ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 21–11–1967

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹರಿಯಾಣಾಕ್ಕೆ ರಾಷ್ಟ್ರಪತಿ ಆಳ್ವಿಕೆ ಇಂದು ತುರ್ತು ಘೋಷಣೆ
ದೆಹಲಿ, ನ. 20–
ಹರಿಯಾಣಾದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಲು ಕೇಂದ್ರ ಸರ್ಕಾರ ಇಂದು ನಿರ್ಧರಿಸಿತು. ನಾಳೆ ತುರ್ತು ಘೋಷಣೆ ಹೊರಬೀಳಲಿದೆ.

ಹರಿಯಾಣಾದಲ್ಲಿ ರಾಜಕೀಯ ಪಕ್ಷನಿಷ್ಠೆಗಳು ಪದೇ ಪದೇ ಬದಲಾವಣೆಯಾಗಿ ಸುಭದ್ರ ಆಡಳಿತವಿಲ್ಲದಿರುವ ಬಗ್ಗೆ ರಾಜ್ಯಪಾಲ ಶ್ರೀ ಡಿ.ಎನ್. ಚಕ್ರವರ್ತಿಯವರ ವರದಿ ಪರಿಶೀಲನೆ ನಂತರ ಅವರ ಶಿಫಾರಸಿನ ಮೇರೆಗೆ ಈ ಸಂಜೆ ಕೇಂದ್ರ ಸಂಪುಟ ಈ ನಿರ್ಧಾರವನ್ನು ಕೈಗೊಂಡಿತು.

ಬೆಂಗಳೂರಿಗೊಬ್ಬಳು ಜಪಾನಿ ಸೋದರಿ
ಬೆಂಗಳೂರು, ನ. 20–
ಬೆಂಗಳೂರನ್ನು ಸೋದರಿ ನಗರವಾಗಿ ದತ್ತು ಸ್ವೀಕಾರ ಮಾಡಿಕೊಳ್ಳಲು ಜಪಾನಿನ ಶಿಮಿಸುನಗರದ ಮೇಯರ್ ಇಚ್ಛಿಸಿದ್ದಾರೆ. ಉದ್ದೇಶ ಸಾಂಸ್ಕೃತಿಕ ವಿನಿಮಯ.

‘ಈ ಸಂಬಂಧದಲ್ಲಿ ಸದ್ಯದಲ್ಲೇ ಮೇಯರ್ ಅವರು ಮೈಸೂರು ಸರ್ಕಾರಕ್ಕೆ ಪತ್ರ ಬರೆಯಲಿದ್ದಾರೆ’ ಎಂದು ಟೋಕಿಯೋದಿಂದ ಇಂದು ನಗರಕ್ಕೆ ಮರಳಿದ ಸಂಪರ್ಕ ವಿಭಾಗದ ಮುಖ್ಯ ಎಂಜಿನಿಯರ್ ಶ್ರಿ ಕೆ. ಬಸಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT