ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕನ್ ಚಿತ್ರಾನ್ನದಿಂದ ಗಿಝರ್ಡ್ ಬಿರಿಯಾನಿವರೆಗೆ...

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಚಿಕನ್ ಚಿತ್ರಾನ್ನ
ಬೇಕಾಗುವ ಸಾಮಗ್ರಿಗಳು:
ಅನ್ನ – 1/2ಕೆ.ಜಿ. (ಅಕ್ಕಿಯಿಂದ ತಯಾರಿಸಿದ್ದು), ಶುಂಠಿ – ಬೆಳ್ಳುಳ್ಳಿ ಪೇಸ್ಟ್‌ – 1ಚಮಚ, ಕೊತ್ತಂಬರಿ – ಸ್ವಲ್ಪ, ಪುದೀನಸೊಪ್ಪು – ಸ್ವಲ್ಪ, ಕರಿಬೇವು – 1ಕಡ್ಡಿ, ಹಸಿಮೆಣಸಿನಕಾಯಿ – 8, ಅರಿಶಿಣಪುಡಿ – ಸ್ವಲ್ಪ, ಖಾರದಪುಡಿ – ಸ್ವಲ್ಪ, ಕಾಳುಮೆಣಸಿನ ಪುಡಿ – 1/4ಚಮಚ, ಈರುಳ್ಳಿ – 4, ಟೊಮೆಟೊ – 4, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ

ತಯಾರಿಸುವ ವಿಧಾನ: ಈರುಳ್ಳಿ, ಟೊಮೆಟೊ, ಕೊತ್ತಂಬರಿ, ಪುದೀನ, ಕರಿಬೇವು, ಹಸಿಮೆಣಸಿನಕಾಯಿ ಹೆಚ್ಚಿಟ್ಟುಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಫ್ರೈ ಮಾಡಿ. ಆಮೇಲೆ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ. ಅದಕ್ಕೆ ಟೊಮೆಟೊ ಹಾಕಿ ರಸಬಿಡುವ ತನಕ ಫ್ರೈ ಮಾಡಿದ ಮೇಲೆ ಕೊತ್ತಂಬರಿ, ಪುದೀನ, ಗರಂಮಸಾಲೆ, ಪೆಪ್ಪರ್‌ಪುಡಿ, ಅರಿಶಿಣಪುಡಿ, ಖಾರದಪುಡಿ, ಚಿಕನ್ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿದ ನಂತರ ಅನ್ನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅನ್ನಕ್ಕೆ ಮಸಾಲೆ ಹಿಡಿಯುವ ತನಕ ಬೇಯಿಸಿ.

*

ಚಿಕನ್ ಟಿಕ್ಕ
ಬೇಕಾಗುವ ಸಾಮಗ್ರಿಗಳು:
ಚಿಕನ್‌ ತುಂಡುಗಳು – 1/2ಕೆಜಿ. (ಬೋನ್ ಲೆಸ್‌ ವಿಥ್ ಔಟ್ ಸ್ಕಿನ್), ಕಡಲೆಹಿಟ್ಟು – 2ಚಮಚ, ಖಾರದಪುಡಿ – 1ಚಮಚ, ಜೋಳದಹಿಟ್ಟು – ಸ್ವಲ್ಪ, ಶುಂಠಿ – ಬೆಳ್ಳುಳ್ಳಿ ಪೇಸ್ಟ್‌ – 1ಚಮಚ, ಗರಂಮಸಾಲೆ –ಸ್ವಲ್ಪ, ದನಿಯಾಪುಡಿ – ಸ್ವಲ್ಪ, ಈರುಳ್ಳಿ – 1, ಟೊಮೆಟೊ – 1, ಕೋಳಿಮೊಟ್ಟೆ – 1, ಉಪ್ಪು ರುಚಿಗೆ, ನಿಂಬೆಹಣ್ಣು –1

ತಯಾರಿಸುವ ವಿಧಾನ: ಕಡಲೆಹಿಟ್ಟು, ಗರಂಮಸಾಲೆ, ದನಿಯಾಪುಡಿ, ಖಾರದಪುಡಿ, ಜೋಳದಹಿಟ್ಟು, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಕೋಳಿಮೊಟ್ಟೆ, ಚಿಕನ್ ತುಂಡು, ಬೇಕೆಂದರೆ ಕೇಸರಿ ಬಣ್ಣ, ಉಪ್ಪನ್ನು ಹಾಕಿ ಕಲೆಸಿ ಎರಡು ಗಂಟೆ ಫ್ರಿಜ್‌ನಲ್ಲಿಡಿ. ಈರುಳ್ಳಿ, ಕ್ಯಾಪ್ಸಿಕಂಗಳನ್ನು ವೃತ್ತಾಕಾರವಾಗಿ ಕತ್ತರಿಸಿಟ್ಟುಕೊಳ್ಳಿ. ಫ್ರಿಜ್‌ನಿಂದ ತೆಗೆದ ತುಂಡುಗಳನ್ನು ಮತ್ತು ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂಗಳನ್ನು ಮಸಾಲೆಯಲ್ಲಿ ಅದ್ದಿ ಮಧ್ಯೆ ಈರುಳ್ಳಿ, ಕ್ಯಾಪ್ಸಿಕಂ ಬರುವಂತೆ ತಂತಿಗೆ ಚುಚ್ಚಿ ಮಸಾಲೆ ಕೆಳಗೆ ಬೀಳುವ ರೀತಿ ಮೇಲೆತ್ತಿ ಸ್ವಲ್ಪ ಸಮಯ ಹಿಡಿದುಕೊಳ್ಳಿ. ನಂತರ ಗ್ರಿಲ್ ಮೆಸ್‌ನ್ನು ಗ್ಯಾಸ್‌ಸ್ಟೋವ್ ಮೇಲಿಟ್ಟು ತುಂಡುಗಳಿರುವ ತಂತಿಯನ್ನು ಹದ ಉರಿಯಲ್ಲಿ ತಿರುಗಿಸುತ್ತಾ ಎಲ್ಲಾ ಕಡೆ ಬೇಯಿಸಿ. ಪ್ಲೇಟ್‌ಗೆ ಈರುಳ್ಳಿ, ಸೌತೆಕಾಯಿ ಕತ್ತರಿಸಿಟ್ಟು ನಿಂಬೆಹಣ್ಣಿನ ರಸವನ್ನು ಹಾಕಿ ತಿನ್ನಲು ಕೊಡಿ.

*


ಚಿಕನ್ ಚಾಪ್ಸ್
ಬೇಕಾಗುವ ಸಾಮಗ್ರಿಗಳು:
ಗಿರಿರಾಜಕೋಳಿ – 1/2ಕೆ.ಜಿ., ಶುಂಠಿಪೇಸ್ಟ್ – 1ಚಮಚ, ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಕೊತ್ತಂಬರಿ ಸ್ವಲ್ಪ, ಪುದೀನ ಸೊಪ್ಪು – ಸ್ವಲ್ಪ, ದನಿಯಾಪುಡಿ – 2ಚಮಚ, ಹಸಿಮೆಣಸಿನಕಾಯಿ – 8, ಅರಿಶಿಣಪುಡಿ – ಸ್ವಲ್ಪ, ಪೆಪ್ಪರ್‌ಪುಡಿ – 1ಚಮಚ, ಗರಂಮಸಾಲೆ – 1ಚಮಚ, ಖಾರದಪುಡಿ – ಸ್ವಲ್ಪ, ಈರುಳ್ಳಿ – 4, ಟೊಮೆಟೊ – 1, ಕಾಯಿ – 1/2ಹೋಳು, ಸಾಸಿವೆ, ವಿನಿಗರ್ – 1ಚಮಚ, ಎಣ್ಣೆ, ತುಪ್ಪ (ಡಾಲ್ಡಾ), ಉಪ್ಪು.

ತಯಾರಿಸುವ ವಿಧಾನ: ಈರುಳ್ಳಿ, ಕೊತ್ತಂಬರಿ, ಪುದೀನ, ಅರಿಶಿಣಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪೆಪ್ಪರ್‌ಪುಡಿ, ಕಾಯಿ, ಗರಂಮಸಾಲೆ, ಹಸಿಮೆಣಸಿನಕಾಯಿ, ಖಾರದಪುಡಿ, ಟೊಮೆಟೊ, ದನಿಯಾಪುಡಿ, ಕಡಿಮೆ ನೀರು ಹಾಕಿ ದಪ್ಪದಪ್ಪವಾಗ್ಗಿ ರುಬ್ಬಿಟ್ಟುಕೊಳ್ಳಿ.

ಕುಕ್ಕರ್‌ಗೆ ಎಣ್ಣೆ ಮತ್ತು ತುಪ್ಪ (ಡಾಲ್ಡಾ) ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಚೆನ್ನಾಗಿ ತೊಳೆದ ಚಿಕನ್ ಮತ್ತು ಉಪ್ಪನ್ನು ಹಾಕಿ ಚಿಕನ್‌ಗೆ ಉಪ್ಪು ಹಿಡಿಯುವಂತೆ ಸ್ವಲ್ಪ ಬೇಯಿಸಿ. ನಂತರ ರುಬ್ಬಿದ ಮಿಶ್ರಣ, ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಹಾಕಿ ಚೆನ್ನಾಗಿ ಬೇಯಿಸಿ, ಬೆಂದ ನಂತರ ವಿನಿಗರ್ ಹಾಕಿ. ಖಾರ ಕಡಿಮೆ ಇದ್ದರೆ ಖಾರದಪುಡಿಯನ್ನು ಉದುರಿಸಿ ಕೊಂಚ ಬೇಯಿಸಿ.

*


ಚಿಕನ್ ಗಿಝರ್ಡ್ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು:
ಚಿಕನ್ ಗಿಝರ್ಡ್ – 1/2ಕೆ.ಜಿ., ಸೋನಾಮಸೂರಿ ಅಕ್ಕಿ – 1/2ಕೆ.ಜಿ., ಶುಂಠಿ - ಬೆಳ್ಳುಳ್ಳಿ ಪೇಸ್ಟ್ – 2ಚಮಚ, ಬೆಳ್ಳುಳ್ಳಿ ಎಸಳು – 10, ಕೊತ್ತಂಬರಿ – ಸ್ವಲ್ಪ, ಪುದೀನಸೊಪ್ಪು – ಸ್ವಲ್ಪ, ಕಾಳುಮೆಣಸು – 6, ಏಲಕ್ಕಿ – 2, ಲವಂಗ – 6, ಚಕ್ಕೆ – 4ಚಿಕ್ಕ ತುಂಡುಗಳು, ಜಾಯಿಕಾಯಿ ಪುಡಿ – ಸ್ವಲ್ಪ, ಈರುಳ್ಳಿ – 3, ಟೊಮೆಟೊ – 3, ಹಸಿಮೆಣಸಿನಕಾಯಿ – 6, ನಿಂಬೆಹಣ್ಣು – 1, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಈರುಳ್ಳಿ 2, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ, ಪುದೀನ ರುಬ್ಬಿಟ್ಟುಕೊಳ್ಳಿ. ಈರುಳ್ಳಿ 1, ಟೊಮೆಟೊ, ಕೊತ್ತಂಬರಿ, ಹಸಿಮೆಣಸಿನಕಾಯಿಯನ್ನು ಕತ್ತರಿಸಿಟ್ಟುಕೊಳ್ಳಿ. ಕುಕ್ಕರ್‌ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಮೆಣಸಿನಕಾಯಿ, ಈರುಳ್ಳಿ, ಜಜ್ಜಿದ ಬೆಳ್ಳುಳ್ಳಿ, ಲವಂಗ, ಚಕ್ಕೆ, ಕಾಳುಮೆಣಸು, ಏಲಕ್ಕಿ, ಜಾಯಿಕಾಯಿ ಪುಡಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಟೊಮೆಟೊ, ಕೊತ್ತಂಬರಿ ಹಾಕಿ ತದನಂತರ ತೊಳೆದ ಚಿಕನ್ ಗಿಝರ್ಡ್, ಉಪ್ಪನ್ನು ಸೇರಿಸಿ. ನಂತರ ರುಬ್ಬಿದ ಮಿಶ್ರಣವನ್ನು ಬೆರೆಸಿ ಸ್ವಲ್ಪ ಸಮಯ ಬೇಯಿಸಿದ ತರುವಾಯ ಸ್ವಲ್ಪ ನೀರನ್ನು ಹಾಕಿ, ತೊಳೆದ ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿ ನೋಡಿ. ಕಡಿಮೆಯಿದ್ದನ್ನು ಸೇರಿಸಿ ಕುಕ್ಕರ್ ಮುಚ್ಚಳ ಮುಚ್ಚಿ. ಬೆಂದ ನಂತರ ಬೇಕೆಂದರೆ ನಿಂಬೆರಸವನ್ನು ಬೆರೆಸಿಕೊಳ್ಳಿ.

*


-ಎಂ.ಎಸ್. ಧರ್ಮೇಂದ್ರ, ದೊಡ್ಡಮಗ್ಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT