ಸೋಮವಾರ, ಮಾರ್ಚ್ 1, 2021
20 °C

ಬಿಲ್ಲವರನ್ನು ಅವಮಾನಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಲ್ಲವರನ್ನು ಅವಮಾನಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ?

ಬೈಂದೂರು: ನವೆಂಬರ್ 13ರಂದು ಸಂಜೆ ಬೈಂದೂರಿನ ನಾಗೂರ್‍‍ನಲ್ಲಿ ನಡೆದ ಬಿಜೆಪಿಯ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಬಿಲ್ಲವ ಸಮುದಾಯದವರನ್ನು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಚಿವರು ಹೇಳಿದ್ದೇನು?

ಬೈಂದೂರು ನಮ್ಮ ಯುದ್ಧ ಭೂಮಿ, ಬೈಂದೂರಿನಲ್ಲಿ ನಮ್ಮ ಭಗವಾಧ್ವಜ, ನಮ್ಮ ಬಿಜೆಪಿ ಧ್ವಜ  ಹಾರಾಡ್ತಾ ಇರ್ಬೇಕು. ಮತ್ತೆ ಇಲ್ಲಿನ ಕಾಂಗ್ರೆಸ್ ಶಾಸಕರ ದುರಾಡಳಿತ ಕಡಿಮೆ ಆಗಬೇಕು. ಪೂಜಾರಿಯ ಪುಂಗಿ ಬಂದ್ ಆಗಬೇಕು, ಬಿಜೆಪಿ ಗೆಲ್ಬೇಕು.

ಪೂಜಾರಿ ಪುಂಗಿ ಬಂದ್ ಆಗಬೇಕು ಎಂಬ ಸಚಿವರ ಈ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಫೇಸ್‍ಬುಕ್‍ನಲ್ಲಿ ಏನಿದೆ?

ಬಿಲ್ಲವ ಸಮುದಾಯವನ್ನು ಜಾತಿಯ ಹೆಸರು ಕರೆದು ಹೀಯಾಳಿಸುವುದು ಮೇಲ್ಜಾತಿಗಳ ಹುಟ್ಟು ಗುಣ. ಇಂದು ಬಿಲ್ಲವರು ಪ್ರಜ್ಞಾವಂತ ರಾಗಿದ್ದಾರೆ ನೀವು ಹಾಕುವ ಬಲೆಗೆ ಬೀಳುವುದಿಲ್ಲ ಸ್ವಾಭಿಮಾನದಿಂದ ನಿಮ್ಮನ್ನು ಎದುರಿಸುತ್ತೇವೆ ಎಂಬ ಆಕ್ರೋಶದ ನುಡಿಗಳು ಫೇಸ್‍ಬುಕ್‍ನಲ್ಲಿ ವ್ಯಕ್ತವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.