7

ದಿನದ ಪ್ರತಿ ಕ್ಷಣವೂ ಇರಲಿ ಉತ್ಸಾಹ

Published:
Updated:
ದಿನದ ಪ್ರತಿ ಕ್ಷಣವೂ ಇರಲಿ ಉತ್ಸಾಹ

* ಬೆಳಗ್ಗೆ ಎದ್ದ ಕೂಡಲೇ ಬೇಸರದ ಮೂಡ್‌ಗೆ ಜಾರಬೇಡಿ. ಏಳುವಾಗ ಮನಸ್ಸು ಲವಲವಿಕೆಯಲ್ಲಿರಲಿ.

* ನಿಮ್ಮ ಮನಸ್ಸಿಗೆ ಉಲ್ಲಾಸವನ್ನು ನೀಡುವಂಥ ಸಂಗತಿಯನ್ನು ನೆನಪಿಸಿಕೊಂಡು ಹಾಸಿಗೆಯಿಂದ ಏಳಿ.

* ಎದ್ದ ಕೂಡಲೇ ನಿಮ್ಮ ಪ್ರೀತಿಪಾತ್ರರಿಗೆ ಸುಪ್ರಭಾತ – ಗುಡ್‌ ಮಾರ್ನಿಂಗ್‌ – ಹೇಳಿ.

* ಮನಸ್ಸಿಗೆ ಹಿತವಾದ ಸಂಗೀತವನ್ನು ಕೇಳುತ್ತ ದಿನವನ್ನು ಆರಂಭಿಸಿ.

* ಇಷ್ಟದೇವರ ಸ್ಮರಣೆಯನ್ನೂ ಪ್ರಾರ್ಥನೆಯನ್ನೂ ಮಾಡಿ ನಿತ್ಯದ ಕೆಲಸದಲ್ಲಿ ತೊಡಗಿಕೊಳ್ಳಿ.

* ಬೆಳಗ್ಗೆ ನೀವು ಮಾಡುವ ಮೊದಲ ಫೋನ್‌ ನಿಮಗೆ ಉಲ್ಲಾಸವನ್ನು ತರುವಂತಿರಲಿ. ಹೀಗಾಗಿ ನಿಮ್ಮ ಅತ್ಯಂತ ಆಪ್ತರು, ನಿಮ್ಮ ಹಿತವನ್ನು ಕೋರುವವರ ಜೊತೆ ಮಾತನಾಡಿ.

* ಯಾರ ಜೊತೆ ಮಾತನಾಡುವುದರಿಂದ ಜಗಳವೋ ಮನಸ್ತಪಾವೋ ಕೋಪವೋ ಉಂಟಾಗಬಹುದು ಎಂಬ ನಿರೀಕ್ಷೆ ನಿಮಗಿದ್ದರೆ ಅಂಥವರೊಂದಿಗೆ ಬೆಳಗಿನ ಆರಂಭದಲ್ಲಿ ಮಾತನಾಡದಿರುವುದೇ ಒಳ್ಳೆಯದು.

* ಇಡಿ ದಿನ ನೀವು ಮಾಡಬೇಕೆಂದಿರುವ ಕೆಲಸಗಳನ್ನು ಪಟ್ಟಿ ಮಾಡಿಕೊಳ್ಳಿ. ಯಾವ ಕೆಲಸದ ಬಳಿಕ ಯಾವುದು – ಎಂದು ಗುರುತು ಮಾಡಿಕೊಳ್ಳಿ.

* ಅನಗತ್ಯವಾಗಿ ಸಮಯ ವ್ಯರ್ಥವಾಗುವಂಥ ಕೆಲಸದಲ್ಲಿ ತೊಡಗಿಕೊಳ್ಳಬೇಡಿ. ಇದರಿಂದ ಕಚೇರಿಗೆ ಹೋಗುವುದಕ್ಕೂ ತಡವಾಗಬಹುದು; ಆಯಾಸವೂ ಎದುರಾಗಬಹುದು.

* ಹಲ್ಲುಜ್ಜುವುದು, ಸ್ನಾನ – ಇಂಥವನ್ನು ಮುಂದೂಡಬೇಡಿ. ಅಂತೆಯೇ ಉಪಾಹಾರವನ್ನೂ ಸಮಯಕ್ಕೆ ಸರಿಯಾಗಿ ಮಾಡಿ.

* ನಿಮ್ಮ ಜೀವನದ ಅಮೂಲ್ಯ ದಿನವೊಂದು ಆರಂಭವಾಗಿದೆ; ಅದನ್ನು ಸಾರ್ಥಕ ಮಾಡಿಕೊಳ್ಳುವುದು ಹೇಗೆ – ಎಂದು ಆಲೋಚಿಸಿ, ತೀರ್ಮಾನಿಸಿ ಅದರಂತೆ ದಿನದ ಒಂದೊಂದು ಕ್ಷಣದಲ್ಲೂ ಉತ್ಸಾಹದಿಂದ ಭಾಗವಹಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry