಿ ಬಳಿಕ ನಾಟಕೀಯವಾಗಿ ತನ್ನ ಪಡೆಯತ್ತ ಹಿಂದಿರುಗಿದ್ದಾರೆ.

ಕೊರಿಯಾದ ಪನಾಮುಂಜುಮ್‌ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಮೆರಿಕ ನೇತೃತ್ವದ ವಿಶ್ವಸಂಸ್ಥೆ ಶಾಂತಿ ಪಾಲನೆ ಪಡೆಯು ಈ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಈ ಪ್ರದೇಶದಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾ ಭಾರಿ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜಿಸಿವೆ.

ಯೋಧ ವಾಹನದೊಂದಿಗೆ ದಕ್ಷಿಣ ಕೊರಿಯಾದ ಗಡಿ ದಾಟಿದ್ದು, ಈ ಸಂದರ್ಭದಲ್ಲಿ ಉತ್ತರಕೊರಿಯಾದ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.