ಮಂಗಳವಾರ, ಮಾರ್ಚ್ 9, 2021
30 °C

‘ಪದ್ಮಾವತಿ’ ಚಿತ್ರ ವಿರೋಧಿಸಿ ರಕ್ತದಲ್ಲಿ ಸಹಿ, ಪ್ರತಿಭಟನೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

‘ಪದ್ಮಾವತಿ’ ಚಿತ್ರ ವಿರೋಧಿಸಿ ರಕ್ತದಲ್ಲಿ ಸಹಿ, ಪ್ರತಿಭಟನೆ

ಜೈಪುರ, ಕೋಟ: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರ ಬಿಡುಗಡೆಯನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ಹಾಗೂ ರಕ್ತದಲ್ಲಿ ಸಹಿ ಮಾಡಿ ಪ್ರತಿಭಟನೆಟಗಳು ವ್ಯಕ್ತವಾಗಿವೆ.

ಶ್ರೀ ಕರ್ಣಿ ಸೇನಾ ಸಂಘಟನೆ ಗುರುವಾರ ರಾಜಸ್ಥಾನದ ಕೋಟಾದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು. 

ಜೈಪುರದಲ್ಲಿ ‘ಪದ್ಮಾವತಿ’ ಚಿತ್ರದ ವಿರುದ್ಧ ಸರ್ವ ಬ್ರಾಹ್ಮಣ ಮಹಾಸಭಾ ಪ್ರತಿಭಟನೆ ನಡೆಸಿದ್ದು, ಚಿತ್ರವನ್ನು ವಿರೋಧಿಸಿ ರಕ್ತದಲ್ಲಿ ಸಹಿ ಮಾಡಿದ ಮನವಿಯನ್ನು 'ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ'ಗೆ(ಸಿಬಿಎಫ್‌ಸಿ) ಸಲ್ಲಿಸಿದೆ.

‘ರಜಪೂತ ಸಮುದಾಯ ಅಥವಾ ಹಿಂದೂ ಸಂಘಟನೆಗಳು ಮಾತ್ರ ಈ ಚಿತ್ರವನ್ನು ವಿರೋಧಿಸುತ್ತಿಲ್ಲ, ಮುಸ್ಲಿಂ ನಾಯಕರೂ ವಿರೋಧಿಸುತ್ತಿದ್ದಾರೆ. ಅಲ್ಲದೆ ದೇಶದಾದ್ಯಂತ ಚಿತ್ರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ’ ಎಂದು ಬುಧವಾರ ಹೇಳಿರುವ ಶ್ರೀ ರಜಪೂತ ಕರ್ಣಿ ಸೇನಾ ಸಂಘಟನೆಯ ಸ್ಥಾಪಕ ಲೋಕೇಂದ್ರ ಕಲ್ವಿ ಅವರು, ಸಂಘಟನೆ ದೇಶದಾದ್ಯಂತ ಡಿಸೆಂಬರ್‌ 1ರಂದು ಬಂದ್‌ಗೆ ಕರೆ ನೀಡಿದೆ ಎಂದು ತಿಳಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.