7

ಆ್ಯಷಸ್‌ ಸರಣಿ ಪ್ರತಿಷ್ಠೆಯ ಹಣಾಹಣಿ

Published:
Updated:
ಆ್ಯಷಸ್‌ ಸರಣಿ ಪ್ರತಿಷ್ಠೆಯ ಹಣಾಹಣಿ

ಆ್ಯಷಸ್‌ ಸರಣಿಗೆ ವಿಶಿಷ್ಠ ಪರಂಪರೆ ಇದೆ. ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ತಂಡಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವ ಈ ಸರಣಿಯನ್ನು ಕ್ರಿಕೆಟ್‌ ಲೋಕ ಸೂಕ್ಷ್ಮವಾಗಿ ಗಮನಿಸುತ್ತದೆ.

ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಸರಣಿ ಒಂದೊಮ್ಮೆ ಸಮಬಲವಾದರೆ ಹಾಲಿ ಚಾಂಪಿಯನ್ನರ ಬಳಿಯೇ ಟ್ರೋಫಿ ಉಳಿಯಲಿದೆ. ಇದುವರೆಗೂ ಉಭಯ ತಂಡಗಳು ತಲಾ 32 ಬಾರಿ ಪ್ರಶಸ್ತಿ ಜಯಿಸಿವೆ. 70ನೇ ಸರಣಿ ನವೆಂಬರ್‌ 23ರಂದು ಶುರುವಾಗಲಿದೆ. ಈ ಬಾರಿ ಕಾಂಗರೂಗಳ ನಾಡು ಸರಣಿಗೆ ಆತಿಥ್ಯ ವಹಿಸಲಿದೆ. 2015ರಲ್ಲಿ ಇಂಗ್ಲೆಂಡ್‌ ಚಾಂಪಿಯನ್‌ ಆಗಿತ್ತು. ಈ ತಂಡ ಹಿಂದಿನ ಐದು ಸರಣಿಗಳ ಪೈಕಿ ನಾಲ್ಕರಲ್ಲಿ ಗೆದ್ದು ಆಧಿಪತ್ಯ ಸಾಧಿಸಿದೆ.

***

ಏನಿದು ಆ್ಯಷಸ್‌

1882ರ ಆಗಸ್ಟ್‌ನಲ್ಲಿ ಇಂಗ್ಲೆಂಡ್ ತಂಡ ತವರಿನ ನೆಲದಲ್ಲಿ ಮೊದಲ ಬಾರಿ ಆಸ್ಟ್ರೇಲಿಯಾ ಎದುರು ಸರಣಿ ಸೋತಿತ್ತು. ಆಗ ದಿ ಸ್ಪೋರ್ಟಿಂಗ್‌ ಟೈಮ್ಸ್‌ ಪತ್ರಿಕೆ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌ ಸತ್ತುಹೋಗಿದೆ ಎಂದು ‘ನಿಧನ ವಾರ್ತೆ’ ಪ್ರಕಟಿಸಿತ್ತು. `ಇಂಗ್ಲೆಂಡ್ ಕ್ರಿಕೆಟ್‌ನ ಅಂತ್ಯಕ್ರಿಯೆ ನಡೆದಿದ್ದು , ಚಿತಾಭಸ್ಮವನ್ನು ಆಸ್ಟ್ರೇಲಿಯಾಕ್ಕೆ ಕೊಂಡೊಯ್ಯಲಾಗಿದೆ' ಎಂದು ಪತ್ರಿಕೆ ಬರೆದಿತ್ತು. ಬಳಿಕ ಇಂಗ್ಲೆಂಡ್‌ ತಂಡ ಕಾಂಗರೂ ನಾಡಿನ ಪ್ರವಾಸ ಕೈಗೊಂಡಿತ್ತು.

ಆ ಸರಣಿಯ ಮೂರು ಪಂದ್ಯಗಳ ಪೈಕಿ ಇಂಗ್ಲೆಂಡ್‌ ಎರಡರಲ್ಲಿ ಗೆದ್ದಿದ್ದು. ಆಗ ನಾಯಕ ಇವೊ ಬ್ಲಿಗ್‌ಗೆ ಮೆಲ್ಬರ್ನ್‌ನ ಮಹಿಳೆಯರ ಗುಂಪು ಪುಟ್ಟ ‘ಬೂದಿಗಡಿಗೆ’ ನೀಡಿತ್ತು. ಈಗಲೂ ಇದನ್ನು ಆ್ಯಷಸ್ ಸರಣಿಗೆ ಮುನ್ನ ಉಭಯ ತಂಡಗಳ ಆಟಗಾರರು ಅನಾವರಣಗೊಳಿಸುತ್ತಾರೆ. ಅದು ಸರಣಿಯ`ಲಾಂಛನ' ಎನಿಸಿಬಿಟ್ಟಿದೆ. ವಿಶೇಷವೆಂದರೆ ಆ ಬೂದಿಗಡಿಗೆ ಸರಣಿಯ ಅಧಿಕೃತ ಟ್ರೋಫಿ ಅಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry