ಗುರುವಾರ , ಮಾರ್ಚ್ 4, 2021
29 °C

ಬಿಎಫ್‌ಸಿಗೆ ಡ್ರಾವಿಡ್‌ ರಾಯಭಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಫ್‌ಸಿಗೆ ಡ್ರಾವಿಡ್‌ ರಾಯಭಾರಿ

ಬೆಂಗಳೂರು: ಭಾರತ ‘ಎ’ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಆಡಲಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದ ರಾಯಭಾರಿಯಾಗಿ ನೇಮಕವಾಗಿದ್ದಾರೆ.

ಈ ವಿಷಯವನ್ನು ಬಿಎಫ್‌ಸಿ ಫ್ರಾಂಚೈಸ್‌ ಮಂಗಳವಾರ ಪ್ರಕಟಿಸಿದೆ. ಬೆಂಗಳೂರಿನ ತಂಡ ಈ ಬಾರಿ ಐಎಸ್‌ಎಲ್‌ಗೆ ಪದಾರ್ಪಣೆ ಮಾಡುತ್ತಿದೆ.

‘ಬಿಎಫ್‌ಸಿ ತಂಡದ ರಾಯಭಾರಿ ಯಾಗಿ ನೇಮಕವಾಗಿರುವುದು ಅಪಾರ ಖುಷಿ ನೀಡಿದೆ. ಹಿಂದಿನ ನಾಲ್ಕು ವರ್ಷಗಳಿಂದಲೂ ಬಿಎಫ್‌ಸಿ ತಂಡದ ಆಟವನ್ನು ನೋಡಿದ್ದೇನೆ. ನಾನೂ ಬೆಂಗಳೂರಿನವನು. ಹೀಗಾಗಿ ತಂಡದೊಂದಿಗಿನ ಆಪ್ತತೆ ಹೆಚ್ಚಿದೆ’ ಎಂದು ದ್ರಾವಿಡ್‌ ಖುಷಿ ವ್ಯಕ್ತಪಡಿಸಿದ್ದಾರೆ.

‘ಬೆಂಗಳೂರಿನ ಜನ ಆರಂಭ ದಿಂದಲೂ ಬಿಎಫ್‌ಸಿಯನ್ನು ಬೆಂಬಲಿಸುತ್ತಿದ್ದಾರೆ. ಮುಂದೆಯೂ ಇದೇ ರೀತಿ ಪ್ರೀತಿ ತೋರಿಸುತ್ತಾರೆ ಎಂದು ನಂಬಿದ್ದೇನೆ. ಕ್ಲಬ್‌ನ ಇತಿಹಾಸದಲ್ಲಿ ಐಎಸ್‌ಎಲ್‌ ಹೊಸ ಅಧ್ಯಾಯ. ಚೊಚ್ಚಲ ಪ್ರಯತ್ನದಲ್ಲೇ ತಂಡ ಪ್ರಶಸ್ತಿ ಗೆದ್ದು ಇದನ್ನು ಸ್ಮರಣೀಯವಾಗಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ದ್ರಾವಿಡ್‌ ಅವರು ನಮ್ಮ ತಂಡದ ರಾಯಭಾರಿಯಾಗಿರುವುದು ಹೆಮ್ಮೆಯ ವಿಷಯ’ ಎಂದು ಬಿಎಫ್‌ಸಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಾರ್ಥ ಜಿಂದಾಲ್‌ ತಿಳಿಸಿದ್ದಾರೆ.

19 ರಂದು ಮೊದಲ ಪಂದ್ಯ: ಬಿಎಫ್‌ಸಿ ನವೆಂಬರ್‌ 19 ರಂದು ತವರಿನಲ್ಲಿ ಮೊದಲ ಐಎಸ್‌ಎಲ್‌ ಪಂದ್ಯ ಆಡಲಿದೆ. ಮುಂಬೈ ಸಿಟಿ ಎಫ್‌ಸಿ ವಿರುದ್ಧದ ಈ ಹೋರಾಟ ಕಂಠೀರವ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.