7

ಗಿಡ ಬೆಳೆಸುವ ಉಪಾಯ

Published:
Updated:
ಗಿಡ ಬೆಳೆಸುವ ಉಪಾಯ

ಮನೆಯಲ್ಲಿ ಪುಟ್ಟ ಕೈತೋಟ ಮಾಡಿಕೊಳ್ಳುವುದು ಬಹಳ ಸುಲಭ. ಇದು ಮನೆಯ ಅಲಂಕಾರಕ್ಕೆ ಮೆರುಗು ನೀಡುವ ಕಾರಣಕ್ಕೆ ಈಗ ಬಹು ಮಂದಿ ಗಿಡ ಬೆಳೆಯಲು ಮುಂದಾಗುತ್ತಿದ್ದಾರೆ. ಮನೆಯಲ್ಲಿ ದಿನನಿತ್ಯ ಬಳಸುವ ವಸ್ತುಗಳನ್ನು ಹೇಗೆ ಕೈತೋಟದ ಸಹಾಯಕ್ಕೆ ಬಳಸಿಕೊಳ್ಳಬಹುದು ಎಂಬುದರ ಮಾಹಿತಿ ಇಲ್ಲಿದೆ.

* ಸ್ಟ್ರಾಬೆರಿ ಹಣ್ಣಿನ ಬಾಕ್ಸ್‌ನಲ್ಲಿ ಮಣ್ಣನ್ನು ತುಂಬಿ ಅದರೊಳಗೆ ಬೀಜವನ್ನು ಹಾಕಿ ಮುಚ್ಚಿಡಿ. ಅದು ಚಿಗುರೊಡೆದ ನಂತರ ಮಣ್ಣಿನ ಸಮೇತ ಕುಂಡಕ್ಕೆ ಹಾಕಿ. ಪುದೀನಾ ಗಿಡಗಳನ್ನು ಹೀಗೆ ಬೆಳೆಯಬಹುದು.

* ದೊಡ್ಡ ನಿಂಬೆಹಣ್ಣಿನ ಸಿಪ್ಪೆ ಹೊರತುಪಡಿಸಿ ಅದರೊಳಗಿನ ಜಿಗುಟನ್ನು ಚಮಚದಿಂದ ತೆಗೆಯಿರಿ. ಸಿಪ್ಪೆಯ ತಳಭಾಗದಲ್ಲಿ ಚಿಕ್ಕ ತೂತು ಮಾಡಿ. ನಂತರ ಅದರೊಳಗೆ ಮಣ್ಣು ತುಂಬಿ, ಬೀಜ ಹಾಕಿ. ನಿತ್ಯ ನೀರು ಚಿಮುಕಿಸಿ. ಗಿಡ ಚಿಗುರೊಡೆದು ಬೆಳೆಯುತ್ತಿದ್ದಂತೆ ಸಿಪ್ಪೆ ಸಮೇತ ಮಣ್ಣು ತುಂಬಿದ ಕುಂಡದಲ್ಲಿ ಅದನ್ನು ಇರಿಸಿ.

* ಗಾಜಿನ ಡಬ್ಬಿಯ ತಳಭಾಗದಲ್ಲಿ ಬೆಣಚುಕಲ್ಲನ್ನು ತುಂಬಿ, ಅದರ ಮೇಲೆ ಮಣ್ಣು ತುಂಬಿ, ಬೀಜ ಹಾಕಿ ನೀರನ್ನು ಚಿಮುಕಿಸಿ. ಸ್ವಲ್ಪ ದಿನಗಳಲ್ಲಿಯೇ ಸಸಿ ಬೆಳೆಯುತ್ತದೆ.

* ಯೋಗಾರ್ಟ್‌ ಡಬ್ಬಿಗೆ ಮಣ್ಣನ್ನು ತುಂಬಿ ಅದರ ತಳಭಾಗವನ್ನು ತೂತು ಮಾಡಿ ಅದರಲ್ಲಿ ಬೀಜ ಹಾಕಿ, ಬೀಜ ಚಿಗುರೊಡೆದ ನಂತರ ಕುಂಡದಲ್ಲಿ ಇರಿಸಿ.

* ಚಿಕ್ಕ, ಚಿಕ್ಕ ರಟ್ಟಿನ ಬಾಕ್ಸ್‌ನಲ್ಲಿಯೂ ಈ ರೀತಿಯಲ್ಲಿಯೇ ಬೀಜ ಹಾಕಿ ಗಿಡ ಬೆಳೆಯಬಹುದು.

* ಎಣ್ಣೆಯ ಪ್ಲಾಸ್ಟಿಕ್‌ ಡಬ್ಬವನ್ನು ಅರ್ಧಕ್ಕೆ ಕತ್ತರಿಸಿ, ತಳಭಾಗದಲ್ಲಿ ಮಣ್ಣನ್ನು ತುಂಬಿ, ಬೀಜ ಹಾಕಿ ನೀರನ್ನು ಚಿಮುಕಿಸಿ. ಮೇಲಿನ ಭಾಗವನ್ನು ಅದರ ಮೇಲಿಡಿ. ಗಿಡ ಚಿಗುರೊಡೆದ ನಂತರ ಆ ಗಿಡವನ್ನು ಕುಂಡಕ್ಕೆ ರವಾನಿಸಿ.

(ನೀವೇ ತಯಾರಿಸಿದ ಈ ಪುಟ್ಟ ಕುಂಡಗಳಲ್ಲಿ ಚಿಕ್ಕ ತಳಿಯ ಗಿಡಗಳನ್ನು ಬೆಳೆಯುವುದು ಸೂಕ್ತ. ಪುದೀನಾ, ಕೊತ್ತಂಬರಿ, ಮೆಂತ್ಯೆ, ಸಾಸಿವೆ..ಇಂತಹ ಗಿಡಗಳನ್ನು ಇದರಲ್ಲಿ ಬೆಳೆಯಬಹುದು. ಮನೆಗೆ ನೆಂಟರು ಬರುವ ಸಂದರ್ಭದಲ್ಲಿ ಒಳಾಂಗಣ ಅಲಂಕಾರಕ್ಕೂ ಈ ಗಿಡಗಳನ್ನು ಬಳಸಬಹುದು)

ವಿಡಿಯೊ ನೋಡಲು: http://bzfd.it/2iVZbb8

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry