ಗುರುವಾರ , ಫೆಬ್ರವರಿ 25, 2021
29 °C

ಅಯ್ಯಪ್ಪನ ದರ್ಶನಕ್ಕೆ ದೇಗುಲ ಮುಕ್ತ

ಪಿಟಿಐ Updated:

ಅಕ್ಷರ ಗಾತ್ರ : | |

ಅಯ್ಯಪ್ಪನ ದರ್ಶನಕ್ಕೆ ದೇಗುಲ ಮುಕ್ತ

ಶಬರಿಮಲೆ: ಯಾತ್ರೆಯ ಋತು ಆರಂಭದ ಕಾರಣ, ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಬುಧವಾರದಿಂದ ಭಕ್ತಾದಿಗಳ ದರ್ಶನಕ್ಕೆ ತೆರೆಯಲಾಗಿದೆ. ಮೂರು ತಿಂಗಳ ಮಂಡಲಂ– ಮಕರವಿಳಕ್ಕು ವಾರ್ಷಿಕ ಉತ್ಸವದ ಮೊದಲ ದಿನವೇ ಸಾವಿರಾರು ಯಾತ್ರಿಗಳು ದೇವಾಲಯ ತಲುಪಿದ್ದಾರೆ.

ತಂತ್ರಿಗಳು ಅಷ್ಟದ್ರವ್ಯ ಮಹಾ ಗಣಪತಿ ಹೋಮ ನೆರವೇರಿಸುವುದರೊಂದಿಗೆ ಗುರುವಾರ ದೇವಾಲಯದ ಪೂಜಾ ವಿಧಿಗಳು ಆರಂಭವಾಗಲಿವೆ. 41 ದಿನಗಳ ಮಂಡಲಂ ಉತ್ಸವವು ಮಂಡಲ ಪೂಜೆಯ ಬಳಿಕ ಡಿಸೆಂಬರ್‌ 26ರಂದು ಕೊನೆಗೊಳ್ಳಲಿದೆ.

ಕಳೆದ ಋತುವಿನಲ್ಲಿ 4.5 ಕೋಟಿಗೂ ಹೆಚ್ಚು ಭಕ್ತರು ಅಯ್ಯಪ್ಪನ ದರ್ಶನ ಮಾಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.