7

ಕಾವೇರಿ ತಾಲ್ಲೂಕು ರಚನೆಗೆ ಆಗ್ರಹ

Published:
Updated:
ಕಾವೇರಿ ತಾಲ್ಲೂಕು ರಚನೆಗೆ ಆಗ್ರಹ

ಕುಶಾಲನಗರ: ಕುಶಾಲನಗರ ಪಟ್ಟಣವನ್ನು ಕೇಂದ್ರವಾಗಿರಿಸಿಕೊಂಡು ನೂತನ ಕಾವೇರಿ ತಾಲ್ಲೂಕು ರಚನೆಗೆ ಮಾಡಬೇಕು ಆಗ್ರಹಿಸಿ ನಡೆಯುತ್ತಿರುವ ಎರಡನೇ ಹಂತದ ಹೋರಾಟದಲ್ಲಿ ಸರದಿ ಪ್ರತಿಭಟನೆ ಶುಕ್ರವಾರ 6ನೇ ದಿನ ಪೂರೈಸಿದೆ.

ಕುಶಾಲನಗರ ವ್ಯಾಪ್ತಿಯ 16 ಮಸೀದಿಗಳಿಗೆ ಸೇರಿದ ಮುಸ್ಲಿಮ್ ಒಕ್ಕೂಟದ ಸದಸ್ಯರು ಪಾಲ್ಗೊಂಡಿದ್ದರು. ಶ್ರೀ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು ತಾಲ್ಲೂಕು ರಚನೆ ಪರ ಘೋಷಣೆಗಳನ್ನು ಕೂಗಿದರು.

ಶುಕ್ರವಾರ ಮಸೀದಿಗಳಲ್ಲಿ ಮಧ್ಯಾಹ್ನ ವಿಶೇಷ ಪ್ರಾರ್ಥನೆ ಮಾಡಿದ ಮುಸ್ಲಿಂ ಸಮುದಾಯದವರು ನಂತರ ಎಲ್ಲರೂ ಒಟ್ಟಿಗೆ ಸೇರಿ ಪಟ್ಟಣದ ಬಿಎಂ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ರಸ್ತೆ ತಡೆ ನಡೆಸಿ ಕಾವೇರಿ ತಾಲ್ಲೂಕು ಪರ ಘೋಷಣೆಗಳನ್ನು ಕೂಗಿದರು. ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಅಹಿಂದ ಒಕ್ಕೂಟದ ಅಧ್ಯಕ್ಷ ಎಂ.ಕೆ ಹಮೀದ್, ಪಿ.ಕೆ. ಅಬ್ದುಲ್ ಕರೀಮ್ ಮಾತನಾಡಿ ಕಾವೇರಿ ತಾಲ್ಲೂಕು ನಮ್ಮ ಜನ್ಮಸಿದ್ಧ ಹಕ್ಕು ಪಡೆಯುವವರೆಗೂ ಹೋರಾಟವನ್ನು ಮುಂದೂವರೆಸುವುದಾಗಿ ಘೋಷಣೆ ಮಾಡಿದರು.

ಜಾಮೀಯ ಮಸೀದಿ ಕಾರ್ಯದರ್ಶಿ ತನ್ವಿರ್ ಅಹಮ್ಮದ್, ಹಿಲಾಲ್ ಮಸೀದಿ ಅಧ್ಯಕ್ಷ ಇ.ಎಸ್.ಹಲೀಮ್, ತಕ್ವಾ ಮಸೀದಿ ಅಧ್ಯಕ್ಷ ಆಸೀಪ್, ನೂರ್ ಮಸೀದಿ ಅಧ್ಯಕ್ಷ ತಹಿರ್ ಹುಸೇನ್, ಜನತಾ ಕಾಲೋನಿ ಮಸೀದಿ ಅಧ್ಯಕ್ಷ ಮುಜೀಬ್, 7ನೇ ಹೊಸಕೋಟೆ ಮಸೀದಿ ಅಧ್ಯಕ್ಷ ರಝಾಕ್, ಕೂಡಿಗೆ ಮಸೀದಿ ಅಧ್ಯಕ್ಷ ರಜಾಖ್, ಬಾಳುಗೋಡು ಮಸೀದಿ ಅಧ್ಯಕ್ಷ ಅಬ್ದುಲ್ಲಾ, ನಂಜರಾಯಪ್ಪಣ ಮಸೀದಿ ಅಧ್ಯಕ್ಷ ರಫೀಕ್, ವಾಲ್ನೂರು ತ್ಯಾಗತ್ತೂರು ಮಸೀದಿ ಅಧ್ಯಕ್ಷ

ಅಬ್ದುಲ್ಲಾ, 40 ಎಕರೆ ಮಸೀದಿ ಅಧ್ಯಕ್ಷ ಬೀರನ್ ಕುಟ್ಟಿ, ಹೋರಾಟ ಸಮಿತಿ ಕೆ.ಎಸ್. ಮಹೇಶ್, ಎಂ.ವಿ. ನಾರಾಯಣ, ಅಬ್ದುಲ್ ಖಾದರ್ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry