3

‘ಪವನಸುತ’ನ ಕರುಣೆ

Published:
Updated:
‘ಪವನಸುತ’ನ ಕರುಣೆ

ಮನೆ ಕಟ್ಟುವುದು ಖುಷಿ. ಅದಕ್ಕೊಂದು ಚೆಂದದ ಹೆಸರಿಡುವುದೇ ಸಂಭ್ರಮ. ಮನೆ ನಿರ್ಮಾಣದ ಹಂತದಲ್ಲಿರುವಾಗಲೇ ಯಾವ ಹೆಸರನ್ನು ಇಡಬೇಕು ಎಂದು ಯೋಚಿಸಲು ಆರಂಭಿಸಿದೆವು. ಆಗ ಮನೆಮಂದಿಯ ಹೆಸರಿನ ಮೊದಲ ಅಕ್ಷರವೂ ಬರುವಂತೆ ಹೆಸರಿಡಬೇಕು ಎಂಬ ತೀರ್ಮಾನವಾಯಿತು.

ಎಲ್ಲರ ಹೆಸರನ್ನು ಒಟ್ಟು ಸೇರಿಸಿದಾಗ ‘ಪವನಸುತ’ ಎಂಬ ಹೆಸರು ಬಂತು. ಈ ಪದಕ್ಕೆ ಆಂಜನೇಯ ಎಂಬ ಅರ್ಥವೂ ಇದೆ. ನಮ್ಮ ತಂದೆಯ ಇಷ್ಟ ದೇವರು ಆಂಜನೇಯ. ಹಾಗಾಗಿ ಎಲ್ಲರ ಮೆಚ್ಚುಗೆಯ ಮೇರೆಗೆ ಈ ಹೆಸರನ್ನೇ ಇರಿಸಿದೆವು.

–ನಾಗಸ್ಫೂರ್ತಿ ಪಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry