6

ಕಲಿಕೆ ಆಗಬೇಕು ವಿದ್ಯಾರ್ಥಿಕೇಂದ್ರಿತ

Published:
Updated:
ಕಲಿಕೆ ಆಗಬೇಕು ವಿದ್ಯಾರ್ಥಿಕೇಂದ್ರಿತ

ಇಂದು ಶಿಕ್ಷಣ ಪದ್ಧತಿಯು ಶಿಕ್ಷಕ ಕೇಂದ್ರೀಕೃತ ಕಲಿಸುವಿಕೆಯಿಂದ (Teachers’ Centric Teaching) ವಿದ್ಯಾರ್ಥಿ ಕೇಂದ್ರೀಕೃತ ಕಲಿಯುವಿಕೆಗೆ (Students’ Centric * earning) ಬದಲಾವಣೆ ಹೊಂದಬೇಕಾಗಿದೆ. ನಮ್ಮ ದೇಶದಲ್ಲಿ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಗಳಿಗಾಗಿ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದಕ್ಕೆ ಮಾತ್ರ ಸೀಮಿತವಾಗಿವೆ. ಇದರಿಂದ ವಿದ್ಯಾರ್ಥಿಗಳು ನಿಜವಾದ ಜ್ಞಾನದಿಂದ ವಂಚಿತರಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ಸಂಶೋಧನೆ  ಹಾಗೂ ಬೆಳವಣಿಗೆಗೆ ನಮ್ಮ ಈ ಶಿಕ್ಷಣ ಪದ್ಧತಿಯೇ ಮಾರಕವಾಗಿದೆ. ಮೂಲತತ್ವಗಳನ್ನು (Fundamenta* Princip* es) ತಿಳಿದುಕೊಂಡಾಗ ಮಾತ್ರ ನಾವು ಅನ್ವೇಷಣೆ/ಸಂಶೋಧನೆಗಳನ್ನು ಮಾಡಬಹುದು.

ಇಂದು ಕೆನಡಾ, ಯು.ಎಸ್.ಎ., ಯುರೋಪ್‌ ಮುಂತಾದವು ಮುಂದುವರೆದ ರಾಷ್ಟ್ರಗಳ ಸ್ಥಾನವನ್ನು ಪಡೆಯಲು ಅಲ್ಲಿಯ ಶಿಕ್ಷಣ ಪದ್ಧತಿಯೇ ಕಾರಣ. ಉದಾಹರಣೆಗೆ, ಯುರೋಪ್‌ನಲ್ಲಿ ಫಿನ್ಲೆಂಡ್‌ ಒಂದು ಪುಟ್ಟ ದೇಶ. ಇದರ ಜನಸಂಖ್ಯೆ ಸುಮಾರು 55 ಲಕ್ಷ. ರಾಜಧಾನಿ ಹೆಲಸಿಂಕಿ (He* sinki). ಈ ದೇಶದ ಸಾಕ್ಷರತೆಯ ಪ್ರಮಾಣ ಶೇ.100ರಷ್ಟು. ಈ ದೇಶದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡಿ ಶಿಕ್ಷಣ ಪದ್ಧತಿಯ ಬಗ್ಗೆ ಚರ್ಚಿಸುತ್ತಾರೆ. ವಿವಿಧ ದೇಶಗಳ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ ತಮ್ಮ ದೇಶದಲ್ಲಿ ಶಿಕ್ಷಣ ಪದ್ಧತಿಯು ಹೇಗೆ ಇರಬೇಕೆಂಬ ನಿಯಮಗಳನ್ನು ರೂಪಿಸುತ್ತಾರೆ ಹಾಗೂ ಸರ್ಕಾರದ ಮೇಲೆ ಒತ್ತಡವನ್ನು ಹೇರುತ್ತಾರೆ.

ಕೆಲವೊಂದು ನಿಯಮಗಳು ಇಂತಿವೆ:

* ಪ್ರತಿಯೊಬ್ಬ ಶಿಕ್ಷಕನು ಉನ್ನತ ಮಟ್ಟದ ಪದವಿಯ ಜೊತೆಗೆ ಕಲಿಕಾ ಕೌಶಲ (Pedagogica* Ski* * s) ಹಾಗೂ ಸಾಮರ್ಥ್ಯದ ಜೊತೆಗೆ ವಿಷಯಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿರಬೇಕು.

* ಪ್ರತಿಯೊಂದು ಶಿಕ್ಷಣ ಸಂಸ್ಥೆ ಸ್ವಾಯತ್ತತೆಯನ್ನು (Autonomy) ಹೊಂದಿರಬೇಕು.

* ಪ್ರತಿಯೊಬ್ಬ ಶಿಕ್ಷಕನು ತನ್ನ ಬೋಧನಾ ವಿಷಯಗಳ ಪಠ್ಯಕ್ರಮ ತಯಾರಿಸುವಲ್ಲಿ ಹಾಗೂ ವಿದ್ಯಾರ್ಥಿಗಳ ಮೌಲ್ಯಮಾಪನದಲ್ಲಿ (Eva* uation) ಪರಿಣತಿಯನ್ನು ಹೊಂದಿರಬೇಕು.

* ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ಶೈಕ್ಷಣಿಕ ಸ್ವಾಯತ್ತತೆ (Academic Autonomy), ಹಣಕಾಸಿನ ಸ್ವಾಯತ್ತತೆ (Financia* Autonomy) ಹಾಗೂ ಆಡಳಿತಾತ್ಮಕ ಸ್ವಾಯತ್ತತೆ (Administrative Autonomy) ಹೊಂದಿರಬೇಕು.

ಫಿನ್ಲೆಂಡ್‌ನಲ್ಲಿ ಎಲ್ಲ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಗೆ ಹೋಗುತ್ತಾರೆ. ಇಲ್ಲಿಯ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಮೌಲ್ಯಮಾಪನವನ್ನು ತಾವೇ ಮಾಡಿಕೊಳ್ಳುವಷ್ಟು (Se* f-Assessments) ಪ್ರಬುದ್ಧರಾಗಿದ್ದಾರೆ. ಇಲ್ಲಿನ ಶಿಕ್ಷಕರು ಜೀವನಪರ‍್ಯಂತ ಕಲಿಕೆಯನ್ನು ಅಳವಡಿಸಿಕೊಂಡಿರುವುದರಿಂದ ಅಲ್ಲಿನ ಶಿಕ್ಷಣ ಪದ್ಧತಿಯು ಎಲ್ಲ ದೇಶಗಳಿಗೂ ಮಾದರಿಯಾಗಿದೆ.

ಗಣೇಶ ಮಸಣಯ್ಯಗಳ ಪುಣ್ಯಸ್ತ್ರೀವಚನವೊಂದು ಹೀಗಿದೆ:

ನಿನ್ನನರಿಸದಿರುವೆ

ಎನ್ನನರಿಸು ನಿನ್ನನರಿಯಿಸಬೇಡ

ಎನ್ನನರಿಯದವ ನಿನ್ನನರಿಯ

ಎನ್ನನರಿಯಿಸದೆ ನಿನ್ನನರಿಯಿಸಿದಡೆ

ನೀ ನನಗೆ ಗುರುವಲ್ಲ; ನಾ ನಿನಗೆ ಶಿಷ್ಯನಲ್ಲ

ಎನ್ನನರಿಯಿಸಿದಡೆ ನೀ

ನನಗೆ ಗುರು; ನಾ ನಿನಗೆ ಶಿಷ್ಯ

ಮಸಣಯ್ಯ ಪ್ರಿಯ ಗುಹೇಶ್ವರಾ.

ತನ್ನ ಅರಿವೆ  ತನಗೆ ಗುರು ಎನ್ನುತ್ತದೆ, ಶರಣಧರ್ಮ. ಶಿಷ್ಯನಲ್ಲಿ ಇರುವ ಪ್ರತಿಭೆ,  ಸಾಮರ್ಥ್ಯ, ಕೌಶಲ, ಮನೋಭಾವ – ಇವುಗಳನ್ನು ಗುರ್ತಿಸಿ, ಅವುಗಳಿಗೆ ಸೂಕ್ತ ಅವಕಾಶಗಳನ್ನು ತಿಳಿಸಿಕೊಡುವದು ಶಿಕ್ಷಕನ ಕರ್ತವ್ಯವಾಗಿದೆ. ಇಂದಿನ ಶಿಕ್ಷಕನಿಗೆ ವಿದ್ಯಾರ್ಥಿಗಳ ‘ಪ್ರತಿಭಾ ನಿರ್ವಹಣೆ’ (Managing Ta* ent) ಒಂದು ದೊಡ್ಡ ಸವಾಲಾಗಿದೆ. ಇಂದು ಶಿಕ್ಷಕನು ವಿದ್ಯಾರ್ಥಿಗಳ ಬೇಕಾದ ಸಂಪನ್ಮೂಲ ಹಾಗೂ ಸೌಲಭ್ಯಗಳನ್ನು ಹೊಂದಿಸಿಕೊಡುವವ ಆಗಿರಬೇಕು.

ಹೆಚ್ಚು ಕಲಿಕೆ ಆಗುವುದು ಉಪನ್ಯಾಸ ಕೊಠಡಿಯ ಆಚೆಗೆ.  ಅಮೆರಿಕ, ಕೆನಡಾ, ಇಂಗ್ಲೆಂಡ್‌ಗಳಲ್ಲಿ ಕ್ಲಾಸ್‌ರೂಮುಗಳು ಸೆಮಿನಾರ್ ಹಾಲ್ ತರಹ ಇದ್ದು, ಗುಂಪು ಚರ್ಚೆಗೆ ಅವಕಾಶ ಮಾಡಿಕೊಡುತ್ತವೆ. ಅಲ್ಲಿಯ ಕೆಲವೊಂದು ಕಲಿಕಾ ವಿಧಾನಗಳು ಹೀಗಿವೆ:

* ಕಲಿಕಾ ವಿಧಾನಗಳು (Mode* s of * earning)

ಉಪನ್ಯಾಸ ಕೊಠಡಿಯಲ್ಲಿ ಶಿಕ್ಷಕ-ವಿದ್ಯಾರ್ಥಿ ಮಧ್ಯ ಸಂವಾದ (Interaction)

* ವಿದ್ಯಾರ್ಥಿಗಳ ಸಮಾನ ಗುಂಪುಗಳ ಮಧ್ಯ ಪರಸ್ಪರ ಸಂವಾದ (Peer Group Interaction)

* ವಿದ್ಯಾರ್ಥಿಗಳಿಗೆ ಸಣ್ಣ, ದೊಡ್ಡ ಯೋಜನೆಗಳನ್ನು ಸ್ವಯಂ ಮಾಡಲು ಅವಕಾಶವನ್ನು ಕಲ್ಪಿಸುವುದು.

* ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯಮಿಕ ಇನ್ನಿತರ ಸಮಸ್ಯೆಗಳ ಅಧ್ಯಯನ (Case Study)

* ಒಂದುಗೂಡಿ ಕಲಿಯುವುದು

* ವಿಷಯ ಪರಿಣತರಿಂದ ವಿಷಯಗಳ ಮೇಲೆ ಉಪನ್ಯಾಸ  (Re-treat)

* ವಿಷಯದ ಅನುಗುಣವಾಗಿ ವಿವಿಧ ಕ್ಷೇತ್ರಗಳಿಗೆ ಭೇಟಿ ಹಾಗೂ ಅಧ್ಯಯನ (Fie* d Visit and Study)

* ವಿದ್ಯಾರ್ಥಿಗಳಿಂದ ವಿವಿಧ ವಿಷಯಗಳ ಮೇಲೆ ಪ್ರಬಂಧ ಮಂಡನೆ (Seminars)

ಪ್ರತಿಯೊಂದು ವಿದ್ಯಾಸಂಸ್ಥೆಗಳಲ್ಲಿ ಕಲಿಕಾ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿ Wa* * Charts, Mode* s, Fi* ms ನಕ್ಷೆಗಳು, ಮಾದರಿಗಳು, ಚಲನಚಿತ್ರ ಮುಂತಾದವುಗಳ ತಯಾರಿಕೆ ಹಾಗೂ ಐಸಿಟಿ (Information Communication Techno* ogy) ಅಳವಡಿಸುವುದು.

ಜಿಲ್ಲೆಗೊಂದರಂತೆ ‘ಸೈನ್ಸ್‌ ಪಾರ್ಕ್‌’  ಸ್ಥಾಪಿಸಿ ಪ್ರತಿಯೊಂದು ಸ್ಕೂಲ್‌-ಕಾಲೇಜ್ ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶ ಕಲ್ಪಿಸುವುದು.

* ವೆಬ್‌ಸೈಟ್ ಬ್ರೌಸಿಂಗ್

* ವಾಣಿಜ್ಯ, ಉದ್ದಿಮೆಗಳಲ್ಲಿ ಸೂಕ್ತ ತರಬೇತಿ

ಇಂದು, ನಾವು ಶಿಕ್ಷಣವನ್ನು ವಿದ್ಯಾರ್ಥಿ ದೃಷ್ಟಿಕೋನದಿಂದ ನೋಡಬೇಕೇ ವಿನಾ ಶಿಕ್ಷಕ, ಶಿಕ್ಷಣ ಸಂಸ್ಥೆ, ಶಿಕ್ಷಣ ಇಲಾಖೆ ಹಾಗೂ ವಿಶ್ವವಿದ್ಯಾಲಯಗಳ ದೃಷ್ಟಿಯಿಂದ ಅಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry