4

‘ಮಕ್ಕಳನ್ನು ಗ್ರಂಥಾಲಯದತ್ತ ಆಕರ್ಷಿಸಿ’

Published:
Updated:
‘ಮಕ್ಕಳನ್ನು ಗ್ರಂಥಾಲಯದತ್ತ ಆಕರ್ಷಿಸಿ’

ಮಾಗಡಿ: ಮಕ್ಕಳಿಗೆ ಗ್ರಂಥಾಲಯದ ಪುಸ್ತಕಗಳ ಪರಿಚಯ ಮಾಡಿಸುವ ಅಗತ್ಯವಿದೆ ಎಂದು ತಾಲ್ಲೂಕು ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ದೊಡ್ಡಬಾಣಗೆರೆ ಮಾರಣ್ಣ ತಿಳಿಸಿದರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಶಿಕ್ಷಕಿ ಮಾಧವಿ ಜತ್ತಕರ ಮಾತನಾಡಿ ಮಕ್ಕಳನ್ನು ಗ್ರಂಥಾಲಯದತ್ತ ಕರೆದೊಯ್ಯುವ ಕೆಲಸ ಆಗಬೇಕಿದೆ ಎಂದರು. ಶಿಕ್ಷಕಿ ರೇಖಾ ಮಾತನಾಡಿ ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರತರಲು ಮಾರ್ಗದರ್ಶನ ಮಾಡಬೇಕು ಎಂದರು.

ಶಿಕ್ಷಕಿ ವರಲಕ್ಷ್ಮೀ ಮಾತನಾಡಿದರು, ಗ್ರಂಥಾಲಯದ ಅಧಿಕಾರಿ ಮಹದೇವ ಸ್ವಾಮಿ ಅಧ್ಯಕ್ಷತೆವಹಿಸಿದ್ದರು, ಗ್ರಂಥಪಾಲಕಿ ಚಂದ್ರಕಲ, ಶಿವಲಿಂಗಯ್ಯ, ಸುಜಾತಮ್ಮ, ವೆಂಕಟೇಶ್‌ ಹಾಗೂ ಪಟ್ಟಣದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚಿತ್ರಕಲೆ: ಚಿತ್ರಕಲಾ ಸ್ಪರ್ಧೆಯಲ್ಲಿ ರಂಗನಾಥ ಸ್ವಾಮಿ ಪ್ರೌಢಶಾಲೆಯ ಉಮೇಶ್‌.ಜಿ.(ಪ್ರಥಮ), ಸರ್ಕಾರಿ ಕಿರಿಯ ಕಾಲೇಜಿನ ಮೆಲ್ಕ್‌ ಸಾಧಿಕ್‌ (ದ್ವಿತೀಯ), ಜಿಜೆಸಿಯ ಲಕ್ಷ್ಮೀ(ತೃತೀಯ) ಬಹುಮಾನ ಗಳಿಸಿದ್ದಾರೆ.

ಜನಪದ ಗೀತಾ ಗಾಯನ: ಜನಪದ ಗೀತಗಾಯನ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯ ನಂದೀಶ್‌,ಕೆ.(ಪ್ರಥಮ), ಅಶ್ವಥ ನಾರಾಯಣ ಶೆಟ್ಟಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಚೇತನ್‌.ಜಿ,(ದ್ವಿತೀಯ), ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮೇಘರಾಣಿ (ತೃತೀಯ) ಬಹುಮಾನ ಗಳಿಸಿದ್ದಾರೆ.

ಭಾವಗೀತೆ: ಭಾವಗೀತೆ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾಮಂದಿರದ ಅನುಪಮ (ಪ್ರಥಮ), ಶ್ರೀಗಂಗಾಧರೇಶ್ವರ ಪ್ರೌಢಶಾಲೆಯ ನೇತ್ರಾ (ದ್ವಿತೀಯ), ರಂಗನಾಥ ಸ್ವಾಮಿ ಪ್ರೌಢಶಾಲೆಯ ಅಪರ್ಣಾ (ತೃತೀಯ) ಬಹುಮಾನ ಗಳಿಸಿದ್ದಾರೆ.

ಪ್ರಬಂಧ: ಪ್ರಬಂಧ ಸ್ಪರ್ಧೆಯಲ್ಲಿ ಬಿ.ಜಿ,ಎಸ್‌,ಪದವಿ ಪೂರ್ವ ಕಾಲೇಜಿನ ರವಿಕುಮಾರ್‌ .ಜೆ.ಕೆ (ಪ್ರಥಮ), ಅದೇ ಕಾಲೇಜಿನ ಹರೀಶ್‌,ಎನ್‌. (ದ್ವಿತೀಯ) ಬಹುಮಾನ ಪಡೆದರು. ಸರ್ಕಾರಿ ಬಾಲಕಿಯರ ಮಾದರಿ ಶಾಲೆಯ ಉದಯ್‌ ಕುಮಾರ್‌ ಉತ್ತಮ ಓದುಗ ಪ್ರಶಸ್ಥಿ ಗಳಿಸಿದ್ದಾರೆ ಎಂದು ಗ್ರಂಥಾಲಯ ಅಧಿಕಾರಿ ಮಹದೇವ ಸ್ವಾಮಿ ತಿಳಿಸಿದರು.

ಸಮಾರೋಪ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ ನವೆಂಬರ್‌ 18ರಂದು ಬೆಳಿಗ್ಗೆ 11.45ಕ್ಕೆ ಗ್ರಂಥಾಲಯದ ಆವರಣದಲ್ಲಿ ನಡೆಯಲಿದೆ, ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ದಿವ್ಯಗಂಗಾಧರ್‌ ಸಮಾರೋಪ ಭಾಷಣ ಮಾಡಲಿದ್ದಾರೆ, ಜಿಲ್ಲಾ ಗ್ರಂಥಾಲಯ ಅಧಿಕಾರಿ ಚನ್ನಕೇಶವ,ಎಚ್‌.ಆರ್‌.ಅಧ್ಯಕ್ಷತೆ ವಹಿಸಲಿದ್ದಾರೆ.

ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್‌.ಮಂಜುನಾಥ್‌, ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಡಿ.ರಾಮಚಂದ್ರಯ್ಯ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ನಾಗೇಶ್‌ ಮತ್ತು ಓದುಗರು ಭಾಗವಹಿಸಲಿದ್ದಾರೆ ಎಂದು ಗ್ರಂಥಾಲಯ ಅಧಿಕಾರಿ ಮಹದೇವ ಸ್ವಾಮಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry