ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ವಸತಿ ಸಮುಚ್ಚಯ

Last Updated 16 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕೆನಡಾ ಮತ್ತು ಮೊಂಟ್ರಿಯಲ್‌ ಪ್ರದೇಶಗಳ ಪ್ರಮುಖ ಆಕರ್ಷಣೆ ‘ಹ್ಯಾಬಿಟ್ಯಾಟ್‌ 67’ ವಸತಿ ಸಮುಚ್ಚಯ ಕಟ್ಟಡ. ಇದು ಕೆನಡಾದ ಕ್ಯೂಬೆಕ್‌ನ ಮೋಂಟ್ರಿಯಲ್‌ ಪ್ರದೇಶದಲ್ಲಿ ಇದೆ.

ಸೇಂಟ್ ಲಾರೆನ್ಸ್‌ ನದಿ ದಂಡೆಯಲ್ಲಿ ನಿರ್ಮಿಸಿರುವ ಈ ಕಟ್ಟಡ ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಈ ಕಟ್ಟಡವನ್ನು ವಿನ್ಯಾಸ ಮಾಡಿದವರು ಇಸ್ರೇಲ್‌–ಕೆನಡಾ ವಾಸ್ತುಶಿಲ್ಪ ಮೊಷೆ ಸಫ್ದಿ. 1967ರಲ್ಲಿ ಆಯೋಜಿಸಲಾಗಿದ್ದ ‘ಎಕ್ಸ್‌ಪೊ–67’ ಅಂಗವಾಗಿ ಈ ಕಟ್ಟಡವನ್ನು ನಿರ್ಮಿಸಲಾಯಿತು.

‘ಎಕ್ಸ್‌ಪೊ–67’ ನಡೆದು 50 ವರ್ಷಗಳಾದ ನೆನಪಿಗೆ ಈಚೆಗಷ್ಟೇ ಕೆನಡಾ ದೇಶದ ಅಂಚೆ ಇಲಾಖೆ ಈ ಕಟ್ಟಡದ ಚಿತ್ರವಿರುವ ಅಂಚೆಚೀಟಿ ಬಿಡುಗಡೆ ಮಾಡಿದೆ.

ಈ ಕಟ್ಟಡದಲ್ಲಿ 146 ನಿವಾಸಗಳಿವೆ. ಪ್ರತಿ ಕಟ್ಟಡವನ್ನೂ ಕಾಂಕ್ರಿಟ್ ಘಟಕಗಳೊಂದಿಗೆ ಬೆಸೆಯಲಾಗಿದೆ. ಪ್ರತಿ ಘಟಕಕ್ಕೂ ಪ್ರತ್ಯೇಕ ಬಾಲ್ಕನಿ, ಚಾವಣಿಗಳು ಇವೆ.

ಮನೆಗಳು ಹತ್ತಿರದಲ್ಲಿಯೇ ಇದ್ದರೂ ಗಾಳಿ–ಬೆಳಕು ಧಾರಾಳವಾಗಿರುವುದು ವಿನ್ಯಾಸದ ಚಮತ್ಕಾರ. ಈ ವಸತಿ ಸಮುಚ್ಚಯಕ್ಕೆ ‘ಅದ್ಭುತ ಪ್ರಯೋಗ’, ‘ಅದ್ಭುತ ವಾಸ್ತುಶಿಲ್ಪ’ ಎಂಬ ಶ್ರೇಯ ಸಂದಿದೆ. ಈ ಸಮುಚ್ಚಯದ ವಿನ್ಯಾಸಕ್ಕಾಗಿ ಸಫ್ದಿ ಅವರು ಹಲವು ಪ್ರಶಸ್ತಿಗಳನ್ನು ಪಡೆದರು.

ಕಟ್ಟಡದ ವಿಶೇಷ
* ಒಟ್ಟು 12 ಅಂತಸ್ತಿನ ಕಟ್ಟಡ.
* ಉದ್ಯಾನ, ಈಜುಕೊಳ, ಸೂಪರ್‌ ಮಾರ್ಕೆಟ್‌, ಶಾಲೆ, ಅಂಗನವಾಡಿ ಸೌಲಭ್ಯ.
* ಎಲ್ಲ ಘಟಕಗಳನ್ನು ಬಾಕ್ಸ್‌ಗಳಂತೆ ಬಿಡಿ ಭಾಗಗಳಾಗಿ ಪ್ರತ್ಯೇಕವಾಗಿ ನಿರ್ಮಿಸಿ, ನಂತರ ಒಗ್ಗೂಡಿಸಲಾಗಿದೆ.
* ಪ್ರತಿಯೊಂದು ಘಟಕದ ವಿನ್ಯಾಸ, ಗಾತ್ರ ಭಿನ್ನ.
* ಪ್ರತಿ ಮನೆಯ ಮೇಲೆ ಕಿರು ಉದ್ಯಾನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT