ಗುರುವಾರ , ಮಾರ್ಚ್ 4, 2021
18 °C

ನಾನು ರೋಬೊ ಅಲ್ಲ: ಕೊಹ್ಲಿ

ಪಿಟಿಐ Updated:

ಅಕ್ಷರ ಗಾತ್ರ : | |

ನಾನು ರೋಬೊ ಅಲ್ಲ: ಕೊಹ್ಲಿ

ಕೋಲ್ಕತ್ತ : ‘ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳಿಂದ ನನಗೂ ಬಿಡುವು ಬೇಕು; ನಾನೂ ಮನುಷ್ಯ. ರೋಬೊ ಅಲ್ಲ’ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ 2017ರಲ್ಲಿ ಏಳು ಟೆಸ್ಟ್‌, 26 ಏಕದಿನ ಹಾಗೂ ಹತ್ತು ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ.  ಐಪಿಎಲ್ ಪಂದ್ಯಗಳನ್ನೂ ಅವರು ಆಡಿದ್ದಾರೆ.

‘ನನಗೂ ದಣಿವು ಆಗುತ್ತದೆ. ದೇಹ  ವಿಶ್ರಾಂತಿ ಬಯಸುತ್ತದೆ. ಚರ್ಮವನ್ನು ಕತ್ತರಿಸಿ ನೋಡಿ ರಕ್ತ ಬರುತ್ತದೆಯೋ ಇಲ್ಲವೋ ಪರೀಕ್ಷಿಸಿ’ ಎಂದು ಕೊಹ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಆಟಗಾರರಿಗೆ ವಿಶ್ರಾಂತಿಯ ಅಗತ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಪ್ರತಿವರ್ಷ 40 ಪಂದ್ಯಗಳನ್ನು ಆಡಿದರೆ ಮೂವರಿಗೆ ವಿಶ್ರಾಂತಿ ಸಿಕ್ಕರೆ ಹೆಚ್ಚು.  ಹನ್ನೊಂದು ಆಟಗಾರರಿಗೂ ವಿಶ್ರಾಂತಿ ಕೊಡಲು ಸಾಧ್ಯವಿಲ್ಲ. ಟೆಸ್ಟ್ ಪಂದ್ಯಗಳಲ್ಲಿ ಎಲ್ಲರೂ 30 ಓವರ್‌ ಬೌಲಿಂಗ್‌ ಮಾಡುವುದಿಲ್ಲ. ಎಲ್ಲರೂ 45 ಓವರ್‌ ಬ್ಯಾಟಿಂಗ್ ಮಾಡುವುದಿಲ್ಲ ಹೀಗಿದ್ದರೂ ನಿರಂತರವಾಗಿ ಆಡುವವರಿಗೆ ವಿರಾಮ ಬೇಕು’ ಎಂದರು.

‘ವಿರಾಮಕ್ಕೂ ಆಟಗಾರರು ಹೊಡೆಯುವ ರನ್ ಹಾಗೂ ಪಡೆಯುವ ವಿಕೆಟ್‌ಗೂ ಯಾವ ಸಂಬಂಧವೂ ಇಲ್ಲ. ಎಲ್ಲರಿಗೂ ಒತ್ತಡ ಇದ್ದೇ ಇರುತ್ತದೆ. ಪೂಜಾರ ಅವರಿಗೆ ತಂಡದಲ್ಲಿದ್ದ ಇತರ ಆಟಗಾರರರಿಗಿಂತ ಹೆಚ್ಚು ಒತ್ತಡ ಇದೆ. ಕ್ರೀಸ್‌ನಲ್ಲಿ ಅವರು ಹೆಚ್ಚು ಹೊತ್ತು ಕಳೆಯುತ್ತಾರೆ. ಇತರೆ ಬ್ಯಾಟ್ಸ್‌ಮನ್‌ಗಳನ್ನು ಅವರಿಗೆ ಹೋಲಿಸಲು ಸಾಧ್ಯವಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ.

‘ವಿಶ್ರಾಂತಿ ನೀಡುವುದಕ್ಕೆ ಕೆಲವು ಸೂತ್ರಗಳಿವೆ. ಅದನ್ನು ನಾವು ಸರಿಯಾಗಿ ಪಾಲಿಸಬೇಕು. ಪ್ರಮುಖ ಪಂದ್ಯಗಳಲ್ಲಿ ತಂಡದ ಮುಖ್ಯವಾದ ಆಟಗಾರ ಗಾಯದ ಸಮಸ್ಯೆ ಎದುರಿಸುವುದರ ಬದಲು ಮುಂಜಾಗ್ರತೆ ವಹಿಸಬೇಕು. 20ರಿಂದ 25 ಆಟಗಾರರ ತಂಡವನ್ನು ಕಟ್ಟಬೇಕಾದರೆ ಸಮತೋಲನ ನೀತಿಯನ್ನು ಅನುಸರಿಸಬೇಕಾಗುತ್ತದೆ’ ಎಂದು  ಅಭಿಪ್ರಾಯಪಟ್ಟಿದ್ದಾರೆ.

‘ಎಲ್ಲಾ ಮೂರು ವಿಭಾಗಗಳಲ್ಲಿಯೂ ವಿಶ್ರಾಂತಿ ಇಲ್ಲದೆ ಆಡುವುದು ಮನುಷ್ಯರಾದವರಿಗೆ ಸಾಧ್ಯವಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.